ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮಧ್ಯೆ ಗಿಡ ನೆಟ್ಟು ಆಕ್ರೋಶ

Last Updated 27 ಮೇ 2017, 6:13 IST
ಅಕ್ಷರ ಗಾತ್ರ

ಚಾಮರಾಜನಗರ: ಮಳೆ ಬಂದಾಗ ಕೆಸರುಮಯವಾಗುವ ರಸ್ತೆಯ ಮೇಲೆ ಗಿಡಗಳನ್ನು ನೆಟ್ಟು ಇಲ್ಲಿನ ಭ್ರಮರಾಂಬ ಬಡಾವಣೆಯ 2ನೇ ಅಡ್ಡರಸ್ತೆಯ ನಿವಾಸಿ ಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮೀಪದ ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಿಡಗಳನ್ನು ಬೆಳಿಗ್ಗೆ ಏಳು ಗಂಟೆಗೆ ಕಿತ್ತು ತಂದು ರಸ್ತೆಯಲ್ಲಿ ನೆಟ್ಟ ಸ್ಥಳೀಯರು, ‘ನ್ಯಾಯ ಬೇಕು’ ಎಂಬ ಫಲಕವನ್ನು ಇರಿಸಿದರು. ನಗರದ ಹೃದಯಭಾಗದಲ್ಲಿಯೇ ಇರುವ ಬಡಾವಣೆಯಲ್ಲಿ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ಬಂದರೆ ರಸ್ತೆ ಕೆಸರು ಮಯ ವಾಗುತ್ತದೆ. ಇಲ್ಲಿ ಓಡಾಡುವುದೇ ದುಸ್ತರ. ಕೆಲವರು ಕಾಲುಜಾರಿ ಬಿದ್ದಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ವಾರ್ಡ್‌ ಸದಸ್ಯರಿಗೆ ದೂರಿ ದರೆ ಉಡಾಫೆತನ ಪ್ರದರ್ಶಿಸು ತ್ತಾರೆ. ಹೀಗಾಗಿ ರಸ್ತೆಯಲ್ಲಿ ಗಿಡಗಳನ್ನು ನೆಟ್ಟಿ ದ್ದೇವೆ’ ಎಂದು ಸ್ಥಳೀಯರಾದ ಲಕ್ಷ್ಮಿ ಮಹೇಶ್‌ ತಿಳಿಸಿದರು.

‘ಈ ರಸ್ತೆಗೆ ಅಂಟಿಕೊಂಡಂತೆಯೇ ಪೌರಾಯುಕ್ತರ ಮನೆ ಇದೆ. ಅವರಿಗೆ ಈ ಸಮಸ್ಯೆ ಕಣ್ಣಿಗೆ ಕಾಣಿಸುತ್ತಿಲ್ಲವೇ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತ ಪಡಿ ಸಿದರು. ರಸ್ತೆ ಬದಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದ್ದ ಚರಂಡಿಯನ್ನೂ ಮಣ್ಣು ಹಾಕಿ ಮುಚ್ಚಿದ್ದಾರೆ. ಮಳೆ ಬಂದರೆ ಕೊಳಚೆ ನೀರು ಮನೆಗೆ ನುಗ್ಗುತ್ತದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮನೆಯೊಳಗೆ ಹಾವು, ಹಲ್ಲಿಗಳೂ ನುಗ್ಗುತ್ತಿವೆ. ಇಲ್ಲಿ ಬದುಕುವುದೇ ಅಸಹನೀಯವಾಗಿದೆ ಎಂದು ಅವರು ಹೇಳಿದರು.

ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ನಗರಸಭೆ ಸಿಬ್ಬಂದಿ ಗಿಡಗಳನ್ನು ತೆಗೆದು ಹಾಕಿದರು.ನಗರಸಭೆ ನೀರಲ್ಲೂ ಕೊಳೆ: ನಗರ ಸಭೆ ಯಿಂದ ಬರುವ ಕುಡಿಯುವ ನೀರನ್ನು ಇಲ್ಲಿನ ಜನ ಸ್ನಾನ ಮತ್ತು ಪಾತ್ರೆ ತೊಳೆ ಯಲು ಬಳಸುತ್ತಿದ್ದಾರೆ.

ಕುಡಿಯಲು ಮತ್ತು ಅಡುಗೆಗೆ ಕೆಲವರು ನೆರೆಹೊರೆಯವರ ಕೊಳವೆ ಬಾವಿಯ ನೀರನ್ನು ಅವಲಂಬಿಸಬೇಕಾ ಗಿದೆ. ಚೆನ್ನಾಗಿ ನೀರು ಬರುತ್ತಿದ್ದ ಎರಡು ಕೊಳವೆಬಾವಿಗಳನ್ನು ವರ್ಷದ ಹಿಂದೆ ನಗರಸಭೆಯವರು ಮುಚ್ಚಿಸಿದರು. ಈಗ ನೀರಿಗಾಗಿ ಪರಿತಪಿಸಬೇಕಾಗಿದೆ ಎಂದು ಸ್ಥಳೀಯರು ದೂರಿದರು.

ಭ್ರಮರಾಂಬ ಬಡಾವಣೆಯ ಪಕ್ಕ ದಲ್ಲಿಯೇ ಇರುವ ಶಂಕರಪುರ ಬಡಾ ವಣೆಯಲ್ಲಿಯೂ ಇದೇ ಸಮಸ್ಯೆ ಇದೆ. ನಗರಸಭೆಯ ನೀರು ಬರುವ ತೊಟ್ಟಿ ಯನ್ನು ಏಳೆಂಟು ತಿಂಗಳಿನಿಂದ ತೆರೆ ಯಲು ಹೋಗಿಲ್ಲ. ದುರ್ಗಂಧಯುಕ್ತ ಚರಂಡಿ ನೀರು ಅದರಲ್ಲಿ ಬರುತ್ತಿದೆ ಎಂದು ಜನರು ಆರೋಪಿಸಿದರು.

‘ನಗರಸಭೆ ಬಿಡುವ ನೀರಿಗೆ ಡೆಟಾಲ್‌ ಬೆರೆಸಿ ಸ್ನಾನ ಮಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ಹಣಕೊಟ್ಟು ತರುವ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದೇವೆ’ ಎಂದು ಶಂಕರಪುರ ಬಡಾವಣೆಯ ರೇಖಾ ಮುರಳೀಧರ್‌ ತಿಳಿಸಿದರು.

‘ಅನುಮತಿಗೆ ಕಾಯುತ್ತಿದ್ದೇವೆ’
‘ಈ ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಸಮಸ್ಯೆ ಇದೆ. ಅದನ್ನು ಸರಿಪಡಿಸಲು ಟೆಂಡರ್‌ ಕರೆಯಲು ಪ್ರಸ್ತಾವನೆ ಕಳುಹಿಸ ಲಾಗಿದೆ. ಅದರ ಅನುಮೋದನೆಗೆ ಕಾಯುತ್ತಿ ದ್ದೇವೆ’ ಎಂದು ಪೌರಾಯುಕ್ತ ಎಂ.ರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

* *

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಕೊಳವೆಮಾರ್ಗ ದಲ್ಲಿ ತೊಂದರೆ ಉಂಟಾಗಿ ಕೊಳಚೆ ನೀರು ಬರುವಂತಾಗಿತ್ತು. ಈಗ ಶುದ್ಧ ನೀರು ಪೂರೈಸಲಾಗುತ್ತಿದೆ
ಎಂ.ರಾಜಣ್ಣ ಪೌರಾಯುಕ್ತ

* * 

ನಗರಸಭೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಆ ನೀರನ್ನು ನಾವು ಸ್ನಾನಕ್ಕೆ ಮತ್ತು ಪಾತ್ರೆ ತೊಳೆಯಲು ಬಳಸುತ್ತಿದ್ದೇವೆ
ಸುಂದ್ರಮ್ಮ ಭ್ರಮರಾಂಬ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT