ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ಚಿತ್ರ ವೀಕ್ಷಣೆ ಪತ್ನಿಯಿಂದಾಗಿ ತಪ್ಪಿತು: ವೀರೂ

Last Updated 27 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಜೀವನ ಆಧಾರಿತ ‘ ಸಚಿನ್; ಎ ಬಿಲಿಯನ್ ಡ್ರೀಮ್ಸ್‌’  ಸಿನಿಮಾವನ್ನು ವೀರೇಂದ್ರ ಸೆಹ್ವಾಗ್ ಅವರು ದುಡ್ಡು ಖರ್ಚು ಮಾಡಿ ವೀಕ್ಷಿಸಲಿದ್ದಾರಂತೆ. ಅದಕ್ಕೆ ಕಾರಣ ಅವರ ಪತ್ನಿಯಂತೆ!

ಸಚಿನ್ ಅವರು ಕ್ರಿಕೆಟ್ ತಂಡದ ಆಟಗಾರರಿಗಾಗಿ ಗುರುವಾರ ಏರ್ಪಡಿಸಿದ್ದ   ಪ್ರೀಮಿಯರ್ ಪ್ರದರ್ಶನಕ್ಕೆ ಸೆಹ್ವಾಗ್ ಗೈರು ಹಾಜರಾಗಿದ್ದರು. ಅದಕ್ಕಾಗಿ ಸಚಿನ್ ಅವರ ಕ್ಷಮೆ ಕೇಳುವ ಧಾಟಿಯಲ್ಲಿ  ಸಂದೇಶವನ್ನು ಸೆಹ್ವಾಗ್ ಟ್ವೀಟ್‌ನಲ್ಲಿ ಹಾಕಿದ್ದಾರೆ. ಈ ಹಾಸ್ಯಭರಿತ ಸಂದೇಶವು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಚಿತ್ರವೀಕ್ಷಣೆಗೆ ಸಚಿನ್ ಆಹ್ವಾನ ನೀಡಿದ್ದರು. ಆದರೆ, ಪತ್ನಿಯು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದರಿಂದ ಸಿನಿಮಾ ನೋಡಲು ಹೋಗಲಿಲ್ಲ.  ದೇವರಿಗೆ (ಸಚಿನ್)ಪ್ರಸಾದ ಅರ್ಪಿಸಿ ಓಲೈಸಬಹುದು. ಆದರೆ ಹೆಂಡತಿಯನ್ನು ಓಲೈಸುವುದು ಕಷ್ಟವಲ್ಲವೇ?’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT