ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಾಗಲಿವೆ ಯುಜಿಸಿ, ಎಐಸಿಟಿಇ ಶೀಘ್ರವೇ ನಿಯಂತ್ರಣ ಸಂಸ್ಥೆ?

Last Updated 7 ಜೂನ್ 2017, 19:23 IST
ಅಕ್ಷರ ಗಾತ್ರ

ನವದೆಹಲಿ:  ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಇತಿಹಾಸದ ಪುಟ ಸೇರುವ ದಿನಗಳು ಸನಿಹವಾಗಿವೆ.

ಈ ಎರಡೂ ಸಂಸ್ಥೆಗಳನ್ನು ರದ್ದುಪಡಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಅವುಗಳಿಗೆ ಬದಲಿಯಾಗಿ ಉನ್ನತ ಶಿಕ್ಷಣ ಸಬಲೀಕರಣ ನಿಯಂತ್ರಣ ಸಂಸ್ಥೆಯನ್ನು (ಎಚ್ಇಇಆರ್ಎ) ಶೀಘ್ರದಲ್ಲಿಯೇ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ. 

ಈ ಸಂಬಂಧ ನೀತಿ ಆಯೋಗದ ಜತೆ ಕಾರ್ಯ ನಿರ್ವಹಿಸುತ್ತಿರುವ ಮಾನವ ಸಂಪನ್ಮೂಲ ಇಲಾಖೆಯು (ಎಚ್‌ಆರ್‌ಡಿ) ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳನ್ನು ಒಂದೇ ವ್ಯವಸ್ಥೆಯಡಿ ತರಲು ಉದ್ದೇಶಿಸಿದೆ. ಉದ್ದೇಶಿತ ಸಂಸ್ಥೆಯ ರಚನೆ ಮತ್ತು ಅದಕ್ಕೆ ಕಾನೂನುಬದ್ಧವಾಗಿ ನೀಡುವ ಅಧಿಕಾರ ಕುರಿತು ವಿಸ್ತೃತ ಯೋಜನಾ ವರದಿ ಮತ್ತು ನೀಲ ನಕ್ಷೆಯನ್ನು ಸಚಿವಾಲಯ ಸಿದ್ಧತಪಡಿಸಿದೆ.

ಪ್ರಸ್ತುತ ಯುಜಿಸಿ ಹಾಗೂ ಎಐಸಿಟಿಇಗಳಲ್ಲಿ ಹಲವಾರು ನಿಯಮಗಳು ಜಾರಿಯಲ್ಲಿವೆ.  ದೇಶದಾದ್ಯಂತ ಉನ್ನತ ಶಿಕ್ಷಣಕ್ಕೆ ಏಕಸ್ವರೂಪದ ನಿಯಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT