ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

1) ಭಾರತೀಯ ಸಂವಿಧಾನದ ಅನುಚ್ಛೇದ-52, ಅನುಚ್ಛೇದ-56, ಅನುಚ್ಛೇದ-60, ಅನುಚ್ಛೇದ-62 ಏನನ್ನು ತಿಳಿಸುತ್ತವೆ?
a)
  ರಾಷ್ಟ್ರಪತಿಯನ್ನು ಕುರಿತಂತೆ 
b) ಪ್ರಧಾನಮಂತ್ರಿಯನ್ನು ಕುರಿತಂತೆ
c) ಸಂಸತ್ತನ್ನು ಕುರಿತಂತೆ   
d) ರಾಜ್ಯಗಳನ್ನು ಕುರಿತಂತೆ

2)  ಈ ಕೆಳಕಂಡ ಕರ್ನಾಟಕದ ಯಾವ ವ್ಯಕ್ತಿ ಸಂವಿಧಾನದ ರಚನಾ ಸಭೆಯಲ್ಲಿ ಪ್ರತಿನಿಧಿಯಾಗಿದ್ದರು?
a)
ಬಿ. ಡಿ. ಜತ್ತಿ   
b) ಎಸ್. ಬಂಗಾರಪ್ಪ               
c) ಎಸ್. ನಿಜಲಿಂಗಪ್ಪ
d) ಎಚ್. ಡಿ. ದೇವೇಗೌಡ

3) ಸಂವಿಧಾನವು ರಾಷ್ಟ್ರಪತಿಯವರಿಗೆ ಇಲ್ಲಿರುವ ಯಾವ ಮಾದರಿಯ ತುರ್ತುಪರಿಸ್ಥಿಯನ್ನು ಘೋಷಿಸುವ ಅಧಿಕಾರ ನೀಡಿದೆ?
a) ರಾಷ್ಟ್ರೀಯ ತುರ್ತುಪರಿಸ್ಥಿತಿ 
b) ರಾಜ್ಯ ತುರ್ತುಪರಿಸ್ಥಿತಿ
c) ಆರ್ಥಿಕ ತುರ್ತುಪರಿಸ್ಥಿತಿ
d) ಮೇಲಿನ ಎಲ್ಲವೂ

4) ಭಾರತದ ಪ್ರಜೆಯೊಬ್ಬರು ಉಪರಾಷ್ಟ್ರಪತಿಯಾಗಲು ಎಷ್ಟು ವರ್ಷ ವಯಸ್ಸಾಗಿರ ಬೇಕು?
a)
18 ವರ್ಷ 
b) 21 ವರ್ಷ
c) 35 ವರ್ಷ
d) 37 ವರ್ಷ

5) ಭಾರತದ ರಾಷ್ಟ್ರಪತಿಗಳು ಲೋಕಸಭೆಗೆ ಎಷ್ಟು ಜನರ ಸದಸ್ಯರನ್ನು ನಾಮಕರಣ ಮಾಡುವ ಅಧಿಕಾರವನ್ನು ಹೊಂದಿದ್ದಾರೆ?
a)
ಇಬ್ಬರು ಸದಸ್ಯರು  
b) ಐದು ಸದಸ್ಯರು
c) ಏಳು ಸದಸ್ಯರು     
d) ಹತ್ತು ಸದಸ್ಯರು  

6) ಈ ಕೆಳಕಂಡವರಲ್ಲಿ ಭಾರತದ ಮೊದಲ ಮತ್ತು ಮೂರನೇ ರಾಷ್ಟ್ರಪತಿಯನ್ನು ಗುರುತಿಸಿ?
a)
ಡಾ. ಬಾಬು ರಾಜೇಂದ್ರ ಪ್ರಸಾದ್-ಡಾ. ಎಸ್. ರಾಧಾಕೃಷ್ಣ  
b) ಡಾ. ಬಾಬು ರಾಜೇಂದ್ರ ಪ್ರಸಾದ್-ಡಾ. ಝಾಕೀರ್ ಹುಸೇನ್
c) ಡಾ. ಎಸ್. ರಾಧಕೃಷ್ಣ – ವಿ.ವಿ. ಗಿರಿ 
d) ಡಾ. ಬಾಬು ರಾಜೇಂದ್ರ ಪ್ರಸಾದ್-ವಿ.ವಿ. ಗಿರಿ

7) ಪ್ರಸ್ತುತ ಅಧಿಕಾರದಲ್ಲಿರುವ ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಯಾವ ವರ್ಷ ಉಪರಾಷ್ಟ್ರಪತಿಯಾದರು?
a)
2005ನೇ ವರ್ಷ  
b) 2006ನೇ ವರ್ಷ
c)  2007ನೇ ವರ್ಷ
d) 2008ನೇ ವರ್ಷ

8) 1977 ಮಾರ್ಚ್ 26ರಿಂದ 1977 ಜುಲೈ 13ರ ವರೆಗೆ ಯಾರು ಲೋಕಸಭೆಯ ಸ್ಪೀಕರ್ ಆಗಿದ್ದರು?
a)
ಜಿ.ವಿ. ಮಾವಳಂಕರ್ 
b) ಬಿ.ಆರ್. ಭಗತ್
c) ಕೆ.ಎಸ್. ಹೆಗಡೆ
d) ನೀಲಂ ಸಂಜೀವ ರೆಡ್ಡಿ

9) ಭಾರತೀಯ ಸಂಸತ್ತಿನಲ್ಲಿ ರಾಜ್ಯ ಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
a)
ರಾಷ್ಟ್ರಪತಿ 
b) ಉಪ ರಾಷ್ಟ್ರಪತಿ
c) ಪ್ರಧಾನಮಂತ್ರಿ
d) ಸ್ಪೀಕರ್

10) ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸ ರಾಜ್ಯವನ್ನು ರೂಪಿಸುವ ಸಂವಿಧಾನಿಕ ಅಧಿಕಾರ ಇರುವುದು………..?
a)
ರಾಷ್ಟ್ರಪತಿಗಳಿಗೆ 
b) ಸಂಸತ್ತಿಗೆ   
c) ಪ್ರಧಾನಮಂತ್ರಿಗೆ   
d) ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷರಿಗೆ

***
ಉತ್ತರಗಳು
1-a, 2-c, 3-d, 4-c, 5-a, 6-b, 7- c, 8-d, 9-b, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT