, ನಾಡಿನ ವಿವಿಧೆಡೆ ನಡೆದ ಯೋಗ ದಿನ | ಪ್ರಜಾವಾಣಿ
ಬೆಂಗಳೂರು

ನಾಡಿನ ವಿವಿಧೆಡೆ ನಡೆದ ಯೋಗ ದಿನ

‘ಎಂಬತ್ತು ವರ್ಷದಲ್ಲೂ ನನ್ನ ಹೋರಾಟದ ಉತ್ಸಾಹ ಕಡಿಮೆ ಆಗಿಲ್ಲ. ಇದಕ್ಕೆ ಯೋಗಾಭ್ಯಾಸವೇ ಕಾರಣ. ಯೋಗ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು’ - ಅಣ್ಣಾ ಹಜಾರೆ

ನಾಡಿನ ವಿವಿಧೆಡೆ ನಡೆದ ಯೋಗ ದಿನ

ಬೆಂಗಳೂರು: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾಡಿನ ವಿವಿಧೆಡೆ ಬುಧವಾರ ಯೋಗಾಸನ ಪ್ರದರ್ಶನ ಕಾರ್ಯಕ್ರಮಗಳು ನಡೆದವು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭಾಗವಹಿಸಿದ್ದರು.

‘ಎಂಬತ್ತು ವರ್ಷದಲ್ಲೂ ನನ್ನ ಹೋರಾಟದ ಉತ್ಸಾಹ ಕಡಿಮೆ ಆಗಿಲ್ಲ. ಇದಕ್ಕೆ ಯೋಗಾಭ್ಯಾಸವೇ ಕಾರಣ. ಯೋಗ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು’ ಎಂದು ಅಣ್ಣಾ ಹಜಾರೆ ಒತ್ತಾಯಿಸಿದರು.

‘ಯೋಗ ಯಾವುದೇ ಧರ್ಮ ಅಥವಾ ಜಾತಿಗೆ ಸೀಮಿತ ಅಲ್ಲ. ಯಾರೂ ಅದನ್ನು ಜಹಗೀರ್ ಮಾಡಿಕೊಳ್ಳಬಾರದು’ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.

ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಯೋಗಾಭ್ಯಾಸ ಹಾಗೂ ಯೋಗ ಪ್ರಾತ್ಯಕ್ಷಿಕೆ ನಡೆಯಿತು. 900ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ತಪೋವನ ಸೇರಿದಂತೆ ಹಲವೆಡೆ ಯೋಗ ದಿನ ಆಚರಿಸಲಾಯಿತು.

ದಾವಣಗೆರೆಯ ಮೋತಿ ವೀರಪ್ಪ ಹೈಸ್ಕೂಲ್ ಮೈದಾನದಲ್ಲಿ ಸಂತೋಷ್ ಗುರೂಜಿ ಅವರಿಂದ ಯೋಗದ ಬಗ್ಗೆ ಉಪನ್ಯಾಸ ನಡೆಯಿತು. ನಂತರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.

ಕಾರವಾರದ ದೈವಜ್ಞ ಭವನದಲ್ಲಿ ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಮಾಡಿದರು.

ಶಿರಸಿಯ ಟಿಎಸ್ಎಸ್ ಸೇಲ್ ಯಾರ್ಡ್‌ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಚಿತ್ರದುರ್ಗದ ಹಳೆಯ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಯೋಗ ದಿನಾಚರಣೆ ನಡೆಯಿತು.

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತಿ ಹಂಗಾಮಿ ಅಧ್ಯಕ್ಷೆ ಪಿ. ದೀನಾ, ಜಿಲ್ಲಾಧಿಕಾರಿ ರಾಮಪ್ರಸಾದ್ ‌ಮನೋಹರ್‌ ನೇತೃತ್ವದಲ್ಲಿ ಯೋಗ ದಿನದ ಕಾರ್ಯಕ್ರಮ ನಡೆಯಿತು.

ರಾಮನಗರದಲ್ಲಿ ಜಿಲ್ಲಾಡಳಿತ  ಮತ್ತು ಪತಂಜಲಿ ಯೋಗ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಚರಿಸಲಾಯಿತು.

ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ರೇಸ್ ಕೋರ್ಸ್‌ನಲ್ಲಿ ಗಿನ್ನಿಸ್ ದಾಖಲೆಗಾಗಿ 60 ಸಾವಿರ ಜನರಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.


ಮೈಸೂರಿನಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ

ಕಲಬುರ್ಗಿಯ ಡಿಎಆರ್ ಮೈದಾನದಲ್ಲಿ ಆಯುಷ್ ಇಲಾಖೆಯು ಆಯೋಜಿಸಿರುವ ಯೋಗ ದಿನಾಚರಣೆಯಲ್ಲಿ ಸರ್ಕಾರಿ ನೌಕರರು, ಸಾರ್ವಜನಿಕರು ಭಾಗವಹಿಸಿದ್ದರು.
ನಗರದ ಶಾಲಾ-ಕಾಲೇಜು, ಜಿಲ್ಲಾ ವಿಜ್ಞಾನ ಕೇಂದ್ರ ಸೇರಿದಂತೆ ಹಲವೆಡೆ ಯೋಗ ದಿನವನ್ನು ಆಚರಿಸಲಾಯಿತು.

ಬೆಳಗಾವಿಯ ಗಾಂಧಿ ಭವನದಲ್ಲಿ ನಡೆದ ನಡೆದ ಯೋಗ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿದ್ದರು.

ಯಾದಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿದರು.

ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.

ಚಿಕ್ಕಮಗಳೂರು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಯೋಗಾಭ್ಯಾಸ ನಡೆಯಿತು.

ಹೊಸಪೇಟೆ ಸಮೀಪದ ಹಂಪಿಯಲ್ಲಿ ಯೋಗ ದಿನ ಆಚರಿಸಲಾಯಿತು.

ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ಎಸ್.ಎಂ. ಚಂದ್ರಶೇಖರ್ ಅವರು ಯೋಗಾಸನ ಮಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

ಮಂಡ್ಯ
ವೈರಲ್ ವಿಡಿಯೊ: ಮಾಜಿ ಶಾಸಕ ಶಿವರಾಮೇಗೌಡ ಪುತ್ರಿ ವಿವಾಹದ ವಿಡಿಯೊ ಆಮಂತ್ರಣ

23 Nov, 2017
‘ಪದ್ಮಾವತಿ’ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ತಲವಾರ ಹಿಡಿದು ರಜಪೂತರ ಮೆರವಣಿಗೆ: 8 ಜನರ ಬಂಧನ

ಕಲಬುರ್ಗಿ
‘ಪದ್ಮಾವತಿ’ ಚಿತ್ರ ನಿಷೇಧಕ್ಕೆ ಒತ್ತಾಯಿಸಿ ತಲವಾರ ಹಿಡಿದು ರಜಪೂತರ ಮೆರವಣಿಗೆ: 8 ಜನರ ಬಂಧನ

23 Nov, 2017
ಟ್ರೋಲ್‌ ಗೂಂಡಾಗಿರಿ ವಿರುದ್ಧ #Justasking ಅಭಿಯಾನ: ಪ್ರಕಾಶ್‌ ರಾಜ್‌

ಬೆಂಗಳೂರು
ಟ್ರೋಲ್‌ ಗೂಂಡಾಗಿರಿ ವಿರುದ್ಧ #Justasking ಅಭಿಯಾನ: ಪ್ರಕಾಶ್‌ ರಾಜ್‌

23 Nov, 2017
ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ್ ಕೋಟಿ ನಿಧನ

ಆಂದೋಲನ ದಿನ ಪತ್ರಿಕೆ
ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ್ ಕೋಟಿ ನಿಧನ

23 Nov, 2017

ಬೆಂಗಳೂರು
ಕಬ್ಬು: ₹3,500 ದರ ನಿಗದಿಗೆ ಆಗ್ರಹ

‘ಒಂದು ಕೆ.ಜಿ ಸಕ್ಕರೆ ₹ 42ಕ್ಕೆ ಮಾರಾಟವಾಗುತ್ತಿದೆ. ಆದರೂ ಕಬ್ಬಿಗೆ ಸೂಕ್ತ ಬೆಲೆ ನೀಡದೆ ರಾಜ್ಯ ಸರ್ಕಾರ ಕಾರ್ಖಾನೆ ಮಾಲೀಕರ ಹಿತಕಾಯುತ್ತಿದೆ. ಇದರಿಂದ ರೈತರಿಗೆ...

23 Nov, 2017