ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐನಲ್ಲಿ ಹಳೆಯ ನೋಟು ಜಮೆ ಮಾಡಲು ಬ್ಯಾಂಕ್‌ಗಳಿಗೆ ಅವಕಾಶ: ಜು.20 ಕೊನೇ ದಿನ

Last Updated 21 ಜೂನ್ 2017, 10:11 IST
ಅಕ್ಷರ ಗಾತ್ರ

ನವದೆಹಲಿ: ನೋಟು ಅಪಮೌಲ್ಯೀಕರಣದ ನಂತರ ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಸಂಗ್ರಹಿಸಲಾಗಿರುವ ಹಳೆಯ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಜಮೆ ಮಾಡಲು ಸರ್ಕಾರ ಅನುಮತಿ ನೀಡಿದೆ.

ಆರ್‌ಬಿಐನಲ್ಲಿ ಹಳೆಯ ನೋಟುಗಳ ಠೇವಣಿಗೆ ಬ್ಯಾಂಕ್‌, ಅಂಚೆ ಕಚೇರಿ ಹಾಗೂ ಸಹಕಾರಿ ಬ್ಯಾಂಕ್‌ಗಳಿಗೆ ಸರ್ಕಾರ ಎರಡನೇ ಬಾರಿ  ಅವಕಾಶ ಕಲ್ಪಿಸಿದೆ. ನೋಟು ಅಪಮೌಲ್ಯೀಕರಣಗೊಂಡು 50 ದಿನಗಳ ನಂತರ ಡಿ.31ರಂದು ಮೊದಲ ಬಾರಿಗೆ ಹಳೆಯ ನೋಟು ಜಮೆಗೆ ಅವಕಾಶ ನೀಡಲಾಗಿತ್ತು.

ಜುಲೈ 20ರೊಳಗೆ ಹಳೆಯ ನೋಟುಗಳನ್ನು ಆರ್‌ಬಿಐನಲ್ಲಿ ಜಮೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಪ್ಪು ಹಣ ಹಾಗೂ ಖೋಟಾ ನೋಟು ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ 2016ರ ನವೆಂಬರ್‌ 8ರಂದು ₹500, ₹1000 ಮುಖಬೆಲೆ ನೋಟುಗಳನ್ನು ಅಪಮೌಲ್ಯೀಕರಿಸಿ ಆದೇಶಿಸಿತ್ತು.

ನೋಟು ಅಪಮೌಲ್ಯೀಕರಣಕ್ಕೂ ಮುನ್ನ ದೇಶದಲ್ಲಿ ₹17.7 ಲಕ್ಷ ಕೋಟಿ ಮೌಲ್ಯದ ₹500, ₹1000 ಮುಖಬೆಲೆ ನೋಟುಗಳು ಚಲಾವಣೆಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT