ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಮೆಟ್ರೊ’ದಲ್ಲಿ ಅನಗತ್ಯ ಹಿಂದಿ: ಮೆಟ್ರೊ ನಿಗಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೋಟಿಸ್‌

Last Updated 22 ಜೂನ್ 2017, 10:52 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಅನವಶ್ಯಕವಾಗಿ ಹಿಂದಿ ಹೇರಲಾಗುತ್ತದೆ ಎಂಬ ಬಗ್ಗೆ ಕಾರಣ ಕೇಳಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲ ಅವರಿಗೆ ಬುಧವಾರ ನೋಟಿಸ್‌ ಜಾರಿ ಮಾಡಿದೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ನಮ್ಮ ಮೆಟ್ರೊದಲ್ಲಿ ಅನವಶ್ಯಕ ಹಿಂದಿ ಬೇಡ: ಟ್ವಿಟರ್‌ ಅಭಿಯಾನ’ ವರದಿಯನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.


ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ನೋಟಿಸ್‌

‘ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಬೇಕು. ಆದರೆ, ‘ನಮ್ಮ ಮೆಟ್ರೊ’ದ ನಾಮಫಲಕಗಳಲ್ಲಿ ಅನವಶ್ಯಕವಾಗಿ ಹಿಂದಿ ಭಾಷೆ ಬಳಸಿರುವುದು ಕಂಡುಬಂದಿದೆ. ಇದು ಸರ್ಕಾರದ ಸುತ್ತೋಲೆ ಸಂಖ್ಯೆ: ಡಿಪಿಎಆರ್‌ 8 ಪಿಒಎಲ್‌ 93, ದಿನಾಂಕ: 10.2.1982, ಸುತ್ತೋಲೆ ಸಂಖ್ಯೆ: ಡಿಪಿಎಆರ್‌ 29 ಕೆಒಎಲ್‌ 2000, ದಿನಾಂಕ: 11.4.2000, ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 238 ಎಲ್‌ಇಟಿ 2008 (ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ– ನಾಮಫಲಕಗಳು) ಹಾಗೂ ಕೇಂದ್ರ ಗೃಹ  ಸಚಿವಾಲಯದ ಪತ್ರ ಸಂಖ್ಯೆ: 12–18/95/ಆರ್‌ಐಓ ದಿನಾಂಕ: 6.2.1995ರ ಸ್ಪಷ್ಟ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಮೊಟ್ರೊದ ಈ ನಡವಳಿಕೆ ಅನಗತ್ಯ ಹಿಂದಿ ಹೇರಿಕೆಯ ಕ್ರಮವಾಗಿದೆ. ಈ ಬಗ್ಗೆ ನೋಟಿಸ್‌ ತಲುಪಿದ 7 ದಿನಗಳ ಒಳಗಾಗಿ ಪ್ರಾಧಿಕಾರಕ್ಕೆ ಸಮಜಾಯಿಷಿ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್‌.ಜಿ. ಸಿದ್ಧರಾಮಯ್ಯ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಇವನ್ನೂ ಓದಿ...
‌ನಮ್ಮ ಮೆಟ್ರೊದಲ್ಲಿ ಅನವಶ್ಯಕ ಹಿಂದಿ ಬೇಡ: ಟ್ವಿಟರ್‌ ಅಭಿಯಾನ

ನಮ್ಮ ಮೆಟ್ರೊದಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ವಾಟಾಳ್ 'ಕಿರಿಕ್' ಮಾಡಿಲ್ಲ ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT