ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರ ಕಾಡು’ ಮರಗಳ ಮಾರಣ ಹೋಮ

Last Updated 24 ಜೂನ್ 2017, 9:46 IST
ಅಕ್ಷರ ಗಾತ್ರ

ಪುತ್ತೂರು: ಪುತ್ತೂರು ಹಾಗೂ ಸುಳ್ಯ ತಾಲ್ಲೂಕಿನ ಬಹು ಭಾಗಗಳಲ್ಲಿ ನಿರಂತರ ವಾಗಿ ಮರಗಳ ಕಳವು ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಯಾವುದೇ ಗೋಜಿಗೆ ಹೋಗದೇ ಮೌನವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಸುಳ್ಯ ತಾಲ್ಲೂಕಿನ ಎಡಮಂಗಲ ಗ್ರಾಮದ ಮುರುಳ್ಯ ಸಮೀಪದ ಕೇರ್ಪಳ ಮಹಿಷಮರ್ಧಿನಿ ದೇವಾಲಯದ ದೇವರ ಕಾಡಿನಲ್ಲಿ ಹಾಡಹಗಲೇ ಮರಗಳನ್ನು ಕಡಿಯುವ ಕೃತ್ಯವು ನಡೆಯುತ್ತಿದೆ.

ದೇವಾಲಯದ ವಠಾರದಲ್ಲಿರುವ ‘ದೇವರ ಕಾಡು’ ಎಂಬ ನಂಬಿಕೆ ಇರುವ ಕಾಡಿನಿಂದಲೇ ಈಚೆಗೆ ₹15 ರಿಂದ ₹20 ಲಕ್ಷ ಮೌಲ್ಯದ ಮರ ಕಡಿದು ಸಾಗಿಸ ಲಾಗಿದೆ. ದೇವರ ಕಾಡಿನಿಂದ ದೇವಳದ ಬ್ರಹ್ಮಕಲಶೋತ್ಸವಕ್ಕೂ ಒಂದು ಮರ ಕಡಿದಿರಲಿಲ್ಲ. ಅಂತಹ ಕಾಡು ಇದೀಗ ಸಂಪೂರ್ಣ ನಾಶವಾಗಿರುವುದು ಇಲ್ಲಿನ ಭಕ್ತ ವೃಂದದ ಆಕ್ರೋಶಕ್ಕೆ ಕಾರಣವಾಗಿದೆ.

ಮರದ ಕೊಂಬೆ ಕಡಿದರೆ ಓಡಿ ಬರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಡುಹಗಲಿನಲ್ಲಿಯೇ ರಾಜಾರೋಷವಾಗಿ ಮರಗಳ್ಳರು ಇಲ್ಲಿನ ಕಾಡಿನ ಮರಗಳನ್ನು ಕಡಿದು ಸಾಗಿಸಿದ್ದರೂ  ಇಲಾಖೆ ಅಧಿಕಾರಿಗಳು ಬಾರದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.  

ಅರಣ್ಯ ಇಲಾಖೆ ಅಧಿಕಾರಿಗಳ ಭಯ ಇಲ್ಲದೇ ಹಗಲಿನಲ್ಲಿಯೇ ಹಿಟಾಚಿ, ಜೆಸಿಬಿ, ಟಿಪ್ಪರ್ ಹಾಗೂ ಲಾರಿ ಬಳಸಿದ ಮರಗಳ್ಳರು ತಂಡ ಈ ದೇವರ ಕಾಡಿನ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ಮಾಡಿದ್ದು, ಮರಗಳ ಅವಶೇಷ ಗಳು ಮಾತ್ರ ಉಳಿದುಕೊಂಡಿವೆ.

ದೇವಳದ ಕಾಡಿನ ಈ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಣೆ ಮಾಡುತ್ತಿ ರುವುದನ್ನು ಸ್ಥಳೀಯರು ಅರಣ್ಯ ಇಲಾ ಖೆಯ ಗಮನಕ್ಕೆ ತಂದಿದ್ದಾರೆ. ನಾಟಕ ಕ್ಕಾಗಿ ಲಾರಿ ತಡೆದು ನಿಲ್ಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಲೆ ಬಾಳುವ ಮರಗಳನ್ನು ಮರಕಳ್ಳರಿಗೆ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿಂತಿಕಲ್ಲು ಗ್ರಾಮೀಣ ಸೇವಾ ಪ್ರತಿ ಷ್ಠಾನದವರು ಈ ಕುರಿತು ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿ ದ್ದಾರೆ. ಆದರೆ ಇಲಾಖೆ ಯಾವುದೇ ಕ್ರಮ ಕೈಗೊಂಡಲ್ಲ ಎಂದು ಆರೋಪಿಸಿ ರುವ ಪ್ರತಿಷ್ಠಾನದ ಅಧ್ಯಕ್ಷ  ರೂಪರಾಜ್ ರೈ ಅವರು ಮರ ಕಡಿದು ಸಾಗಣೆ ಮಾಡಿದವರ ವಿರುದ್ದ ಸೂಕ್ತ ಕ್ರಮಕೈಗೊ ಳ್ಳುವ ಜತೆಗೆ ದೇವಾಲಯದ ಮರಗ ಳನ್ನು ದೇವಾಲಯಕ್ಕೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದೇವಾಲಯದ ಜೀರ್ಣೋದ್ಧಾರದ ವೇಳೆ ಅಗತ್ಯ ಇದ್ದರೂ ಭಕ್ತಿಭಾವದ ನೆಲೆ ಯಲ್ಲಿ ಇಲ್ಲಿನ ಯಾವುದೇ ಮರಗಳನ್ನು ಕಡೆದಿರಲಿಲ್ಲ. ಆದರೆ, ರಾಜಕೀಯ ಬೆಂಬಲವಿದೆ ಎನ್ನುವ ರೀತಿಯಲ್ಲಿ ದೇವ ರಕಾಡಿಗೆ ಹಿಟಾಚಿ ಹಾಗೂ ಲಾರಿಗಳ ಜತೆಗೆ ಬಂದ ಮರಕಳ್ಳರ ತಂಡ ಹಗಲಿ ನಲ್ಲಿಯೇ ಲಕ್ಷಾಂತರ ರೂಪಾಯಿ  ಬೆಲೆ ಬಾಳುವ ಮರಗಳನ್ನು ದೋಚಿದ್ದಾರೆ ಎಂದು ನಿಂತಿಕಲ್ಲು ಗ್ರಾಮೀಣ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ವಸಂತ ನಡುಬೈಲು ಆರೋಪಿಸಿದ್ದಾರೆ.

* * 

ಆಸ್ತಿಕರ ಶ್ರದ್ಧಾ ಕೇಂದ್ರ ದೇವರಕಾಡಿನಿಂದ ಈ ರೀತಿ ಮರ ಕಳವು ಹಾಡಹಗಲೇ ನಡೆದಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು  ಸೂಕ್ತ ಕ್ರಮಕೈಗೊಂಡಿಲ್ಲ .
ಅಕ್ಷಯ್ ಆಳ್ವ
ದೇವಳದ ಆಡಳಿತ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT