ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮಸೀದಿ ಸ್ಫೋಟಕ್ಕೆ ವಿಫಲ ಯತ್ನ

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ರಿಯಾದ್‌: ಪವಿತ್ರ ರಂಜಾನ್‌ ಮಾಸ ಅಂತ್ಯಗೊಳ್ಳುವ ಸಂದರ್ಭದಲ್ಲಿಯೇ ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾದ ಮಹಾ ಮಸೀದಿ ಮೇಲೆ ದಾಳಿ ನಡೆಸಲು ರೂಪಿಸಲಾಗಿದ್ದ ಸಂಚನ್ನು ಸೌದಿ ಅರೇಬಿಯಾ ಪೊಲೀಸರು ವಿಫಲಗೊಳಿಸಿದ್ದಾರೆ.  ಆದರೆ, ಮಹಾ ಮಸೀದಿ ಸಮೀಪದಲ್ಲಿಯೇ ಆತ್ಮಾಹುತಿ ಬಾಂಬ್‌ ದಾಳಿ ಸಂಭವಿಸಿದೆ.

ಉಗ್ರರಿಗಾಗಿ ಮೆಕ್ಕಾದ ಸಮೀಪದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸಿದಾಗ ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಆತ್ಮಾಹುತಿ ಬಾಂಬ್‌ ದಾಳಿಕೋರ ಸ್ಫೋಟಿಸಿಕೊಂಡಿದ್ದಾನೆ. ಈ ಸ್ಫೋಟದಿಂದ ಆರು  ವಿದೇಶಿಯರು ಹಾಗೂ ಭದ್ರತಾ ಪಡೆಯ ಐದು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ಸಂಬಂಧ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಮಾಧ್ಯಮದಲ್ಲಿ ಕಾರ್ಯಾಚರಣೆ ಪ್ರಸಾರ: ಪೊಲೀಸರು ಹಾಗೂ ಭದ್ರತಾ ಪಡೆ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯ ದೃಶ್ಯಾವಳಿಗಳನ್ನು ಸೌದಿ ಸರ್ಕಾರಿ ಮಾಧ್ಯಮ ಪ್ರಸಾರ ಮಾಡಿದೆ. ಸ್ಫೋಟದಲ್ಲಿ ಕಟ್ಟಡ ಸಂಪೂರ್ಣ ನಾಶವಾಗಿದೆ.

‘ಈ ದೇಶದ ಭದ್ರತೆ ಮತ್ತು ಸ್ಥಿರತೆ ಹಾಳುಮಾಡಲು ವಿದೇಶದಲ್ಲಿ ರೂಪಿಸಿದ ದುಷ್ಟ ಯೋಜನೆಗಳನ್ನು ಕಾರ್ಯರೂಪಗೊಳಿಸುವ ಸಲುವಾಗಿ, ಈ ಭಯೋತ್ಪಾದಕರ ಗುಂಪು ದಾಳಿ ನಡೆಸಿದೆ’ ಎಂದು ಸಚಿವಾಲಯ ಹೇಳಿದೆ.

ಆದರೆ ಭಯೋತ್ಪಾದಕ ಗುಂಪಿನ ಹೆಸರನ್ನು ಸಚಿವಾಲಯ ಉಲ್ಲೇಖಿಸಿಲ್ಲ. ಯಾವುದೇ ಗುಂಪುಗಳು ಸಹ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಮಹಾ ಮಸೀದಿ ಅಲ್‌ ಸೌದ್‌ ರಾಜಮನೆತನವನ್ನು ಪ್ರತಿನಿಧಿಸುವುದರಿಂದ ಈ ಹಿಂದೆಯೂ ಉಗ್ರರು ಸಾಕಷ್ಟು ಬಾರಿ ಈ ಮಸೀದಿ ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ರಾಜ ಸಲ್ಮಾನ್‌್ ಅವರನ್ನು ‘ಎರಡು ಪವಿತ್ರ ಮಸೀದಿಗಳ ಪಾಲಕ’ ಎಂದು ಕರೆಯಲಾಗುತ್ತದೆ.
ರಾಜ ಸಲ್ಮಾನ್‌ ಈ ವಾರವಷ್ಟೆ ತಮ್ಮ ಪುತ್ರ ಮೊಹಮ್ಮದ್‌ ಬಿನ್‌ ಸಲ್ಮಾನ್‌ರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಇದರಿಂದ ದೇಶದ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಇಂತಹ ಸಂದರ್ಭದಲ್ಲಿಯೇ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT