ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 4–7–1967

Last Updated 3 ಜುಲೈ 2017, 19:30 IST
ಅಕ್ಷರ ಗಾತ್ರ

ನಕ್ಸಲ್‌ಬರಿ ಉಗ್ರರಿಂದ ಸರ್ಕಾರದ ಗಡುವು ಕಡೆಗಣನೆ ಸಾಧ್ಯತೆ
ನವದೆಹಲಿ, ಜುಲೈ 3 –
ಹಿಂಸಾತ್ಮಕ ಪ್ರತಿಭಟನೆ ಕೈಬಿಟ್ಟು, ಶರಣಾಗಲು ನಕ್ಸಲ್‌ಬರಿಯ ಎಡಪಂಥೀಯರಿಗೆ ಪಶ್ಚಿಮ ಬಂಗಾಳ ಸರ್ಕಾರ ನೀಡಿರುವ ಗಡುವು ನಾಳೆ ಕೊನೆಗೊಳ್ಳಲಿದೆ. ಆದರೆ, ತೀವ್ರಗಾಮಿಗಳು ಇದನ್ನು ನಿರ್ಲಕ್ಷಿಸಿ ಭಯೋತ್ಪಾದನೆ ನಿಲ್ಲಿಸದಿರುವ ಲಕ್ಷಣಗಳು ಕಂಡುಬಂದಿವೆ.

ಈ ನಡುವೆ, ದೇಶದ ಪೂರ್ವ ಭಾಗದ ಆಯಕಟ್ಟಿನ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬಗ್ಗೆ ಕಳವಳಗೊಂಡಿರುವ ಕೇಂದ್ರ ಸರ್ಕಾರ ಇಂದು ಉನ್ನತ ಮಟ್ಟದ ಸಭೆ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ.

ಮೈಸೂರಿನ ಆತಂಕ ದೂರ ಮಾಡಿದ ಆಂಧ್ರ ಮುಖ್ಯಮಂತ್ರಿ
ಹೈದರಾಬಾದ್, ಜುಲೈ 3 –
ನಾಗಾರ್ಜುನ ಸಾಗರ ಯೋಜನೆಯ ಎರಡನೆಯ ಹಂತದ ಬಗ್ಗೆ ಮೈಸೂರು ರಾಜ್ಯವು ಆತಂಕಪಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದ ರೆಡ್ಡಿ ಅವರು ರಾಜ್ಯ ವಿಧಾನಸಭೆಯಲ್ಲಿ ಇಂದು ಹೇಳಿದರು.

ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗೆ ಉತ್ತರಿಸಿದ ಅವರು ಅನುಕೂಲಕ್ಕಾಗಿ ಯೋಜನೆಯನ್ನು ಒಂದು ಹಾಗೂ ಎರಡನೆಯ ಹಂತಗಳೆಂದು ಪ್ರತ್ಯೇಕಿಸಲಾಗಿದೆಯೇ ಹೊರತು ಇಡೀ ಯೋಜನೆ ಒಂದೇ ಆಗಿರುತ್ತದೆ ಎಂದು ತಿಳಿಸಿದರು.

ಸವಾಲು ಸ್ವೀಕರಿಸಿದ ಸಚಿವರು
ಬೆಂಗಳೂರು, ಜುಲೈ 3 –
ತಮ್ಮ ಇಲಾಖೆಗೆ ಸಂಬಂಧಿಸಿದ ಗುತ್ತಿಗೆಯೊಂದನ್ನು ನೀಡುವ ವೇಳೆ ಮುಖ್ಯಮಂತ್ರಿಯವರ ಒಬ್ಬ ಅಳಿಯನ ಪರವಾಗಿ ಧೋರಣೆ ತಾಳಲಾಗಿತ್ತು ಎಂಬುದು ಸುಳ್ಳು ಎಂದು ಸಾಬೀತು ಮಾಡುವ ಸವಾಲನ್ನು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ ಅವರು ಮೈಸೂರು ವಿಧಾನಸಭೆಯಲ್ಲಿ ಸೋಮವಾರ ಸ್ವೀಕರಿಸಿದರು.

ಇದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ದೂರನ್ನು ಲಿಖಿತವಾಗಿ ಸಲ್ಲಿಸಿದರೆ, ಅಗತ್ಯವಿರುವ ದಾಖಲೆಗಳನ್ನು ಸದನದಲ್ಲಿ ಎಂಟು ದಿನಗಳಲ್ಲಿ ಹಾಜರುಪಡಿಸುವುದಾಗಿಯೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT