ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಕ್ಷರಸ್ಥ ಕಲಾವಿದರ ಕಣ್ಮರೆ

Last Updated 6 ಜುಲೈ 2017, 9:49 IST
ಅಕ್ಷರ ಗಾತ್ರ

ಗೌರಿಬಿದನೂರು: ‘ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಈ ಹಿಂದೆ ಅನಕ್ಷರಸ್ಥರು ಕೈವಾರ ನಾರೇಯಣಪ್ಪ, ವೀರಬ್ರಹ್ಮಯ್ಯ, ಸಾಸುಲು ಚಿನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ  ಅವರ ಬಗ್ಗೆ ಕಥೆ, ಕಾವ್ಯಗಳನ್ನು ಕಟ್ಟಿ ಹಾಡುತ್ತಿದ್ದರು. ಆದರೆ ಇಂದು ಈ ಕಲಾವಿದರು  ಕಣ್ಮರೆಯಾಗಿದ್ದಾರೆ’ ಎಂದು ಜನಪದ ಕಲಾವಿದ ವೆಂಕಟ ರವಣಪ್ಪ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ವೀರಂಡಹಳ್ಳಿಯಲ್ಲಿ ವಿನಾಯಕ ಭಜನಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇತ್ತೀಚೆಗೆ ನಡೆದ ತತ್ವ ಪದಗಳ ಗಾಯನ ಉದ್ಘಾಟಿಸಿ ಮಾತನಾಡಿದರು.

‘ಹಿಂದೆ ಗ್ರಾಮಗಳಲ್ಲಿ ಅಶ್ವತ್ಥಕಟ್ಟೆ ಇಲ್ಲವೇ ದೇವಾಲಯಗಳಲ್ಲಿ ಸಂಜೆಯ ಬಿಡುವಿನಲ್ಲಿ  ಅನಕ್ಷರಸ್ಥರು ಒಟ್ಟಿಗೆ ಸೇರಿ ಜನಪದ ಕಥೆ, ಕಾವ್ಯಗಳನ್ನು ಹಾಡುತ್ತಿದ್ದರು. ಆದರೆ  ಆಧುನಿಕ ಬದುಕಿನ ಜೀವನ ಶೈಲಿಯಿಂದ ಇಂತಹ ಜನಪದ ಕಥೆಗಳು, ಹಾಡುಗಳು ಸಂಪೂರ್ಣವಾಗಿ ನಶಿಸಿವೆ’ ಎಂದು ಅವರು ಹೇಳಿದರು.

ವೀರಂಡಹಳ್ಳಿ ವಿನಾಯಕ ಭಜನಾ ಮಂಡಳಿ ಅಧ್ಯಕ್ಷೆ ಪದ್ಮಾವತಮ್ಮ ಹಾಗೂ ತಂಡದವರು ತತ್ವ ಪದಗಳ ಗಾಯನ ನಡೆಸಿಕೊಟ್ಟರು. ಪುರಸಭೆ ಸದಸ್ಯ ಲಕ್ಷ್ಮಿ ಮನೋಹರ್, ಕಲಾವಿದರಾದ ಲಕ್ಷ್ಮಿಪತಿ, ಶಶಿಧರ್, ಸತ್ಯನಾರಾಯಣ, ರೀಜಮ್ಮ, ವೆಂಕಟರವಣಪ್ಪ, ನರಸಿಂಹಪ್ಪ, ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT