ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ವಾರ್ಡ್‌ರೋಬ್‌ ಮನೆಗೆ ಮೆರುಗು

Last Updated 6 ಜುಲೈ 2017, 19:30 IST
ಅಕ್ಷರ ಗಾತ್ರ

ಮನೆಯ ಒಳಾಂಗಣ ವಿನ್ಯಾಸದಲ್ಲಿ ವಾರ್ಡ್‌ರೋಬ್‌ಗಳಿಗೆ ವಿಶೇಷ ಮಹತ್ವವಿದೆ. ಗೃಹನಿರ್ಮಾಣದ ಯೋಜನೆಯಲ್ಲಿ ವಾರ್ಡ್‌ರೋಬ್‌ಗಳ ವಿನ್ಯಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಯಾವ ಕೋಣೆಯಲ್ಲಿ ಯಾವ್ಯಾವ ಗಾತ್ರದ ವಸ್ತುಗಳನ್ನು ವ್ಯವಸ್ಥಿತವಾಗಿ ಇರಿಸಲು ಯಾವ ವಿನ್ಯಾಸದ ವಾರ್ಡ್‌ರೋಬ್‌ಗಳು ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಬಾಸ್ಕೆಟ್‌ ಕ್ಯಾಬಿನೆಟ್‌: ಶರ್ಟ್‌ಗಳನ್ನು ಜೋಡಿಸಿಡಲು ಇದು ಸಹಕಾರಿ. ಸೀರೆಗಳನ್ನು ಇಡಲು ಇದು ಸೂಕ್ತವಾಗಿಲ್ಲ. ಮೆಟಲ್‌ ಕ್ಯಾಬಿನೆಟ್‌ ಬಳಸುವುದರಿಂದ ನೀರು ಬಿದ್ದರೂ, ಹಾಳಾಗದಂತೆ ಎಚ್ಚರಿಕೆ ವಹಿಸಬಹುದು. ಜಲನಿರೋಧಕ ಶೀಟ್‌ಗಳೂ ಈಗ ಲಭ್ಯ.

ಫ್ರಿ ಸ್ಟ್ಯಾಡಿಂಗ್‌ ವಾರ್ಡ್‌ರೋಬ್‌: ಇದನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗಬಹುದು. ಇದಕ್ಕೆ ಬೇಡಿಕೆ ಹೆಚ್ಚು. ಲೋಹ, ಮರ ಮತ್ತು ಪ್ಲಾಸ್ಟಿಕ್‌ನಲ್ಲಿಯೂ ಇದು ದೊರಕುತ್ತದೆ.

ವಾಲ್‌ ಮೌಂಟೆಡ್‌: ಗೋಡೆಗೆ ಅಂಟಿಕೊಂಡಂತೆ ಇರುವ ಇದು ಒಳಾಂಗಣ ವಿನ್ಯಾಸದಲ್ಲಿ ಸ್ಥಾನ ಪಡೆದುಕೊಂಡಿದೆ. ಇದಕ್ಕೆ ಕಡಿಮೆ ಜಾಗ ಸಾಕಾಗುತ್ತದೆ. ಹಾಗಾಗಿ ಇದಕ್ಕೆ ಆದ್ಯತೆ ಹೆಚ್ಚು.

ಮೆಡಿಸಿನ್‌ ಕ್ಯಾಬಿನ್‌: ಮಲಗುವ ಕೋಣೆಯಲ್ಲಿ ಮೆಡಿಸಿನ್‌ ಕ್ಯಾಬಿನ್‌ ಅಳವಡಿಸಬಹುದು. ಇದರಿಂದ ಔಷಧಿ ಎಲ್ಲಿದೆ ಎಂದು ಮನೆ ಪೂರ್ತಿ ತಡಕಾಡುವುದನ್ನು ತಪ್ಪಿಸಬಹುದು. ಇದರಲ್ಲಿ ಬೇರೆ ಯಾವ ವಸ್ತುಗಳನ್ನು ಇಡಬಾರದು. ಇದಕ್ಕೆ ಕನ್ನಡಿಯನ್ನು ಅಳವಡಿಸುವುದರಿಂದ ಅಲಂಕಾರ ಮಾಡಿಕೊಳ್ಳಲು ನೆರವಾಗುತ್ತದೆ.

ಸ್ಲೈಡಿಂಗ್‌ ಡೋರ್‌: ಇದು ಇತ್ತೀಚೆಗೆ ತುಂಬಾ ಟ್ರೆಂಡಿಯಾಗಿದೆ. ಇದಕ್ಕೆ ಹೆಚ್ಚು ಸ್ಥಳವೂ ಬೇಕಾಗಿಲ್ಲ. ಗೋಡೆಯ ಮೇಲ್ಭಾಗದಲ್ಲಿಯೂ ಇದನ್ನು ಅಳವಡಿಸುವುದರಿಂದ ಬೆಡ್‌ಶೀಟ್‌, ಅನಾವಶ್ಯಕ ವಸ್ತುಗಳನ್ನೂ ಅಲ್ಲಿ ಇರಿಸಬಹುದು.

ವಾಕ್‌ ಇನ್‌ ವಾರ್ಡ್‌ರೋಬ್‌: ಹುಡುಗಿಯರಿಗಂತೂ ತುಂಬಾ ಇಷ್ಟದ ವಾರ್ಡ್‌ರೋಬ್‌. ಇದು ವಿಸ್ತಾರವಾಗಿರುವುದರಿಂದ ಎಲ್ಲಾ ತರಹದ ಬಟ್ಟೆಗಳನ್ನು ಇರಿಸುವ ಅವಕಾಶವಿರುತ್ತದೆ. ಆದರೆ ಐಷಾರಾಮಿ ಮನೆಗಳಿಗೆ ಮಾತ್ರವೇ ಇದನ್ನು ಅಳವಡಿಸಲು ಸಾಧ್ಯ.  

ಆರ್ಮೊರ್ಸ್‌: ಹಳ್ಳಿಯ ಸೊಗಡನ್ನು ಪ್ರತಿಬಿಂಬಿಸುವ ಮನೆಗಳಿಗೆ ಇದು ಇನ್ನಷ್ಟು ಸೊಬಗನ್ನು ನೀಡುತ್ತದೆ. ಹೆಚ್ಚಿನ ವಸ್ತುಗಳನ್ನು ಇಡಲು ಆಗದಿದ್ದರೂ, ಮರದಿಂದ ಮಾಡಿರುವುದರಿಂದ, ಮನೆಗೆ ಮೆರುಗು ನೀಡುತ್ತದೆ. 

ಕಸ್ಟಮೈಸ್ಡ್‌ ವಾರ್ಡ್‌ರೋಬ್‌: ಇದು ಮಕ್ಕಳ ಕೋಣೆಗೆ ಹೊಂದಿಕೆಯಾಗುತ್ತದೆ. ಈ ರೀತಿಯ ವಾರ್ಡ್‌ರೋಬ್‌ಗಳು ವರ್ಣಮಯವಾಗಿರುತ್ತವೆ. ಪುಸ್ತಕ, ಮಕ್ಕಳ ಬಟ್ಟೆಗಳನ್ನು ಇದರಲ್ಲಿ ಇರಿಸಬಹುದು. ಮಕ್ಕಳ ಇಷ್ಟದ ಬಣ್ಣದಲ್ಲಿ ವಿನ್ಯಾಸ ಮಾಡಲು ಅವಕಾಶವಿರುತ್ತದೆ.

ಹೀಗಿರಲಿ ವಾರ್ಡ್‌ರೋಬ್‌...   
ಹದಿನೈದು ದಿನಕ್ಕೊಮ್ಮೆಯಾದರೂ ವಾರ್ಡ್‌ರೋಬ್‌ ಶುಚಿ ಮಾಡಿ. ಎಲ್ಲಾ ವಸ್ತುಗಳನ್ನು ಹೊರಗೆ ತೆಗೆದು ಒಣ ಬಟ್ಟೆಯಿಂದ ವಾರ್ಡ್‌ರೋಬ್‌ ಒರೆಸಿ.

ಅನಾವಶ್ಯಕ ವಸ್ತುಗಳನ್ನೆಲ್ಲ ವಾರ್ಡ್‌ರೋಬ್‌ಗಳಿಂದ ತೆಗೆದುಬಿಡಿ. ದಿನನಿತ್ಯ ಬಳಸುವ ಉಡುಪು, ಅದ್ದೂರಿ ಉಡುಪುಗಳನ್ನು ಪ್ರತ್ಯೇಕವಾಗಿರಿಸಿ.

ತೆಳುವಾದ ಹತ್ತಿಯ ಬಟ್ಟೆ ಅಥವಾ ಪೇಪರ್‌ ಹಾಸಿ ಅದರ ಮೇಲೆ ಬಟ್ಟೆಯನ್ನಿಡಿ.

ಆಯಾ ಋತುಮಾನಕ್ಕೆ ತಕ್ಕಂತೆ ಧರಿಸುವ ಉಡುಪುಗಳನ್ನು ಪ್ರತ್ಯೇಕವಾಗಿರಿಸಿ.

ಬಿಳಿ ಬಣ್ಣದ ವಾರ್ಡ್‌ರೋಬ್‌ ಆದರೆ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಹಾಗಾಗಿ ಮರದ ಬಣ್ಣದ ವಾರ್ಡ್‌ರೋಬ್‌ಗೆ ಹೆಚ್ಚಿನ ಆದ್ಯತೆ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT