ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಬೀಜದುಂಡೆ ಬಿತ್ತನೆ ಕಾರ್ಯ

Last Updated 7 ಜುಲೈ 2017, 9:59 IST
ಅಕ್ಷರ ಗಾತ್ರ

ಚೊಳಚಗುಡ್ಡ (ಬಾದಾಮಿ): ‘ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಲು ನಾವೆಲ್ಲ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಮಾಡೋಣ. ಅದರಂತೆ ಪರಿಸರದ ರಕ್ಷಣೆಗೆ ಮರವನ್ನು ಬೆಳೆಸೋಣ’ ಎಂದು ನವಚೇತನ ಮತ್ತು ಶಾಕಾಂಬರಿ ವಿದ್ಯಾನಿಕೇತನ ಶಾಲೆ ಆಡಳಿತ ಮಂಡಳಿಯ ನಿರ್ದೇಶಕ ಡಾ. ಬಸವರಾಜ ಮುಲ್ಕಿಪಾಟೀಲ ವಿದ್ಯಾರ್ಥಿಗಳಿಗೆ ಹೇಳಿದರು.

ಚೊಳಚಗುಡ್ಡದ ನವಚೇತನ ಪ್ರಾಥಮಿಕ ಶಾಲೆ ಮತ್ತು ಶಾಕಾಂಬರಿ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಸಮಾರಂಭದಲ್ಲಿ  ಬೀಜದುಂಡೆ ಕುರಿತು ಮಾತನಾಡಿದರು.

ಪರಿಸರ ರಕ್ಷಣೆಯೂ ಎಲ್ಲರ ಗುರಿಯಾಗಬೇಕು. ನಿಷ್ಕಾಳಜಿ ಯಾವುದೇ ಕಾರಣಕ್ಕೂ ಸಲ್ಲದು. ಪೋಷಕರು ಹಾಗೂ ಶಿಕ್ಷಕರು ಇದರ ಬಗ್ಗೆ ಗಮನಹರಿಸಬೇಕು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪರಿಸರ ರಕ್ಷಣೆ ಮಹತ್ವ ತಿಳಿಸಬೇಕು ಎಂದು ಅವರು ಹೇಳಿದರು.

ಗ್ರಾಮದ ತುಳಸಿಗುಡ್ಡ ಅರಣ್ಯ ಪ್ರದೇಶದಲ್ಲಿ ಶಾಲೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ಬೀಜದುಂಡೆ ತಯಾರಿಸಿ ಅವುಗಳನ್ನು ಬಿತ್ತನೆ ಕೈಗೊಂಡರು. ಬೀಜದುಂಡೆಯನ್ನು ತಯಾರಿಸುವಲ್ಲಿ ಮತ್ತು ಬೀಜ ಬಿತ್ತನೆ ಕಾರ್ಯದಲ್ಲಿ ಮಕ್ಕಳು ಉತ್ಸಾಹ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ಹಂಪಿಹೊಳಿ, ಅರಣ್ಯ ಅಧಿಕಾರಿ ಪ್ರಹ್ಲಾದ ದೊಡ್ಡಪತ್ತಾರ, ಪ್ರಶಾಂತ ಪಡಿಯಪ್ಪನವರ, ಶಿವಾಜಿ ರಜಪೂತ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT