ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿದ ಸಾಹಿತಿಗೆ ಅವಮಾನ: ಬಹಿರಂಗ ಕ್ಷಮೆಗೆ ಆಗ್ರಹ

Last Updated 10 ಜುಲೈ 2017, 11:22 IST
ಅಕ್ಷರ ಗಾತ್ರ

ಮುಂಡಗೋಡ: ‘ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಕಟ್ಟಿ ಬೆಳೆಸಿದ, ಸಾಂಸ್ಕೃತಿಕ ರಾಯಭಾರಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾಗಿದ್ದ ಎ.ಎಚ್‌.ದೊಡ್ಮನಿ ಅವರು ನಿಧನರಾದ ದಿನದಂದೇ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿ­ಯಿಂದ ‘ವರುಷ–ಹರುಷ’ ಕಾರ್ಯ­ಕ್ರಮವನ್ನು ಸಂಭ್ರಮದಿಂದ ಆಚರಿಸಿ­ರುವುದು ಸಾಹಿತ್ಯಾಸಕ್ತರಿಗೆ ನೋವು ತಂದಿದೆಯಲ್ಲದೇ, ಅಗಲಿದ ಸಾಹಿತಿಗೆ ಅವಮಾನ ಮಾಡಿದಂತಾಗಿದೆ’ ಎಂದು ಕಸ್ತೂರಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಡಿ.ಮುಡೆನ್ನವರ  ಪ್ರಕಟಣೆಯಲ್ಲಿ ದೂರಿದ್ದಾರೆ.

‘ಜಿಲ್ಲೆಯಾದ್ಯಂತ ಸಾಹಿತ್ಯ ಕೃಷಿಯನ್ನು ಮಾಡಿದ್ದ ಹಾಗೂ ಮೂರನೇ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ­ರಾಗಿದ್ದ ಎ.ಎಚ್‌.ದೊಡ್ಮನಿ ಅವರು, ಇದೇ 6ರಂದು ನಿಧನರಾದ ಸುದ್ದಿ ತಿಳಿದು ಜಿಲ್ಲೆಯ, ತಾಲ್ಲೂಕಿನ ಸಾಹಿತಿ­ಗಳು ದುಃಖದಲ್ಲಿದ್ದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿ­ಯಿಂದ ಅಂದೇ ಮಧ್ಯಾಹ್ನ ನಡೆಯ­ಬೇಕಿದ್ದ, ವರುಷ–ಹರುಷ ಕಾರ್ಯಕ್ರಮ­ವನ್ನು ಅಗಲಿದ ಸಾಹಿತಿಯ ಗೌರವಾರ್ಥ, ಮುಂದೂಡಬೇಕೆಂದು ಸಾಹಿತ್ಯಾಸಕ್ತರು ಮನವಿ ಮಾಡಿಕೊಂಡರೂ ಸಹಿತ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು, ಸನ್ಮಾನ ಕಾರ್ಯಕ್ರಮವನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಕಾರ್ಯ­ಕ್ರಮವನ್ನು ಸಂಭ್ರಮದಿಂದ ಆಚರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಇಂತಹ ಕೆಟ್ಟ ನಿರ್ಧಾರವನ್ನು ಕಸ್ತೂರಿ ಸಿರಿಗನ್ನಡ ವೇದಿಕೆ ಖಂಡಿ­ಸುತ್ತದೆ. ಅಲ್ಲದೇ ಬಹಿರಂಗವಾಗಿ ಕ್ಷಮೆ ಕೋರಿ, ಅಗಲಿದ ಹಿರಿಯ ಸಾಹಿತಿಯ ಗೌರವವನ್ನು ಎತ್ತಿಹಿಡಿಯಬೇಕು’ ಎಂದು ಎಸ್‌.ಡಿ.ಮುಡೆನ್ನವರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT