ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ತನೆಯೊಂದಿಗೆ ಸಂಗೀತೋತ್ಸವ ಸಮಾಪ್ತಿ

ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದಲೂ ಹರಿದು ಬಂದ ಭಕ್ತ ಸಾಗರ; ಹರಿಕಥೆ, ಬುರ್ರಕಥೆ, ಭಜನಾ ತಂಡಗಳಿಂದ ಕಾರ್ಯಕ್ರಮ
Last Updated 11 ಜುಲೈ 2017, 8:54 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಗುರುಪೂಜಾ ಸಂಗೀತ ಮಹೋತ್ಸವ  ಸೋಮವಾರ ಬೆಳಿಗ್ಗೆ 6ಗಂಟೆಯಲ್ಲಿ  ಮಹಾ ಮಂಗಳಾರತಿಯೊಂದಿಗೆ ವಿಧ್ಯುಕ್ತವಾಗಿ ತೆರೆಕಂಡಿತು.

ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ನೇತೃತ್ವದಲ್ಲಿ ಸಂಕೀರ್ತನೆ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ದೇವಾಲಯಕ್ಕೆ ಕರೆದೊಯ್ಯಲಾಯಿತು.

ಭಾನುವಾರ ರಾತ್ರಿ ರಾಜ್ಯ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಜನರ ಪ್ರವಾಹವೇ ಹರಿದುಬಂದಿತ್ತು. ಸಭಾಂಗಣದಲ್ಲಿ ವಿದ್ವಾಂಸರು ಸಂಗೀತ ಕಛೇರಿ ನೀಡುತ್ತಿದ್ದರೆ  ಹೊರಗೆ ನೂರಾರು ಭಜನಾ ತಂಡಗಳು ಗುಂಪು ಗುಂಪುಗಳಾಗಿ ಕೋಲಾಟ, ಭಜನೆ, ಫಂಡರೀಭಜನೆ, ಕೀರ್ತನೆ, ತತ್ವಪದಗಳ ಗಾಯನ ನಡೆಸಿಕೊಟ್ಟರು.

ಕೈವಾರದ ಂತಹ ಪುಟ್ಟ ಗ್ರಾಮದಲ್ಲಿ ಲಕ್ಷಾಂತರ ಜನರಿಗೆ ಕುಡಿಯುವ ನೀರು, ಶೌಚಾ ಲಯ, ಊಟ, ವಸತಿ ಸೌಲಭ್ಯ ಗಳನ್ನು  ಮಠದಿಂದ ವ್ಯವಸ್ಥೆ ಮಾಡಲಾಗಿತ್ತು. 

ಹರಿಕಥೆಗಳ ಮೆರಗು: ಭಾನುವಾರ ರಾತ್ರಿ ಕಾರ್ಯಕ್ರಮದಲ್ಲಿ ಎನ್‌.ಆರ್‌.ಜ್ಞಾನ ಮೂರ್ತಿ, ಮಂಜುಳಾ ಭಾಗವತಾರಿಣಿ, ಚಂದ್ರಶೇಖರ್‌ ಭಾಗವತರ್‌, ಯುವ ರಾಣಿ ಭಾಗವತಾರಿಣಿ ಅವರ ಹರಿಕಥೆ ಗಳು ಸಂಗೀತೋತ್ಸವಕ್ಕೆ ಮೆರಗು ನೀಡಿದ್ದವು.

ಭಕ್ತರು ನಿದ್ದೆಗೆ ಜಾರದಂತೆ ತಡೆ ಹಿಡಿದಿದ್ದವು. ತುಮಕೂರಿನ ಸಾಗರ್‌ ತಂಡದ ಭರತನಾಟ್ಯ, ಧುರ್ಯೋಧನ–ಶಕುನಿ, ಭೀಮ–ಬಕಾಸುರ  ಮಾಯಾ ಸಭಾ ನಾಟಕ ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT