ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಒತ್ತುವರಿ ತೆರವಿಗೆ ಆಗ್ರಹ

Last Updated 12 ಜುಲೈ 2017, 6:57 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಮಾದ್ರೆ–ದಂಡಳ್ಳಿ–ಹೊಸಳ್ಳಿ ಗ್ರಾಮಗಳಿಗೆ ಸೇರಿದ  ಅರಣ್ಯ ಭೂಮಿಯನ್ನು ವ್ಯಕ್ತಿಯೊಬ್ಬರು ಅತಿಕ್ರಮಿಸಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಮೂರು ಗ್ರಾಮಗಳ 200ಕ್ಕೂ ಹೆಚ್ಚು ಜನರು ವಿವಾದಸ್ತ ಸ್ಥಳದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ದಂಡಳ್ಳಿ ಗ್ರಾಮದ ಸರ್ವೇ ನಂಬರ್‌ 2 1/2 ರಲ್ಲಿ 30 ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ಅಕೇಶಿಯ ನೆಡುತೋಪು ಮಾಡಲಾಗಿದ್ದು, ಅಲ್ಲಿ 5 ಎಕರೆ ಭೂಮಿಯನ್ನು ದಂಡಳ್ಳಿಯ ನಿವಾಸಿಯೊಬ್ಬರು ಒತ್ತುವರಿ ಮಾಡಿ ತಂತಿ ಬೇಲಿ ಹಾಕಿ, ಕಾಫಿ ಗಿಡಗಳನ್ನು ನೆಟ್ಟಿದ್ದಾರೆ ಎಂದು ಆರೋಪಿಸಿದರು.

ಅರಣ್ಯ ಒತ್ತುವರಿ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಶೀಲಿಸಿ ಬೇಲಿ ತೆರವುಗೊಳಿಸಿದ್ದರೂ, ಮತ್ತೆ ಅದೇ ಜಾಗದಲ್ಲಿ ಕಾಫಿಗಿಡಗಳನ್ನು ನೆಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪಕ್ಕದ ಜಮೀನನ್ನು ತೋರಿಸಿ, ಸರ್ವೇ ಮಾಡಿಸಿ, ಆರ್‌ಟಿಸಿಯಲ್ಲಿ ತಮ್ಮ ಹೆಸರು ದಾಖಲಾಗುವಂತೆ ಮಾಡಿದ್ದಾರೆ. ಆದ್ದರಿಂದ ತಹಶೀಲ್ದಾರ್‌ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಅಲ್ಲಿ ಹಾಕಿದ್ದ ತಂತಿ ಬೇಲಿಯನ್ನು ಪ್ರತಿಭಟನಾಕಾರರು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಶೇಖರ್, ಉಪಾಧ್ಯಕ್ಷ ಎಂ.ಕೆ.ಧರ್ಮಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಸಿ.ಹೂವಣ್ಣ, ಎಂ.ಆರ್.ಸಂದೇಶ್, ಗ್ರಾಮದ ಪ್ರಮುಖರಾದ ಎಂ.ಈ.ವಸಂತ್, ಎಂ.ಆರ್.ಪುರುಷೋತ್ತಮ್, ನಾಗರಾಜ್, ಪ್ರಭುಸ್ವಾಮಿ, ಎಂ.ಈ.ನಾಗರಾಜ್, ಎಂ.ಈ.ಕುಟ್ಟಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT