ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹87ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ

Last Updated 12 ಜುಲೈ 2017, 10:15 IST
ಅಕ್ಷರ ಗಾತ್ರ

ಸೋಲೂರು(ಮಾಗಡಿ): ಹೋಬಳಿಯ  ಬಾಣವಾಡಿ , ಜಿರೋಜ್‌ ನಗರಗಳಲ್ಲಿ ನಮ್ಮ ಗ್ರಾಮವಿಕಾಸ ಯೋಜನೆಯಡಿ  ಒಟ್ಟು  ₹87ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಒಳಚರಂಡಿ, ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ  ಮಂಗಳವಾರ ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಚಾಲನೆ ನೀಡಿದರು. ನಮ್ಮ ಗ್ರಾಮ ವಿಕಾಸ ಯೋಜನೆ ಯಡಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು,

‘ಎರಡು ಹಂತದಲ್ಲಿ ಗ್ರಾಮವಿಕಾಸ ಯೋಜನೆ ಪ್ರಗತಿಯಲ್ಲಿದೆ, ಮೊದಲನೇ ಹಂತದಲ್ಲಿ ರಸ್ತೆ ಚರಂಡಿಗಳಿಗೆ ಆದ್ಯತೆ ನೀಡಿದ್ದೇವೆ, ಎರಡನೇ ಹಂತದಲ್ಲಿ ಸೋಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಗ್ರಂಥಾಲಯ, ಆಟದ ಮೈದಾನ, ಘನತ್ಯಾಜ್ಯ ವಿಲೇವಾರಿ ಘಟಕ ಇನ್ನಿತರ ಕಾಮಗಾರಿ ಅನುಷ್ಠಾನಕ್ಕೆ ತರಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ನಾಜಿಯಾ ಖಾನಂ ಜವಾಹರ್ ಮಾತನಾಡಿ, ಗ್ರಾಮವಿಕಾಸ ಯೋಜನೆ ಅತ್ಯುತ್ತಮವಾಗಿದೆ. ಜನಪ್ರತಿನಿಧಿಗಳ ಜೊತೆಗೆ ನಾಗರಿಕರು ಕಾಮಗಾರಿಯ ಗುಣಮಟ್ಟ ಕಾಮಗಾರಿ ನಡೆಯುವ ಸಮಯದಲ್ಲಿಯೇ ಪರಿಶೀಲಿಸಬೇಕು. ಆರ್ಹ ಗಾಮಗಳಲ್ಲಿ ಉತ್ತಮ ಅಭಿವೃದ್ಧಿ  ಕಾರ್ಯಗಳಾಗುತ್ತವೆ ಎಂದರು.

ಸೋಲೂರು ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎನ್‌.ರಾಜು, ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾಹನುಮಂತರಾಜು, ಭೂಬ್ಯಾಂಕ್‌ ನಿರ್ದೇಶಕ  ಗಂಗರಂಗಯ್ಯ, ಕರವೇ ಮುಖಂಡ ಚನ್ನಗಂಗಯ್ಯ, ತಟ್ಟೆಕೆರೆ ನಾಗರುದ್ರಶರ್ಮ ಕಾಮರಾಜು, ಮರಿಕುಪ್ಪೆ ವೆಂಕಟಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಗರಾಜು, ಎಇಇ ಪ್ರಸನ್ನಕುಮಾರ್, ಎಇ ಪ್ರದೀಪ್‌ ನಾಯ್ಕ, ಉಡುಕುಂಟೆ ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT