, ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು! | ಪ್ರಜಾವಾಣಿ
ಪ್ರಜಾವಾಣಿ ರೆಸಿಪಿ

ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಎಲೆಕೋಸಿನ ಬಸ್ಸಾರಿನ ಜತೆಗೆ  ರಾಗಿ ಮುದ್ದೆ ಸವಿದರೆ ಅದರ ಮಜವೇ ಬೇರೆ. ಎಲೆಕೋಸಿನ ಬಸ್ಸಾರಿಗೆ ಬೇಕಾಗುವ ಸಾಮಗ್ರಿ ಮತ್ತು  ಮಾಡುವ ವಿಧಾನದ ಮಾಹಿತಿ ಇಲ್ಲಿದೆ.

ಎಲೆಕೋಸಿನ ಬಸ್ಸಾರಿನ ಜತೆಗೆ  ರಾಗಿ ಮುದ್ದೆ ಸವಿದರೆ ಅದರ ಮಜವೇ ಬೇರೆ. ಎಲೆಕೋಸಿನ ಬಸ್ಸಾರಿಗೆ ಬೇಕಾಗುವ ಸಾಮಗ್ರಿ ಮತ್ತು  ಮಾಡುವ ವಿಧಾನದ ಮಾಹಿತಿ ಇಲ್ಲಿದೆ.

ಸಾಮಗ್ರಿಗಳು
1. ಹೆಚ್ಚಿದ ಎಲೆಕೋಸು -                              02 ಕಪ್
2. ತೊಗರಿ ಬೇಳೆ -                                    1/2 ಕಪ್
3. ತೆಂಗಿನ ತುರಿ -                                     1/2 ಕಪ್
4. ಉಪ್ಪು -                                              ರುಚಿಗೆ
5. ಎಳ್ಳೆಣ್ಣೆ -                                             01 ಸ್ಪೂನ್
6. ನೀರು -                                               03 ಕಪ್ ಇವೆಲ್ಲವನ್ನು 2 ವಿಶಲ್ ಕೂಗಿಸಿ ಬಿಸಿ ಇರುವಾಗಲೇ ನೀರನ್ನು ಬಸಿಯಿರಿ

ರುಬ್ಬುವುದಕ್ಕೆ
1. ಸುಟ್ಟ ಈರುಳ್ಳಿ -                                       01
2. ಬೆಳ್ಳುಳ್ಳಿ ಎಸಳು -                                     06
3. ಹುರಿದ ಹಸಿಮೆಣಸಿನ ಕಾಯಿ -                     15
4. ಹುರಿದ ಜೀರಿಗೆ -                                     01 ಸ್ಪೂನ್
5. ಕೊತ್ತಂಬರಿ ಸೊಪ್ಪು -                                ಸ್ವಲ್ಪ
6. ಅರಿಶಿನ -                                              ಸ್ವಲ್ಪ
7. ತೆಂಗಿನ ತುರಿ -                                     1 1/2 ಕಪ್
8. ಟೊಮ್ಯಾಟೊ -                                        01
ಮಾಡುವ ವಿಧಾನ: ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆ, ಹೆಚ್ಚಿದ ಎಲೆ ಕೋಸು, ಸ್ವಲ್ಪ ಉಪ್ಪು ಹಾಗೂ 3 ಲೋಟ ನೀರು ಹಾಕಿ. ಕುಕ್ಕರ್ ಎರಡು ಸೀಟಿ ಕೂಗಲಿ. ಸ್ಟೀಮ್ ಹೋದ ತಕ್ಷಣವೇ ಕುಕ್ಕರ್ ನಿಂದ ನೀರು ಬಸಿದಿಟ್ಟೂಕೊಳ್ಳಿ. ಇದು ಪಕ್ಕಕ್ಕಿರಲಿ. ಒಂದು ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟು ತೆಗೆದುಕೊಂಡು ಹಸಿ ಮೆಣಸು ಹಾಗೂ ಜೀರಿಗೆಯನ್ನು ಹುರಿದುಕೊಳ್ಳಿ.

ರುಬ್ಬಿಕೊಳ್ಳಲು ಬೇಕಾದ ಎಲ್ಲಾ ಮಸಾಲೆ ಹಾಗೂ, ಹುರಿದಿಟ್ಟುಕೊಂಡ ಹಸಿ ಮೆಣಸು, ಜೀರಿಗೆಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ.  ಆಮೇಲೆ ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಬಿಸಿ ಮಾಡಿ ಸಾಸಿವೆ, ಹೆಚ್ಚಿದ ಈರುಳ್ಳಿ, ಕರಿಬೇವು, ಒಣಮೆಣಸಿನ ಕಾಯಿ, ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ. ಬಸಿದಿಟ್ಟಿರುವ ನೀರನ್ನೂ ಸೇರಿಸಿ, ಮತ್ತೆ  1-2 ಕಪ್ ಸಾದಾ ನೀರು ಸೇರಿಸಿ ರುಚಿಗೆ ಬೇಕಾದಂತೆ ಉಪ್ಪು ಹಾಕಿ ಚೆನ್ನಾಗಿ ಕುದಿಸಿ.
ಪಲ್ಯಕ್ಕೆ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕತ್ತರಿಸಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬೆಂದ ಎಲೆಕೋಸು ಹಾಗೂ ಬೇಳೆ ಮಿಶ್ರಣವನ್ನು ಈ ಒಗ್ಗರಣೆಗೆ ಸೇರಿಸಿದರೆ ಬಸ್ಸಾರು ಸವಿಯಲು ಸಿದ್ಧ.

Comments
ಈ ವಿಭಾಗದಿಂದ ಇನ್ನಷ್ಟು
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ಪ್ರಜಾವಾಣಿ ರೆಸಿಪಿ
ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

19 Jul, 2017
ಬಿಸಿ ಬಿಸಿ ಈರುಳ್ಳಿ ದೋಸೆ !

ಪ್ರಜಾವಾಣಿ ರೆಸಿಪಿ
ಬಿಸಿ ಬಿಸಿ ಈರುಳ್ಳಿ ದೋಸೆ !

14 Jul, 2017
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

ಪ್ರಜಾವಾಣಿ ರೆಸಿಪಿ
ಬಾಯಲ್ಲಿ ಕರಗುವ ತರಕಾರಿ ಕಲ್ಮಿ ಕಬಾಬ್‌

7 Jul, 2017
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

ಪ್ರಜಾವಾಣಿ ರೆಸಿಪಿ
ಮುದ್ದೆಗೂ ಸೈ, ಅನ್ನಕ್ಕೂ ಸೈ ಮಜ್ಜಿಗೆ ಹುಳಿ!

4 Jul, 2017
ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

ಪ್ರಜಾವಾಣಿ ರೆಸಿಪಿ
ನೀರ್‌ ದೋಸೆಯನ್ನು ಹೀಗೂ ಮಾಡಬಹುದು!

30 Jun, 2017