ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ನಿಂದ ಐಎಂಪಿಎಸ್‌ ಶುಲ್ಕ ಇಳಿಕೆ

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಗ್ರಾಹಕರು ಐಎಂಪಿಎಸ್‌  (Immediate Payment Service) ಮೂಲಕ ಯಾವುದೇ ಶುಲ್ಕ ಇಲ್ಲದೆ ₹1,000ರ ವರೆಗೆ ನಗದು ವರ್ಗಾವಣೆ ಮಾಡಬಹುದು.

ಈ ಮೊದಲು ಐಎಂಪಿಎಸ್‌ ಮೂಲಕ  ₹1,000ದವರೆಗಿನ ನಗದು ವರ್ಗಾವಣೆಗೆ ₹5 ಶುಲ್ಕ ಮತ್ತು ಸೇವಾ ತೆರಿಗೆ ನೀಡಬೇಕಿತ್ತು.

ಕಡಿಮೆ ಮೊತ್ತದ ನಗದು ವರ್ಗಾವಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಶುಲ್ಕದಲ್ಲಿ ಇಳಿಕೆ ಮಾಡಲಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‌ಟಿಯಲ್ಲಿ ನಗದು ವರ್ಗಾವಣೆಗೆ ಶೇ 18ರವರೆಗೆ ತೆರಿಗೆ ದರ ನಿಗದಿ ಮಾಡಲಾಗಿದೆ. ಅದರಂತೆ  ₹1000 ದಿಂದ ₹ 1 ಲಕ್ಷದವರೆಗಿನ ನಗದು ವರ್ಗಾವಣೆಗೆ ₹ 5 ಹಾಗೂ ₹ 1 ಲಕ್ಷದಿಂದ ₹2 ಲಕ್ಷದವರೆಗಿನ ನಗದು ವರ್ಗಾವಣೆಗೆ ₹ 15 ಶುಲ್ಕ ನಿಗದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT