ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ ನಿಲ್ದಾಣ ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ

ಇಂಟರ್‌ ಲಾಕ್‌ ಅಳವಡಿಕೆಗೆ ಹಲವರ ವಿರೋಧ
Last Updated 13 ಜುಲೈ 2017, 7:36 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಬಿ. ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಟ್ಟ ಣದ ಬಸ್ ನಿಲ್ದಾಣ ಕಾಂಕ್ರೀಟಿಕರಣ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು.

ಇಲ್ಲಿನ ಬಸ್ ನಿಲ್ದಾಣ ಕಳೆದ ಹತ್ತು ವರ್ಷಗಳಿಂದ ಡಾಂಬರ ಕಾಣದೆ ಸಂಪೂರ್ಣ ಹದಗೆಟ್ಟಿತ್ತು. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಹಲವು  ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಆದರೆ ನಿಲ್ದಾಣದ ಕಾಮಗಾರಿಗೆ ಸೂಕ್ತ ಹಣಕಾಸಿನ ವ್ಯವಸ್ಥೆ ಆಗದ ಕಾರಣ ನನೆಗುದಿಗೆ ಬಿದ್ದಿತ್ತು. ಪಂಚಾಯಿತಿ ಸದಸ್ಯರು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಅವರು ಬಾಳೆ ಹೊನ್ನೂರಿಗೆ ಭೇಟಿ ನೀಡಿದ್ದಾಗ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ವಿವರಿಸಿ ಅನುದಾನ ನೀಡುವಂತೆ ಮನವಿ ಮಾಡಿ ದ್ದರು.  ಸದಸ್ಯರ ಮನವಿಗೆ ಸ್ಪಂದಿಸಿದ ಜೈರಾಂ ರಮೇಶ್ ಅವರು ₹25 ಲಕ್ಷ ಅನುದಾನವನ್ನು ಬಸ್ ನಿಲ್ದಾಣ ದುರಸ್ಥಿಗಾಗಿ ಬಿಡುಗಡೆ ಮಾಡಿದ್ದರು.

ಕಳೆದ ವಾರ ಜಿಲ್ಲಾ ಪಂಚಾಯಿತಿ ಸಿಇಒ ರಾಗಪ್ರೀಯ ಅವರು ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದಾಗ ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಅವರಿಗೂ ಸ್ಥಳೀಯರು ಮನವಿ ಮಾಡಿದ್ದರು. ಈ ಕಾರಣಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ₹10 ಲಕ್ಷ  ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

  ಅಂತಿಮವಾಗಿ ಒಟ್ಟು ₹35 ಲಕ್ಷ  ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಲು ಸಾಧ್ಯವಿಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ಇಂಟರ್ ಲಾಕ್ ಹಾಕಲು ನಿರ್ಧರಿಸ ಲಾಗಿತ್ತು. ಬುಧವಾರ ಸ್ಥಳ ಪರಿಶೀಲನೆಗೆ ಪಂಚಾಯಿತಿ ಸದಸ್ಯರು ಬಂದು ಕಾಮ ಗಾರಿ ಕುರಿತು ಚರ್ಚಿಸಿದಾಗ ಹಲವರು ಇಂಟರ್ ಲಾಕ್ ಹಾಕುವುದನ್ನು ವಿರೋ ಧಿಸಿದರು. ಅಂತಿಮವಾಗಿ ಲಭ್ಯವಿರುವ ಹಣದಲ್ಲಿ  ಕಾಂಕ್ರೀಟಿಕರಣ ಮಾಡಿ , ಉಳಿದ ಜಾಗದಲ್ಲಿ ಇಂಟರ್ ಲಾಕ್ ಹಾಕಲು ನಿರ್ಧರಿಸಿದರು.

ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಮುಖಂಡ ಕಲ್ಮಕ್ಕಿಯ ಟಿ.ಎಂ.ಉಮೇಶ್, ಪಂಚಾಯಿತಿ ಸದಸ್ಯರೆಲ್ಲರೂ  ಶಾಸಕ ಡಿ. ಎನ್.ಜೀವರಾಜ್ ಬಳಿ ತೆರಳಿ ಹೆಚ್ಚಿನ ಅನುದಾನ ಪಡೆದು ಕಾಮಗಾರಿ ನಡೆಸುವಂತೆ ಸಲಹೆ ನೀಡಿದರು. ಆದರೆ ಅದಕ್ಕೆ ಅಲ್ಲಿದ್ದ ಪಂಚಾಯಿತಿ ಸದಸ್ಯರು ಒಪ್ಪಲಿಲ್ಲ. ತಕ್ಷಣ ಮೊಬೈಲ್ ಮೂಲಕ ಉಮೇಶ್ ಅವರು ಶಾಸಕರನ್ನು ಸಂಪರ್ಕಿಸಿ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು.

  ಮನವಿಗೆ  ಸ್ಪಂದಿಸಿದ ಶಾಸಕ ಜೀವರಾಜ್  ₹15ಲಕ್ಷ ಅನುದಾನವನ್ನು ಬಿಡುಗಡೆ ಮಾಡಲು ತಕ್ಷಣವೇ  ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆದರೆ ಮಧುಸೂದನ್ ಅವರು ಈ ಹಿಂದೆ ಮೂರು –ನಾಲ್ಕು ಬಾರಿ ಶಾಸಕರನ್ನು ಭೇಟಿ ಮಾಡಿ ಹಣ ಬಿಡುಗಡೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ ಆದ್ದರಿಂದ ಅವರೇ ಹಣ ನೀಡುವುದಾದರೆ ನೀಡಲಿ ನಾವು ಅವರ ಮನೆಗೆ  ಹೋಗುವುದಿಲ್ಲ ಎಂದರು.

ಸ್ಥಳದಲ್ಲಿ ಬಿ,ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜುಹೇಬ್, ಸದಸ್ಯರಾದ ಆರ್.ಡಿ.ಮಹೇಂದ್ರ. ಎಂ. ಎಸ್. ಅರುಣೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಎಂ. ನಾಗೇಶ್,ಶೃಂಗೇರಿ ಕ್ಷೇತ್ರ  ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ,ಜಾನ್ ವಿಲ್ಪ್ರೇಡ್ ಡಿಸೋಜ, ರವಿಚಂದ್ರ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಹರೀಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT