ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಸಕ್ರಮದ ಭರವಸೆ

ಅಂಬೇಡ್ಕರ್ ನಗರಕ್ಕೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಭೇಟಿ
Last Updated 13 ಜುಲೈ 2017, 7:38 IST
ಅಕ್ಷರ ಗಾತ್ರ

ನರಸಿಂಹರಾಜಪುರ : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳ ನಿವೇಶನ ಸಕ್ರಮಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಭರವಸೆ ನೀಡಿದರು. ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 7ನೇ ವಾರ್ಡ್  ಅಂಬೇಡ್ಕರ್ ನಗರಕ್ಕೆ  ಬುಧವಾರ  ಜಿಲ್ಲಾಧಿಕಾರಿ ಸತ್ಯವತಿ ಭೇಟಿ ನೀಡಿದರು.

ಶಾಸಕ ಡಿ.ಎನ್.ಜೀವರಾಜ್, ಮಾತನಾಡಿ,  ಈ ಬಡಾವಣೆಯಲ್ಲಿ ಪರಿಶಿಷ್ಟ ಜಾತಿಯವರು ಸುಮಾರು 50 ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ವಾಸಿಸುವ ಮನೆಗಳಿಗೆ ಹಕ್ಕು ಪತ್ರ ಇಲ್ಲ.ಈ ನಿವೇಶನ ಗ್ರಾಮಠಾಣವಾಗಿದ್ದು,ಹಕ್ಕು ಪತ್ರ ಇಲ್ಲದೇ ಇರುವುದರಿಂದ,ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ,ಮನೆಗಳು ಕುಸಿಯುವ ಹಂತ ತಲುಪಿದ್ದು,ಕಳೆದ ವರ್ಷ ಗೋಡೆ ಕುಸಿತದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು ಎಂದರು.

ಅಲ್ಲದೇ ಇವರ ನಿವೇಶದ ಕಡತಗಳನ್ನು ಆಶ್ರಯ ಸಮಿತಿಯ ಮುಂದೆ ತಂದರೆ ಅದನ್ನು ಪಾಸ್ ಮಾಡಲಾಗುವುದು, ಮುದಾಯ ಭವನದ ಕಾಮಗಾರಿ ಸ್ಥಗಿತಗೊಂಡಿದ್ದು  ಭೂ ಸೇನಾ ನಿಗಮದವರು ಕಳಪೆ ಕಾಮಗಾರಿ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಜಿ. ಸತ್ಯವತಿ, ಮಾತ ನಾಡಿ, ಸರ್ಕಾರ 94ಸಿಸಿ ಯಲ್ಲಿ ಗ್ರಾಮ ಠಾಣ ಜಾಗದಲ್ಲಿ ಮನೆ ಕಟ್ಟಕೊಂಡಿದ್ದರೆ ಸಕ್ರಮ ಮಾಡಲು ಅವಕಾಶ ನೀಡಿದೆ. ಅರ್ಜಿಯನ್ನು ನೀಡದಿದ್ದರೆ ಸರ್ಕಾರ ಅರ್ಜಿ ಹಾಕಲು 3 ತಿಂಗಳ ಕಾಲಾವಕಾಶ ನೀಡಿದೆ.

ಅರ್ಜಿ ಸಲ್ಲಿಸದಿದ್ದರೆ ಅರ್ಜಿ ಹಾಕಿಸಿ ಹಕ್ಕುಪತ್ರ ಕೊಡಲು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಗೋಪಿ ನಾಥ್,ಮುಖ್ಯಾಧಿಕಾರಿ ಕುರಿಯಾಕೋಸ್ ಗೆ ಸೂಚಿಸಿ ದರು. ಇವರಿಗೆ ಹಕ್ಕುಪತ್ರ ಕೂಡಲು ಕ್ರಮ ಕೈಗೊಳ್ಳಲು ಸೂಚಿಸಿದರು. ಜಿಲ್ಲೆಯಲ್ಲಿ ಭೂ ಸೇನ ನಿಗಮದವರು ಕೈಗೊಂಡ ಕಾಮಗಾರಿ ಬಗ್ಗೆ  ದೂರುಗಳಿದ್ದು ಅದರ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಗಪ್ರಿಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್. ರಾಜಶೇಖರ್, ಉಪಾಧ್ಯಕ್ಷೆ ಸಾವಿತ್ರಿ, ಸದಸ್ಯರಾದ ನಾಗರತ್ನ. ಆಶಾ,ಸಮೀರಾ ನಯೀಂ, ತಹಶೀಲ್ದಾರ್ ಗೋಪಿನಾಥ್, ಮುಖ್ಯಾಧಿಕಾರಿ ಕುರಿಯಾ ಕೋಸ್,  ಪಿ.ಜೆ ಆಂಟೋನಿ, ಡಿ,ಎಸ್.,ಎಸ್ ಮುಖಂಡರಾದ ಮುಕುಂದ, ಡಿ ರಾಮು,ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT