ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾಮಾಣಿಕತೆ ಯಶಸ್ಸಿನ ಗುಟ್ಟು’

Last Updated 15 ಜುಲೈ 2017, 9:09 IST
ಅಕ್ಷರ ಗಾತ್ರ

ವಿಜಯಪುರ: ‘ಭಾವ ಪ್ರಾಮಾಣಿಕತೆ ಯಿಂದ ಯಶಸ್ಸಿನ ದಾರಿಯನ್ನು ಸುಲಭವಾಗಿ ತಲುಪಬಹುದು’ ಎಂದು 2016ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‌್ಯಾಂಕ್‌ ವಿಜೇತ ಅವಿನಾಶ ನಡುವಿನಮನಿ ಅಭಿಪ್ರಾಯಪಟ್ಟರು. ನಗರದ ಚಾಣಕ್ಯ ಕೆರಿಯರ್ ಅಕಾಡೆಮಿ ವತಿಯಿಂದ ಗುರುಸಂಗ ನಬಸವ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಸಾಧಕರಿಗೆ ಸನ್ಮಾನ’ ಸಮಾರಂಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಶಿಬಿರಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

‘ಪ್ರತಿಯೊಂದು ಕಾರ್ಯವನ್ನು ಪ್ರಾಮಾಣಿಕತೆಯಿಂದ ಕೈಗೊಂಡಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು. ‘ವಿದ್ಯಾರ್ಥಿ ಜೀವನದಲ್ಲಿ ಅನೇಕ ರೀತಿಯ ಅವಮಾನಗಳು ಆಗಬಹುದು. ಆ ಅವಮಾನಗಳಿಗೆ ಎದೆಗುಂದಬಾರದು, ಅವುಗಳನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮೂಲಕ ಉತ್ತರ ನೀಡಬೇಕು’ ಎಂಬ ಸಲಹೆ ನೀಡಿದರು.

ಕೊಪ್ಪಳ ಕನಕಗಿರಿಮಠದ ಡಾ.ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಶೀವರ್ಚನ ನೀಡಿ ‘ನಮ್ಮ ಅಂತಃಕರಣವನ್ನು ಗಟ್ಟಿ ಮಾಡಿಕೊಂಡಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ನಮ್ಮ ಮನಸ್ಸಿನಲ್ಲಿ ಗೊಂದಲಗಳಿದ್ದರೆ ಸಾಧನೆ ಮಾಡಲು ಸಾಧ್ಯವಾಗುವುದೇ ಇಲ್ಲ.

ನಮ್ಮಲ್ಲಿ ಬಾಹ್ಯಕರಣ, ಅಂತಃಕರಣ ಎಂಬ ಎರಡು ವಿಭಾಗಗಳಿವೆ, ಬಾಹ್ಯ ಕರಣಗಳಲ್ಲಿ ಕಣ್ಣು, ಕಿವಿ ಮೊದಲಾದ ಪಂಚೇಂದ್ರಿಯಗಳಿವೆ. ಕಣ್ಣು ನೋಡುವ ಕಾರ್ಯವನ್ನೇ ಮಾಡುತ್ತದೆ ಹೊರತು ಕೇಳಿಸುವ ಕಾರ್ಯ ಮಾಡುವುದಿಲ್ಲ, ಈ ಎಲ್ಲ ಅಂಗಗಳ ಕಾರ್ಯವ್ಯಾಪ್ತಿ ನಿರ್ದಿಷ್ಟವಾಗಿದೆ. ಈ ಎಲ್ಲವನ್ನೂ ನಿಯಂತ್ರಿಸು ವುದು ಮಾತ್ರ ಅಂತಃಕರಣ. ಈ ಕಾರಣಕ್ಕಾಗಿ ಅಂತಃಕರಣ ಗಟ್ಟಿ ಯಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು’ ಎಂದು ನುಡಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ ‘ಸಾಧನೆಗೆ ಬಡತನ, ಶ್ರೀಮಂತಿಕೆ ಎಂಬ ಕಟ್ಟುಪಾಡುಗಳಿಲ್ಲ. ನಿರಂತರ ಪ್ರಯತ್ನದಿಂದ ಸಾಧನೆಯ ಶಿಖರವನ್ನು ತಲುಪಬಹುದು’ ಎಂದರು.

‘ಸಾಲ ಮಾಡಿದರೂ ಚಿಂತೆಯಿಲ್ಲ, ಮಕ್ಕಳನ್ನು ದುಬಾರಿ ಕಾನ್ವೆಂಟ್ ಶಾಲೆಗೆ ಸೇರಿಸುವ ಪರಿಪಾಠ, ಮನೋಭಾವನೆ ಪಾಲಕರಲ್ಲಿ ಹೆಚ್ಚುತ್ತಿದೆ’ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಳವಳ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರಕುತ್ತದೆ. ಸರ್ಕಾರಿ ಶಾಲೆಯಲ್ಲಿ ಕಲಿತ ಅನೇಕರು ಇಂದು ಉನ್ನತವಾದ ಹುದ್ದೆ ಅಲಂಕರಿಸಿದ ಉದಾಹರಣೆ ಸಾಕಷ್ಟಿವೆ. ಆದ್ದ ರಿಂದ ಸಾಲ ಮಾಡಿ ಮಕ್ಕಳನ್ನು ದುಬಾರಿ ಶಾಲೆಗೆ ಕಳುಹಿಸುವ ಮನೋಭಾವದಿಂದ ಪಾಲಕರು ಹೊರ ಬರಬೇಕಾದ ಅವಶ್ಯಕತೆಯಿದೆ’ ಎಂದರು.

ಚಿಂತಕ ಅರವಿಂದ ಚೊಕ್ಕಾಡಿ ಮಾತನಾಡಿದರು. ಪ್ರೊ.ವೆಂಕಟೇಶ, ಚಾಣಕ್ಯ ಕೆರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ.ಬಿರಾದಾರ, ಮೂಲಿಮನಿ ಇದ್ದರು. ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾದ ಅಭ್ಯರ್ಥಿ ಗಳನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT