ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ದಾಳಿ: ಐಎಸ್‌ನ ಅಫ್ಗಾನಿಸ್ತಾನ ಮುಖ್ಯಸ್ಥ ಹತ್ಯೆ

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಅಮೆರಿಕ ಸೇನೆಯು ಕುನಾರ್‌ ಪ್ರಾಂತ್ಯದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಐಎಸ್‌ ಸಂಘಟನೆಯ ಅಫ್ಗಾನಿಸ್ತಾನದ ಮುಖ್ಯಸ್ಥ ಅಬು ಸಯೀದ್‌ ಸಾವನ್ನಪ್ಪಿದ್ದಾನೆ ಎಂದು ಪೆಂಟಗನ್‌ ತಿಳಿಸಿದೆ.

ಒಂದೇ ವರ್ಷದಲ್ಲಿ ಸಿರಿಯಾ ಹಾಗೂ ಖೂರ್ಸಾನ್‌ ಪ್ರಾಂತ್ಯದ ಮುಖ್ಯಸ್ಥನನ್ನು ಕಳೆದುಕೊಂಡಿದ್ದ ಐಎಸ್‌ ಸಂಘಟನೆ ಈಗ ಮತ್ತೊಬ್ಬ ಮುಖಂಡನನ್ನು ಕಳೆದುಕೊಂಡಿದೆ.

ಅಫ್ಗಾನಿಸ್ತಾನದ ಕುನಾರ್‌ ಪ್ರಾಂತ್ಯದಲ್ಲಿ ಜುಲೈ 11ರಂದು ನಡೆದ ದಾಳಿಯಲ್ಲಿ ಅಬು ಸಯೀದ್‌ ಹತ್ಯೆಯಾಗಿದ್ದಾನೆ ಎಂದು ಪೆಂಟಗನ್‌ ವಕ್ತಾರ ದಾನಾ ವೈಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT