ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಾವಳಿ: ಏಲಕ್ಕಿ, ಕಾಫಿ ಬೆಳೆ ನಾಶ

Last Updated 16 ಜುಲೈ 2017, 8:08 IST
ಅಕ್ಷರ ಗಾತ್ರ

ಹೆತ್ತೂರು: ಹೋಬಳಿಯ ಕಿರ್ಕಳ್ಳಿ  ಗ್ರಾಮದಲ್ಲಿ ಕಾಡಾನೆಗಳು ಏಲಕ್ಕಿ, ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ತುಳಿದು ಹಾಳು ಮಾಡಿವೆ.

ಗ್ರಾಮದ ರವಿಕುಮಾರ್, ಧರ್ಮರಾಜ್, ಬಸವರಾಜು, ಜಯಪ್ಪಗೌಡ ಅವರ ಜಮೀನಿಗೆ ನುಗ್ಗಿದ  5 ಕಾಡಾನೆಗಳಿರುವ ಹಿಂಡು ಅಪಾರ ಪ್ರಮಾಣದ ಬೆಳೆಯನ್ನು ನಷ್ಟಪಡಿಸಿದೆ.
ವಾರದಿಂದ ಪಕ್ಕದ ಅರಣ್ಯದಲ್ಲಿ ವಾಸ್ತವ್ಯ ಹೂಡಿರುವ ಆನೆಗಳು ರಾತ್ರಿ ಸಮಯಲ್ಲಿ ತೋಟ, ಗದ್ದೆಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ.

ಸಮೀಪದ ಗ್ರಾಮಗಳಾದ ಹಾಡ್ಲಹಳ್ಳಿ, ಮೆಕ್ಕಿರಮನೆ, ಜಾತಹಳ್ಳಿ, ಬೂಬ್ಬನಹಳ್ಳಿಗಳ ತೋಟಗಳಲ್ಲೂ ದಾಂದಲೆ ನಡೆಸಿದವು. ಬಾಳೆ, ಕಾಳುಮೆಣಸುಗಳನ್ನು ತುಳಿದು ಹಾಕಿವೆ. 5 ದಿನಗಳ ಹಿಂದೆ ಮಟಗೂರು ಗ್ರಾಮ ಬೆಳ್ಳಿಯಪ್ಪ ಅವರ ಹುಲ್ಲಿನ ಮೆದೆಯನ್ನು ಕೆಡವಿ ಹಾಳು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT