ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪದಿಂದ ‘ಮನೆಗೊಂದು ಮರ ಮನಸಿಗೊಂದು ಪುಸ್ತಕ’ ವಿತರಣೆ

Last Updated 16 ಜುಲೈ 2017, 10:02 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ಅರಣ್ಯ ಇಲಾಖೆ, ಭಾರತ ವಿಕಾಸ ಪರಿಷತ್‌ ವೆಂಕಟೇಶ್ವರ ಯುವಕ ಸಂಘ, ಭುವನೇಶ್ವರಿ ಕನ್ನಡ ಸಂಘ, ಕ್ರಿಯಾಶೀಲ ಬಳಗ ಇವರ ಸಹಯೋಗ ದಲ್ಲಿ ನಡೆದ ವನಮಹೋತ್ಸವದಲ್ಲಿ ‘ಮನೆಗೊಂದು ಗಿಡ ಮನಸಿಗೊಂದು ಪುಸ್ತಕ’ ವಿತರಣೆ ಕಾರ್ಯಕ್ರಮ ಪಟ್ಟಣದ ಆಸರಕೇರಿಯಲ್ಲಿ ಶುಕ್ರವಾರ ನಡೆಯಿತು.

ನಿಚ್ಛಲಮಕ್ಕಿ ತಿರುಮಲ ವೆಂಕಟ ರಮಣ ದೇವಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಆಸರಕೇರಿಯ ಮನೆಗಳಿಗೆ ತೆರಳಿ ಮನೆಗೊಂದು ಸಸಿ ಜೊತೆಗೆ ಪುಸ್ತಕವನ್ನು ನೀಡಲಾಯಿತು. ಗಿಡ ಮರಗಳ ಮಹತ್ವದ ಕುರಿತ ವಿವರಗಳು ಹಾಗೂ ಪುಸ್ತಕಗಳು ನಮ್ಮ ಬದುಕಿಗೇಕೆ ಬೇಕು ಎಂಬ ಮಹತ್ವವನ್ನು ಸಾರುವ ನಾಡಿನ ಹಿರಿಯ ಸಾಹಿತಿ ವಿ. ಗ. ನಾಯಕರ ‘ಪುಸ್ತಕ ಪ್ರೀತಿ’ ಎಂಬ ಲೇಖನವನ್ನೂ ನೀಡಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಎಂ. ಆರ್ ನಾಯ್ಕ, ಭಾರತ ವಿಕಾಸ ಪರಿಷತ್‌ ಅಧ್ಯಕ್ಷ ವಿರೇಂದ್ರ ಶ್ಯಾನಭಾಗ, ವಲಯ ಅರಣ್ಯಾಧಿಕಾರಿ ರವೀಂದ್ರ, ಕಸಾಪ ಗೌರವ ಸಲಹೆಗಾರ ಅನಂತ ನಾಯ್ಕ ಉಗ್ರಾಣಿಮನೆ, ಗೌರವ ಕಾರ್ಯದರ್ಶಿ ಎಂ. ಪಿ ಭಂಡಾರಿ, ಸಂಘಟನಾ ಕಾರ್ಯ ದರ್ಶಿ ಪ್ರಕಾಶ ಶಿರಾಲಿ, ಸಂತೋಷ ಆಚಾರ್ಯ, ನಿತ್ಯಾನಂದ ಭಟ್, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ಮನೋಜ ನಾಯ್ಕ, ಕಾರ್ಯದರ್ಶಿ ಪಾಂಡು ನಾಯ್ಕ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ, ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ,ರಿಕ್ಷಾ ಯೂನಿಯನ್ ಅಧ್ಯಕ್ಷ ವೆಂಕಟೇಶ ನಾಯ್ಕ, ವೆಂಕಟೇಶ ಮೊಗೇರ ಎಂ. ಎಸ್. ನಾಯ್ಕ ಹಾಗೂ ಕ್ರಿಯಾಶೀಲ ಬಳಗದ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT