ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ರೈತರಿಗೆ ₹3ಲಕ್ಷ ಅನುದಾನ ವಿತರಣೆ

Last Updated 16 ಜುಲೈ 2017, 10:22 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಪಿಂಜಾರ್‌ ಹೆಗ್ಡಾಳ್ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಮಲ್ಲಿಗೆ ಕೃಷಿ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು.
ಯೋಜನೆಯ ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಾಲ್ಲೂಕಿನಲ್ಲಿ  ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಅನುದಾನ ರೂಪದಲ್ಲಿ ₹3ಲಕ್ಷಗಳನ್ನು 120 ಕುಟುಂಬಗಳಿಗೆ ಮೀಸಲಿರಿಸಲಾಗಿದೆ.

ರೈತರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಿಂದ ವಿವಿಧ ಉದ್ಧೇಶಗಳಿಗೆ ₹52 ಕೋಟಿ ಮೊತ್ತವನ್ನು ಸದರಿ ವರ್ಷದಲ್ಲಿ ವಿತರಿಸುವ ಗುರಿ ಹೊಂದಲಾಗಿದೆ. ವಲಯ ಮಟ್ಟದಲ್ಲಿ ಮಲ್ಲಿಗೆ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಪೂರಕವಾಗಿ ದುಂಡು ಮಲ್ಲಿಗೆ, ಕನಕಾಂಬರ ಕೃಷಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗು ವುದು ಎಂದು ತಿಳಿಸಿದರು.

ಕೃಷಿ ವಿಸ್ತರಣಾ ಕೇಂದ್ರದ ಡಾ.ಸಿ.ಎಂ.ಕಾಲಿ ಬಾವಿ ಮಾತ ನಾಡಿ, ಪುಷ್ಪ ಕೃಷಿ ಬೆಳೆಗೆ ಪೂರಕವಾಗಿ ಮಲ್ಲಿಗೆ ಕೃಷಿ, ಸುಗಂಧ ರಾಜ, ಕನಕಾಂಬರ, ದುಂಡು ಮಲ್ಲಿಗೆ, ಕಾಕಡ ಮಲ್ಲಿಗೆ ಮುಂತಾದ ಹೂವಿನ ಬೇಸಾಯದಲ್ಲಿ ಪ್ರಥಮವಾಗಿ ಮಣ್ಣು ಮತ್ತು  ನೀರು ಪರೀಕ್ಷೆ ಮಾಡಿಸಬೇಕು ಎಂದರು. 

ತಂಡು ಭೂಮಿಯಲ್ಲಿ ಹಿಂಡು ಬೆಳೆ ಬೆಳೆದ ಕೊಪ್ಪಳ ತಾಲ್ಲೂಕಿನ ರೈತ ಬಸಪ್ಪ ಮಾತನಾಡಿದರು. ಹೂವಿನ ಕೃಷಿ ಯಿಂದ ಆದಾಯ ಮತ್ತು ಸಾವಯವ ಪದ್ದತಿ ಯಲ್ಲಿ ಔಷಧಿ ತಯಾರಿಕೆ, ರೋಗ ಗಳನ್ನು ತಡೆಗಟ್ಟುವ ಕ್ರಮಗಳನ್ನು ತಿಳಿಸಿದರು. ಯೋಜನೆ ಜಿಲ್ಲಾ ನಿರ್ದೇಶಕ ವಿನಯ್‌ ಕುಮಾರ್‌, ತಾಲ್ಲೂಕು ಯೋಜ ನಾಧಿಕಾರಿ ಚಂದ್ರಶೇಖರ್‌, ತೋಟ ಗಾರಿಕೆ ಇಲಾಖೆಯ ಜಿ.ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT