ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಸಲು ಸಲಹೆ

Last Updated 16 ಜುಲೈ 2017, 10:26 IST
ಅಕ್ಷರ ಗಾತ್ರ

ಬಾದಾಮಿ: ‘ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆಯಾಗಿದೆ. 2000 ವರ್ಷಗಳ ಇತಿಹಾಸದ ಪ್ರಾಚೀನತೆಯನ್ನು ಪಡೆದಿದೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಕನ್ನಡ ಭಾಷೆಯನ್ನು ಬಳಸುವುದರ ಮೂಲಕ ಅನುಷ್ಠಾನಕ್ಕೆ ತರಬೇಕು’ ಎಂದು ಜಿಲ್ಲಾ ನ್ಯಾಯಾಧೀಶ ಅನಿಲ ಕಟ್ಟಿ ಹೇಳಿದರು.

ರಾಜ್ಯ ಕನ್ನಡ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ನ್ಯಾಯಾಲಯದ ವಕೀಲರ ಸಭಾ ಭವನದಲ್ಲಿ ಜರುಗಿದ ‘ಕನ್ನಡ ಚಿಂತನ ಮತ್ತು ನ್ಯಾಯಾಂಗದಲ್ಲಿ ಕನ್ನಡ ಬಳಕೆ’ ಸಮಾರಂಭಕ್ಕೆ ಅವರು ಚಾಲನೆ ನೀಡಿದರು.

‘ಕ್ಷಕ್ಷಿದಾರನಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಬರಲು ನ್ಯಾಯಾಲಯವು ಮಾತೃಭಾಷೆಯಲ್ಲಿ ತೀರ್ಪು ಕೊಡಬೇಕು. ಕನ್ನಡ ಭಾಷೆಯ ಬಳಕೆಯ ಬಗ್ಗೆ ಪ್ರತಿಯೊಬ್ಬರಲ್ಲಿ ಆತ್ಮವಿಶ್ವಾಸ ಮೂಡಬೇಕು ’ ಎಂದರು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನ್ಯಾಯಾಲಯಗಳಿಗೆ ಕನ್ನಡ ಭಾಷೆಯ ಬಳಕೆ ಬಗ್ಗೆ ಗ್ರಂಥಗಳನ್ನು ಪೂರೈಸಿದೆ. ಕನ್ನಡ ಭಾಷೆಯನ್ನು ಬಳಕೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಸರ್ಕಾರ ಗೌರವಿಸಿದೆ. ಎಲ್ಲ ನೌಕರರು ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು’ ಎಂದು ಅವರು  ಹೇಳಿದರು.

ಕನ್ನಡ ಭಾಷೆಯನ್ನು ನ್ಯಾಯಾಲಯದಲ್ಲಿ ಸಂಪರ್ಕ ಭಾಷೆಯನ್ನಾಗಿ ಬೆಳೆಸಬೇಕು. ಕನ್ನಡ ಭಾಷೆ ಅನುಷ್ಠಾನಕ್ಕೆ ಬರಲು ಭಾಷೆಯನ್ನು ಬಳಸುವುದರಲ್ಲಿ ಎಲ್ಲರೂ ಬದ್ಧರಾಗಿರಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಎ.ಎಚ್‌. ಶೇಖ್‌ ಹೇಳಿದರು.

ನ್ಯಾಯಾಲಯದಲ್ಲಿ ಕನ್ನಡ ಭಾಷೆಯನ್ನು ಬಳಸಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದ ಚಿಕ್ಕಬಳ್ಳಾಪುರ ನ್ಯಾಯಾಧೀಶ ಎಸ್‌.ಎಂ. ಅರುಟಗಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಜಿ.ಜಿ. ಹಿರೇಮಠ ‘ಆಡಳಿತದಲ್ಲಿ ಕನ್ನಡ ಮತ್ತು ಸರೋಜನಿ ಮಹಿಷಿ ವರದಿ’ ಕುರಿತು ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಜಿ.ಕೆ. ಶಿವಪ್ಪಯ್ಯನಮಠ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಪಿ.ಎಸ್‌. ಮನ್ನೊಳ್ಳಿ, ಆರ್.ಎಂ. ಶಿರೂರ, ಎಂ.ಪಿ. ಮೋಹಿತೆ, ತಹಶೀಲ್ದಾರ್‌ ಎಸ್‌. ರವಿಚಂದ್ರ, ಎಸ್‌.ಎಸ್‌. ಮಿಟ್ಟಲಕೋಡ, ಎನ್‌.ಬಿ. ಹೊಸಮನೆ, ವಿ.ಕೆ. ಧಾರವಾಡಕರ ವೇದಿಕೆಯಲ್ಲಿ ಇದ್ದರು. ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಬಿ. ಕಲಹಾಳ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT