ಅನುಕರಣೆ

ಕೂಸಿಗೊಂದು ಕಲಿಕೆ

ಒಂದು ತಿಂಗಳಿನಿಂದ ಒಂದು ವರ್ಷದವರೆಗಿನ ಮಗುವಿಗೂ ಅಭಿವ್ಯಕ್ತಿಸುವ ಕಲೆ ಕಲಿಸಬಹುದು. ಅದು ಕೆಲ ಶಬ್ಧ ಹಾಗು ಸನ್ನೆಗಳ ಮೂಲಕ. ಮಗುವಿಗೆ ಹೀಗೆ ಸನ್ನೆ, ಶಬ್ಧಗಳನ್ನು ಕಲಿಸುವ ಶಾಲೆ, ತರಬೇತುದಾರರು ಇದ್ದಾರೆ. ಆದರೆ ಮನೆಯಲ್ಲೇ ಹೇಗೆ ಮಗುವಿಗೆ ಶಬ್ಧ, ಸನ್ನೆಯ ಮೂಲಕ ಅಭಿವ್ಯಕ್ತಿ ಕಲೆ ಕಲಿಸಬಹುದು ಎಂಬ ಮಾಹಿತಿ ಇಲ್ಲಿದೆ.

ಕೂಸಿಗೊಂದು ಕಲಿಕೆ

ಅನುಕರಣೆ:

ಇನ್ನೂ ಮಾತು ಕಲಿಯದ ಮಗು ತನ್ನ ಭಾವನೆಯ ಅಭಿವ್ಯಕ್ತಿಗೆ ತನ್ನದೇ ಆದ ಶಬ್ದಗಳನ್ನು ಬಳಸುತ್ತದೆ. ಕೆಲ ಬಾರಿ ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ನೀವೇ ಹಾಲು ನೀಡುವಾಗ ಪಾಪು ತಕೋ ‘ಮಮ್ ಮಮ್‌’ ಎನ್ನೋದು, ಕೊಡು ಎನ್ನುವುದಕ್ಕೆ ‘ತಾ’ ಎನ್ನುವುದನ್ನು ಮಗುವಿನ ಮುಂದೆ ಹೇಳುತ್ತೀರಿ. ಮಗು ಅದನ್ನು ಅನುಕರಣೆ ಮಾಡುತ್ತದೆ. ಇದರಿಂದ ಅದಕ್ಕೆ ಏನು ಬೇಕು ಎನ್ನುವುದನ್ನು ಆ ಅನುಕರಣೆ ಶಬ್ಧಗಳ ಮೂಲಕ ತಿಳಿಸುತ್ತದೆ.

***

ಓದಿ.. ಓದಿ.. ಓದುತ್ತಿರಿ...

ಮಗುವಿನ ಮುಂದೆ ಪುಸ್ತಕ ತೆರೆದು ಮೆಲು ದನಿಯಲ್ಲಿ ಓದಿ, ಮಗುವಿನ ಚಿತ್ತ ನಿಮ್ಮತ್ತ ಇರುವಂತೆ ನೋಡಿಕೊಳ್ಳಿ, ಓದುವುದರ ಜೊತೆ ಧ್ವನಿಯ ಏರು ತಗ್ಗೂ ಇರಲಿ. ಕೊಂಚ ಕೈ ಸನ್ನೆ, ಕಣ್ಣುಗಳ ಮೂಲಕ ಸಂಕೇತಗಳನ್ನು ನೀಡಿ ಇದನ್ನು ಮಗು ಗಮನಿಸುತ್ತಾ ತಾನೂ ಹೀಗೆ ಮಾಡಲು ಪ್ರಯತ್ನಿಸುತ್ತದೆ.

***

ಕಲ್ಪನೆ, ಕ್ರಿಯಾಶೀಲತೆ

ಮಗುವಿನ ಯೋಚನಾ ಲಹರಿಯ ಕೌಶಲವನ್ನು ಉತ್ತಮಗೊಳಿಸಲು ಗೊಂಬೆಗಳನ್ನು ಇಟ್ಟುಕೊಂಡು ಕತೆ ಹೇಳಿ. ಬೆರಳಿಗೆ ಹಾಕಿಕೊಂಡು ಆಡಿಸಬಹುದಾದ ಗೊಂಬೆಗಳು (ಫಿಂಗರ್ ಪಪೆಟ್‌) ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳ ಮೂಲಕ ಕತೆ ಹೇಳಿ.

ಸಂಗೀತ ಹೊಮ್ಮುವ ಆಟದ ಸಾಮಾನು

ಸಂಗೀತ ಹೊಮ್ಮಿಸುವ ಸಾಮಾನುಗಳೊಂದಿಗೆ ಆಟವಾಡಲು ಮಗುವಿಗೆ ಪ್ರೋತ್ಸಾಹಿಸಿ. ಹೊಡೆಯುವುದು, ಊದುವುದರ ಮೂಲಕ ಸಂಗೀತ ಬರುವ ಸಾಮಾನುಗಳಿಂದ ಆಡಿದರೆ ಮಗುವಿನ ಗ್ರಹಿಕಾ ಶಕ್ತಿ ಉತ್ತಮಗೊಳ್ಳುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಶ್ನೋತ್ತರ

ಪುರವಣಿ
ಪ್ರಶ್ನೋತ್ತರ

17 Jan, 2018
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

ಪುರವಣಿ
ನೆಮ್ಮದಿ ಬದುಕಿಗೆ ಹಾದಿಯಾದ ಹೈನೋದ್ಯಮ

16 Jan, 2018
ಸುಗ್ಗಿ–ಹುಗ್ಗಿ

ಪಿಕ್ಚರ್‌ ಪ್ಯಾಲೇಸ್‌
ಸುಗ್ಗಿ–ಹುಗ್ಗಿ

15 Jan, 2018
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

ಒಳಾಂಗಣ
ಗೋಡೆಗಳಿಗೊಂದು ಬಣ್ಣದ ಸ್ಪರ್ಶ

12 Jan, 2018
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

ರಸಾಸ್ವಾದ
ಖಾದಿ ಉತ್ಸವ, ದೇಸಿ ತಿನಿಸುಗಳ ಘಮ

11 Jan, 2018