ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೋಳುರಹಿತ ಉಡುಗೆ ಹಕ್ಕು’: ಸಂಸದೆಯರಿಂದ ಪ್ರತಿಭಟನೆ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಶ್ವೇತಭವನದಲ್ಲಿ ‘ತೋಳುರಹಿತ ಉಡುಗೆಗಳನ್ನು ತೊಡುವ ಹಕ್ಕು’ ಬೆಂಬಲಿಸಿ 30ಕ್ಕೂ ಹೆಚ್ಚು ಸಂಸದೆಯರು ತೋಳುರಹಿತ ಉಡುಗೆ ಧರಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಸ್ಪೀಕರ್‌ ಕಚೇರಿಯಲ್ಲಿ ತೋಳುರಹಿತ ಉಡುಗೆಗಳನ್ನು ಧರಿಸಬಾರದು ಎನ್ನುವ ನಿಯಮ ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು.

‘ಇದು 2017. ಮಹಿಳೆಯರು ಮತ ಚಲಾಯಿಸುತ್ತಾರೆ. ಉದ್ಯೋಗ ನಿರ್ವಹಿಸುತ್ತಾರೆ ಮತ್ತು ತಮ್ಮದೇ ಆದ ಜೀವನಶೈಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ನಿಯಮಗಳು ಈಗಿನ ಕಾಲಕ್ಕೆ ತಕ್ಕದಾಗಿ ಇರುವಂತೆ ನೋಡಿಕೊಳ್ಳುವ ಸಮಯ ಬಂದಿದೆ’ ಎಂದು ಸಂಸದೆ ಚೆಲ್ಲಿ ಪಿಂಗ್ರೀ ಟ್ವೀಟ್‌ ಮಾಡಿದ್ದಾರೆ.

ದೀರ್ಘಕಾಲದಿಂದ ಇರುವ ಈ ನಿಯಮದ ಅನುಸಾರ ವರದಿಗಾರ್ತಿಯರು ಹಾಗೂ ಸಂಸದೆಯರು ಸ್ಪೀಕರ್‌ ಕಚೇರಿ ಪ್ರವೇಶಿಸಲು ತೋಳು ಇರುವ ಉಡುಪುಗಳನ್ನು ಧರಿಸುವುದು ಕಡ್ಡಾಯ. ಪುರುಷರು ಜಾಕೆಟ್‌ ಹಾಗೂ ಟೈ ಧರಿಸುವುದು ಕಡ್ಡಾಯವಾಗಿದೆ.

ವರದಿಗಾರ್ತಿಯೊಬ್ಬರು ವಸ್ತ್ರಸಂಹಿತೆ ಅನುಸರಿಸಿಲ್ಲ ಎನ್ನುವ ಕಾರಣದಿಂದ ಅವರಿಗೆ ಪ್ರವೇಶ ನಿರಾಕರಿಸಿದ ವಿಷಯವನ್ನು ಸಿಬಿಎಸ್‌್ ನ್ಯೂಸ್‌ ಈಚೆಗೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT