ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತದತ್ತ ಮಹಿಳಾ ಚಳವಳಿಗಳು: ವಿಷಾದ

Last Updated 16 ಜುಲೈ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳಾ ಚಳವಳಿಗಳು ಪಕ್ಷ, ಧರ್ಮ, ಜಾತಿಗೆ ಸೀಮಿತವಾಗುತ್ತಿವೆ ಎಂಬ ಆರೋಪ ಇದೆ. ಇದು ನಿಜವಾದರೆ ಅಂತಹ ದುರಂತ ಮತ್ತೊಂದಿಲ್ಲ’ ಎಂದು ವಿಮರ್ಶಕ ಸಿ.ಎನ್‌. ರಾಮಚಂದ್ರನ್‌ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಲೇಖಕಿಯರ ಸಂಘ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಎಚ್.ಎಸ್. ಪಾರ್ವತಿ ದತ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಯತ್ರಿ ನಾವಡ ಅವರಿಗೆ ಈ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುರಸ್ಕಾರ 10,000 ನಗದು ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ.

‘ಮಹಿಳೆ ಮತ್ತು ಪುರುಷ ವಿಶ್ವವನ್ನು ನೋಡುವ ಸ್ವರೂಪವೇ ಭಿನ್ನ. ಗಾಯತ್ರಿ ನಾವಡ ಅವರು ತಮ್ಮ ‘ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು’ ಕೃತಿಯಲ್ಲಿ ಅದನ್ನು ದಾಖಲಿಸಿದ್ದಾರೆ’ ಎಂದು ತಿಳಿಸಿದರು.

ಗಾಯತ್ರಿ ನಾವಡ ಮಾತನಾಡಿ, ‘ಅಧ್ಯಯನ ಹಾಗೂ ಸಂಶೋಧನೆ ಎನ್ನುವುದು ತಪಸ್ಸಿನ ರೀತಿ. ನಾನು ಅದನ್ನು ಮೌನವಾಗಿಯೇ ಮಾಡಿಕೊಂಡು ಹೋಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT