ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣದಿಂದ ಮೀಸಲು ತೆಗೆವ ಹುನ್ನಾರ

Last Updated 17 ಜುಲೈ 2017, 7:28 IST
ಅಕ್ಷರ ಗಾತ್ರ

ಹೊಸಪೇಟೆ: ‘ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ಸರ್ಕಾರ ಮೀಸಲಾತಿ ತೆಗೆಯುವ ಹುನ್ನಾರ ನಡೆಸಿದೆ. ಇದರ ಬಗ್ಗೆ ದಲಿತರು ಹಾಗೂ ಹಿಂದುಳಿದ ವರ್ಗದವರು ಎಚ್ಚರದಿಂದ ಇರಬೇಕು’ ಎಂದು ದಲಿತ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಆರ್‌. ಮೋಹನ್‌ರಾಜ್‌ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲ್ಲೂಕು ಘಟಕವು ಭಾನುವಾರ ನಗರದ ಪಂಪ ಕಲಾ ಮಂದಿರದಲ್ಲಿ ಆಯೋಜಿಸಿದ್ದ ‘ಸಂವಿ ಧಾನ ಬಚಾವೋ, ದೇಶ್‌ ಬಚಾವೋ’ ಹಾಗೂ ಮಹಿಳಾ ಜಾಗೃತಿ ಸಮಾವೇಶ ದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಭಾಷೆ, ಒಂದು ದೇಶ ಒಂದು ಧರ್ಮ ಎಂಬ ಹೆಸರಿನಲ್ಲಿ ಮನುವಾದದ ಸಿದ್ಧಾಂತವನ್ನು ಹೇರುವ ಪ್ರಯತ್ನ ನಡೆಸಲಾಗುತ್ತಿದೆ. ಅಷ್ಟೇ ಅಲ್ಲ ‘ಮೇಕ್‌ ಇನ್‌ ಇಂಡಿಯಾ’ ಹೆಸರಿನಲ್ಲಿ ಹೊರಗಿನವರಿಗೆ ದೇಶದ ಸಂಪತ್ತು ಲೂಟಿ ಹೊಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

‘ಚುನಾಯಿತ ಸರ್ಕಾರಗಳು ಅಷ್ಟೇ ಅಲ್ಲ, ನ್ಯಾಯಾಲಯಗಳು ಶೋಷಿತ ವರ್ಗಗಳ ವಿರುದ್ಧವಾಗಿ ತೀರ್ಪು ನೀಡು ತ್ತಿವೆ. ಇದಕ್ಕೆ ಸಾಕ್ಷಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಡ್ತಿಯಲ್ಲಿ ಮೀಸಲಾತಿ ಕೊಡುವುದು ಬೇಡ ಎಂದು ನ್ಯಾಯಾಲಯ ತೀರ್ಪು ಕೊಟ್ಟಿರುವುದು’ ಎಂದರು.

‘ಭೂಮಿ ಮತ್ತು ವಸತಿ ಹಕ್ಕಿಗಾಗಿ ಅನೇಕ ವರ್ಷಗಳಿಂದ ದಲಿತರು ಹೋರಾಟ ನಡೆಸುತ್ತಿದ್ದಾರೆ. ಸಮಾಜ ವಾದಿ ಹಿನ್ನೆಲೆಯ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾದ ನಂತರ ಅದು ಈಡೇರಬಹುದು ಎಂಬ ಭರವಸೆ ಮೂಡಿತ್ತು. ಆದರೆ, ಅವರ ಸರ್ಕಾರ ನಾಲ್ಕು ವರ್ಷ ಪೂರೈಸಿದರೂ ಬೇಡಿಕೆ ಈಡೇರಿಲ್ಲ. ಕೇವಲ ಅಕ್ಕಿ ಕೊಟ್ಟರೆ ಸಾಲದು. ಭೂಮಿ ಕೊಡಬೇಕು. ಎಲ್ಲ ರಾಜಕೀಯ ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ದಲಿತರನ್ನು ದಿಕ್ಕು ತಪ್ಪಿಸುತ್ತಿವೆ’ ಎಂದು ಆರೋಪ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಸಾಹಿತಿ ಜಯದೇವಿ ಗಾಯಕ ವಾಡ್‌, ‘ಗೌತಮ ಬುದ್ಧ ಆರನೇ ಶತಮಾನದಲ್ಲಿಯೇ ಮಹಿಳೆಯರಿಗೆ ಧಾರ್ಮಿಕ ಹಕ್ಕು ನೀಡಿದ್ದ. 500 ಮಹಿಳೆಯರಿಗೆ ಬೌದ್ಧ ಧರ್ಮದ ದೀಕ್ಷೆ ಕೊಟ್ಟಿದ್ದ. ನಂತರ 12ನೇ ಶತಮಾನದ ಶರಣ ಚಳವಳಿಯಲ್ಲಿ 35 ದಲಿತ ಮಹಿಳೆಯರು ವಚನಕಾರ್ತಿಯಾದರು.

ಅಷ್ಟೇ ಅಲ್ಲ, ಪುರುಷನ ಯಜಮಾನಿಕೆ ಯನ್ನು ಪ್ರಶ್ನಿಸಿದರು. ಬಳಿಕ ಸಾವಿತ್ರಿ ಬಾಯಿ ಫುಲೆ, ಶಾಹು ಮಹಾರಾಜರು ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಅಸ್ಪೃಶ್ಯರ ಕಲ್ಯಾಣಕ್ಕೆ ಶ್ರಮಿಸಿ, ಮೀಸಲಾತಿ ಒದಗಿಸಿದರು. ಆದರೆ, ಇಂದು ಅದನ್ನು ಮೊಟಕುಗೊಳಿಸಲು ಹುನ್ನಾರ ನಡೆಸಲಾಗುತ್ತಿದೆ’ ಎಂದರು.

‘ಸಂವಿಧಾನ, ವೈಚಾರಿಕ ವಿಷಯಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾ ಗುತ್ತಿದೆ. ಹಿಂದುತ್ವದ ಅಜೆಂಡಾವನ್ನು ಬಿತ್ತಲಾಗುತ್ತಿದೆ. ದಲಿತರ ನಡುವಿನ ವೈಮನಸ್ಸಿನಿಂದ ಅಂಬೇಡ್ಕರ್‌ ಅವರ ಆಶಯಗಳು ಈಡೇರುತ್ತಿಲ್ಲ. ಇದರ ಬಗ್ಗೆ ಎಲ್ಲ ದಲಿತ ಸಂಘಟನೆಗಳು ಗಂಭೀರ ವಾಗಿ ಯೋಚಿಸಬೇಕು’ ಎಂದು ತಿಳಿಸಿದರು.

‘ಯಾವುದೇ ವರ್ಗದ ಮಹಿಳೆ ಮೇಲೆ ದೌರ್ಜನ್ಯ ನಡೆದರೆ ಅದರ ವಿರುದ್ಧ ಧ್ವನಿ ಎತ್ತಬೇಕು. ಆದರೆ, ಹಾಗಾಗುತ್ತಿಲ್ಲ. ನಿರ್ಭಯಾ ಮೇಲೆ ಅತ್ಯಾಚಾರ ನಡೆದಾಗ ಇಡೀ ದೇಶ ಸಿಡಿದೆದ್ದಿತ್ತು. ಆದರೆ, ಉತ್ತರ ಪ್ರದೇಶ ದಲ್ಲಿ ಇಬ್ಬರು ದಲಿತ ಯುವತಿಯರ ಮೇಲೆ ಅತ್ಯಾಚಾರ ನಡೆಸಿ, ಮರಕ್ಕೆ ನೇಣಿಗೆ ಹಾಕಿದಾಗ ಯಾರೊಬ್ಬರೂ ಅದರ ವಿರುದ್ಧ ಧ್ವನಿ ಎತ್ತಲಿಲ್ಲ. ಇಂತಹ ವಿಷಯದಲ್ಲೂ ತರತಮ ನಡೆಯುತ್ತಿರು ವುದು ಒಳ್ಳೆ ಬೆಳವಣಿಗೆಯಲ್ಲ’ ಎಂದರು.

ಮಹಿಳಾ ಒಕ್ಕೂಟದ ರಾಜ್ಯ ಸಂಚಾ ಲಕಿ ಇಂದುಮತಿ ಎಸ್‌. ಶಿರಗಾವಿ, ಸಂಘ ಟನಾ ಸಂಚಾಲಕಿ ದುರ್ಗಮ್ಮ, ಜಿಲ್ಲಾ ಸಂಘಟನಾ ಸಂಚಾಲಕಿ ಸಾವಿ ತ್ರಮ್ಮ, ಕಾಂಗ್ರೆಸ್‌ ಮುಖಂಡ ಮಹ ಮ್ಮದ್‌ ಇಮಾಮ್‌ ನಿಯಾಜಿ, ದಲಿತ ಮುಖಂಡ ರಾದ ಗ್ಯಾನಪ್ಪ ಬಡಿಗೇರ, ಜಿ. ಶಿವಕು ಮಾರ, ಕಪ್ಪಗಲ್ಲು ಓಂಕಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT