ಬೀಜಿಂಗ್‌

ಟಿಬೆಟ್‌ನಲ್ಲಿ ಚೀನಾ ಸೇನೆಯ ಶಸ್ತ್ರಾಭ್ಯಾಸ

ಟಿಬೆಟ್‌ ವಲಯದಲ್ಲಿ ಚೀನಾ ಸೇನೆಯು ಶಸ್ತಾಸ್ತ್ರಗಳ ಅಭ್ಯಾಸ ನಡೆಸಿದ್ದು, ಗುಂಡಿನ ಮಳೆ ಹರಿದಿರುವುದಾಗಿ ಚೀನಾ ಮಾಧ್ಯಮ ವರದಿ ಮಾಡಿದೆ.

ಟಿಬೆಟ್‌ನಲ್ಲಿ ಚೀನಾ ಸೇನೆಯ ಶಸ್ತ್ರಾಭ್ಯಾಸ

ಬೀಜಿಂಗ್‌: ಟಿಬೆಟ್‌ ವಲಯದಲ್ಲಿ ಚೀನಾ ಸೇನೆಯು ಶಸ್ತಾಸ್ತ್ರಗಳ ಅಭ್ಯಾಸ ನಡೆಸಿದ್ದು, ಗುಂಡಿನ ಮಳೆ ಹರಿದಿರುವುದಾಗಿ ಚೀನಾ ಮಾಧ್ಯಮ ವರದಿ ಮಾಡಿದೆ.

ಸಿಕ್ಕಿಂ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಡುವೆ ಟಿಬೆಟ್‌ನಲ್ಲಿ ಚೀನಾ 11 ಗಂಟೆಗಳ ಸಮರಾಭ್ಯಾಸ ನಡೆಸಿದೆ. ಜುಲೈ 14ರಂದು ಚೀನಾ ನೈಋತ್ಯ ಭಾಗದ 5,100 ಮೀಟರ್ ಎತ್ತರದ ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ  ಪೀಪಲ್ಸ್‌ ಲಿಬರೇಷನ್‌ ಆರ್ಮಿ(ಪಿಎಲ್‌ಎ) ಶಸ್ತಾಸ್ತ್ರಗಳ ಅಭ್ಯಾಸ ನಡೆಸಿರುವುದಾಗಿ ಚೀನಾ ಸೆಂಟ್ರಲ್‌ ಟೆಲಿವಿಷನ್‌(ಸಿಸಿಟಿವಿ) ವರದಿ ಮಾಡಿದೆ.

ಟ್ಯಾಂಕರ್‌ ನಾಶ ಪಡಿಸುವ ಗ್ರೆನೇಡ್‌ಗಳು, ಬಂಕರ್‌ಗಳನ್ನು ಸ್ಫೋಟಿಸಲು ಬಳಸುವ ಕ್ಷಿಪಣಿಗಳು ಹಾಗೂ ಯುದ್ಧ ವಿಮಾನಗಳಿಗೆ ಗುರಿಯಾಗಿಸಿ ನಾಶಪಡಿಸುವ ಸಾಮರ್ಥ್ಯ ಪರೀಕ್ಷೆ ನಡೆಸಿರುವುದು ವಿಡಿಯೋದಿಂದ ತಿಳಿದುಬಂದಿದೆ.

ಸಿಕ್ಕಿಂ ವಲಯದಲ್ಲಿ ಜೂನ್‌ 16ರಂದು ಚೀನಾದ ಸೈನಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಭಾರತೀಯ ಭದ್ರತಾ ಪಡೆ ತಡೆಯೊಡ್ಡಿತ್ತು. ಇದಾದ ನಂತರ ಡೋಕಾ ಲಾದಲ್ಲಿ ಉಭಯ ಸೇನೆಗಳ ನಡುವೆ ಘರ್ಷಣೆ ಸೃಷ್ಟಿಯಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
ಭಾರತ–ಚೀನಾ ಸೇನೆಗಳ ಹೋಲಿಕೆ ಹಾಸ್ಯಾಸ್ಪದ: ಟಿಬೆಟ್‌ನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ತೋರಿಕೆಗಲ್ಲ

ಚೀನಾ ಪತ್ರಿಕೆ ವರದಿ
ಭಾರತ–ಚೀನಾ ಸೇನೆಗಳ ಹೋಲಿಕೆ ಹಾಸ್ಯಾಸ್ಪದ: ಟಿಬೆಟ್‌ನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ತೋರಿಕೆಗಲ್ಲ

21 Jul, 2017
ಸಾಕ್ಷ್ಯ ಹೇಳಲಿರುವ ಜೂನಿಯರ್ ಟ್ರಂಪ್

ರಷ್ಯಾದ ಜತೆ ಸಂಪರ್ಕ
ಸಾಕ್ಷ್ಯ ಹೇಳಲಿರುವ ಜೂನಿಯರ್ ಟ್ರಂಪ್

21 Jul, 2017
ಟ್ರಂಪ್‌ಗೆ ಕೊಂಚ ಹಿನ್ನಡೆ

ಹೊಸ ನಿಯಮಾವಳಿ
ಟ್ರಂಪ್‌ಗೆ ಕೊಂಚ ಹಿನ್ನಡೆ

21 Jul, 2017
ಭಾರತಕ್ಕೆ ಪಾಕ್‌ನಿಂದ ಸಮನ್ಸ್ ಜಾರಿ

ಗಡಿ ಸಮಸ್ಯೆ
ಭಾರತಕ್ಕೆ ಪಾಕ್‌ನಿಂದ ಸಮನ್ಸ್ ಜಾರಿ

21 Jul, 2017
ಆರೋಪ ಸಾಬೀತಾದರೆ ಜೈಲು

ಅಕ್ರಮ ಹಣ ವರ್ಗಾವಣೆ
ಆರೋಪ ಸಾಬೀತಾದರೆ ಜೈಲು

21 Jul, 2017