ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯದ ಕೂಗು...

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

‘ಹಿಂದಿಯೂ ಇರಲಿ...’ ಎಂದು ಪ್ರದೀಪ್‌ ಎನ್‌. ಮಾಡಿರುವ ವಾದ (ವಾ.ವಾ., ಜುಲೈ 17)  ನ್ಯಾಯಸಮ್ಮತವೇ. ಅವರು ಹೇಳಿದಂತೆ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳು ಇಂದು ‘ಅನಿವಾರ್ಯ’ವಾಗಿವೆ, ಹೊಟ್ಟೆಪಾಡಿನ ಭಾಷೆಗಳಾಗಿವೆ. ಈ ಎರಡೂ  ಭಾಷೆಗಳನ್ನು ಕನ್ನಡಿಗರೆಲ್ಲರೂ ಗೌರವಿಸುತ್ತಾರೆ.

ಆದರೆ ಹೊಟ್ಟೆಪಾಡಿನ ಭಾಷೆ ಹೃದಯದ ಕೂಗನ್ನು ಕೊಲ್ಲ ಬಾರದು. ಹೊಟ್ಟೆಪಾಡಿನ ಭಾಷೆಯನ್ನು  ಹೃದಯದ ಭಾಷೆಯ ಸ್ಥಾನಕ್ಕೆ ಬಲವಂತವಾಗಿ ಕೂರಿಸಲು ಸರ್ಕಾರ ಯತ್ನಿಸುತ್ತಿರು ವುದರಿಂದ ಕನ್ನಡಿಗರು ಕೆರಳಿ, ಇದನ್ನು ಪ್ರತಿಭಟಿಸುತ್ತಿದ್ದಾರೆ.

ಸುಮಾರು ₹ 14 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಕಾಮಗಾರಿಯ ಭೂಸ್ವಾದೀನ ವೆಚ್ಚ, ಕಾರ್ಯಾಚರಣೆಯ  ನಷ್ಟದ ಹೊರೆ ರಾಜ್ಯ ಸರ್ಕಾರದ ಮೇಲೆಯೇ ಬೀಳುತ್ತದೆ. ಕೇಂದ್ರ ಸರ್ಕಾರ ಬರೀ 7,000 ಕೋಟಿಯಷ್ಟು ಅನುದಾನ ನೀಡಿದೆ. ಉಳಿದ ಹಣವನ್ನು ಕರ್ನಾಟಕವೇ ಹೊಂದಿಸಿಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿರುವ ಸತ್ಯ ಎಲ್ಲರಿಗೂ ತಿಳಿಯಬೇಕಿದೆ. ಕೇಂದ್ರದ ಧೋರಣೆ ಹೇಗಿದೆ ಎಂದರೆ ‘ಹಸುವನ್ನು ಕನ್ನಡಿಗರು ಸಾಕಲಿ... ಅದರ ಹಾಲು ಮಾತ್ರ ಕೇಂದ್ರದ ಪಾಲಾಗಲಿ’ ಎಂಬಂತೆ ಭಾಸವಾಗುತ್ತಿದೆ.

-ಕುಶಾಲ್ ವಿ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT