ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಕಿಚ್ಚಿದ್ದರೆ ರಾಜೀನಾಮೆ ನೀಡಿ

Last Updated 18 ಜುಲೈ 2017, 6:50 IST
ಅಕ್ಷರ ಗಾತ್ರ

ಶಿರಸಿ: ‘ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಶಿವರಾಮ ಹೆಬ್ಬಾರ್ ಅರಣ್ಯ ಅತಿಕ್ರಮಣ ಸಮಸ್ಯೆ ಮುಂದಿಟ್ಟುಕೊಂಡು ಗೆದ್ದಿದ್ದರು. ಆದರೆ ಅದನ್ನು ಬಗೆಹರಿಸುವ ಇಚ್ಛಾಶಕ್ತಿ ಅವರಲ್ಲಿ ಇಲ್ಲ. ಕಳೆದ ನಾಲ್ಕು ವರ್ಷ ಗಳಲ್ಲಿ ಇರದ ಕಾಳಜಿ ಈಗೆಲ್ಲಿಂದ ಬಂದಿದೆ’ ಎಂದು ಜೆಡಿಎಸ್ ಉತ್ತರ ಕನ್ನಡ ಜಿಲ್ಲಾ ವೀಕ್ಷಕ ಮರಿತಿಬ್ಬೆಗೌಡ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಆಯೋಜಿಸಿದ್ದ ಜೆಡಿಎಸ್ ಬನವಾಸಿ ಘಟಕದ ಕಾರ್ಯ ಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‘ಅರಣ್ಯ ಹಕ್ಕು ಹೋರಾಟ ಗಾರ ರವೀಂದ್ರ ನಾಯ್ಕ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವುದು ಶಾಸಕರಲ್ಲಿ ಭಯ ಹುಟ್ಟಿಸಿದೆ. ಹಾಗಾಗಿ ಅರಣ್ಯ ಅತಿಕ್ರಮಣ ದಾರರಿಗೆ ಹಕ್ಕುಪತ್ರ ನೀಡುವ ವಿಚಾರ ವಾಗಿ ಅಧಿಕಾರಿಗಳಿಗೆ ಬೈಯ್ಯುತ್ತ ಮತದಾರರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಕ್ಷೇತ್ರದಲ್ಲಿ 30 ಸಾವಿರ ಕುಟುಂಬ ಗಳು ಅತಿಕ್ರಮಣ ಸಮಸ್ಯೆ ಎದುರಿಸು ತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರ ದಲ್ಲಿದ್ದರೂ ಶಾಸಕರು ಅಸಹಾಯಕತೆಯ ಮಾತನ್ನಾಡುತ್ತಿರುವುದು ಯಾಕೆ? ಇದನ್ನು ಗಮನಿಸಿದರೆ ಅರಣ್ಯ ಅತಿಕ್ರಮಣದಾರರ ಪರ ನಿಮ್ಮದು ಪ್ರಾಮಾಣಿಕ ಪ್ರಯತ್ನವಿದೆಯೇ ಎಂಬ ಸಂಶಯ ಮೂಡುತ್ತಿದೆ.

ಚುನಾವಣೆ ಹತ್ತಿರ ಬಂದಾಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಸರಿ ಯಲ್ಲ. ಹೋರಾಟದ ಕಿಚ್ಚಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರೆದುರು ಬನ್ನಿ’ ಎಂದು ಸವಾಲೆಸೆದರು. 

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು. ಪಕ್ಷದ ಅಭ್ಯರ್ಥಿ ಓಡಿ ಹೋದರೂ ಮತದಾರರು ಪಕ್ಷದ ಕೈಬಿಟ್ಟಿಲ್ಲ. ಮುಂದಿನ ಚುನಾವಣೆಯಲ್ಲಿ ಮೊದಲ ಸ್ಥಾನಕ್ಕೆ ತರಬೇಕು’ ಎಂದು ಹೇಳಿದರು. ಯಲ್ಲಾಪುರ- ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎ.ರವೀಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

* * 

ಬಿಜೆಪಿ ಅಧಿಕಾರಾವಧಿಯಲ್ಲಿ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಸಿಗಲಿಲ್ಲ. ಈಗ ಕಾಂಗ್ರೆಸ್ ಸಮಸ್ಯೆ ಜೀವಂತವಾಗಿಟ್ಟು ಚುನಾವಣೆ ಗೆಲ್ಲುವ ತಂತ್ರ ಮಾಡುತ್ತಿದೆ
ಮರಿತಿಬ್ಬೇಗೌಡ
ಜೆಡಿಎಸ್ ಜಿಲ್ಲಾ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT