ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಜಾಥಾ ವಿಶೇಷ ಪ್ರಚಾರಾಂದೋಲನಕ್ಕೆ ಚಾಲನೆ

Last Updated 19 ಜುಲೈ 2017, 7:15 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯ ಸರ್ಕಾರ ನಾಲ್ಕು ವರ್ಷಗಳಲ್ಲಿ ಸಾಧಿಸಿರುವ ಪ್ರಗತಿ, ಜಾರಿಗೊಳಿಸಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು, ಸೋಮವಾರ ಆರಂಭಗೊಂಡ ಕಲಾಜಾಥಾ ವಿಶೇಷ ಪ್ರಚಾರಾಂದೋಲನ ವಾಹನಕ್ಕೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಚಾಲನೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕಲಾಜಾಥಾ ಜಿಲ್ಲೆಯ 48 ಗ್ರಾಮಗಳಲ್ಲಿ ಸಂಚರಿಸಿ ಆಗಸ್ಟ್‌ 9ರವರೆಗೆ ವಿವಿಧ ಯೋಜನೆಗಳ ಕುರಿತು ಬೀದಿನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಿದೆ.

ಈ ವಾಹನ ನಿತ್ಯ 2 ಗ್ರಾಮಗಳಂತೆ ಜಿಲ್ಲೆಯ ವಿವಿಧ 48 ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ.  ಇದೇ 19ರ ಬುಧವಾರ ಕೆಸರಟ್ಟಿ, ಬಿಂಜಲಬಾವಿ, 20ರಂದು ಅಬ್ಬಿಹಾಳ, ಕಿರಶ್ಯಾಳ, 21ರಂದು ಕದ್ರಾಪುರ, ಯಲಗೋಡ, 22ರಂದು ವಂದಾಲ, ಆಲಗೂರ, 23ರಂದು ಹಂದಿಗನೂರ, ಬಸ್ತಿಹಾಳ, 24ರಂದು ಹುಣಶ್ಯಾಳ, ಕೆರೂಟಗಿ.
25ರಂದು ಗುಬ್ಬೇವಾಡ, ಹಡಗಿನಾಳ, 26ರಂದು ಕಣ್ಣಗುಡ್ಡಿಹಾಳ, ತಿಳಗೂಳ, 27ರಂದು ಹಂದಿಗನೂರ, ಕೋರವಾರ, 28ರಂದು ಜಾಲವಾದ, ಇಬ್ರಾಹಿಂಪುರ, 29ರಂದು ಉಕ್ಕಳಿ, ದೇಗಿನಾಳ, 30ರಂದು ಮಸಬಿನಾಳ, ಬಿಸನಾಳ, 31ರಂದು ಉತ್ನಾಳ, ದಿಂಡವಾರ ಗ್ರಾಮಗಳಲ್ಲಿ ಸಂಚರಿಸಲಿದೆ.

ಆಗಸ್ಟ್ 1ರಂದು ಬೂದಿಹಾಳ, ಕಾಮನಕೇರಿ, 2ರಂದು ಕೆ.ಸಾಲವಾಡಗಿ, ಸಾಸನೂರ, 3ರಂದು ಕಡಕೋಳ, ಬೈರವಾಡಗಿ, 4ರಂದು ನಾಗರಾಳ ಡೋಣ, ಯಾಳವಾರ, 5ರಂದು ಸಾತಿಹಾಳ, ಉತ್ನಾಳ, 6ರಂದು ಮಾರ್ಕಬ್ಬನಹಳ್ಳಿ, ಬೊಮ್ಮಣಹಳ್ಳಿ, 7ರಂದು ಮುಳ್ಳಾಳ, ನೇಗಿನಾಳ, 8ರಂದು ಡೋಣೂರ, ಯಂಬತ್ನಾಳ, 9ರಂದು ಇಂಗಳೇಶ್ವರ, ರಾಮನಹಟ್ಟಿ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಕಲಾಜಾಥಾ ತಂಡ ಜಾಗೃತಿ ಮೂಡಿಸಲಿದೆ. ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ನದಾಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT