ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವರ ಅಭ್ಯುದಯಕ್ಕೆ ಮೋದಿ ಶ್ರಮ’

Last Updated 19 ಜುಲೈ 2017, 7:24 IST
ಅಕ್ಷರ ಗಾತ್ರ

ಮೂಡಲಗಿ: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿಲುವಿನಿಂದ ಹಲವಾರು ಜನಪ್ರಿಯ ಯೋಜನೆ ಜಾರಿಗೆ ತಂದಿದ್ದಾರೆ ಅವರ ದೂರದೃಷ್ಟಿತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತ ಮುಂಚೂಣಿಗೆ ಬರುತ್ತಿದೆ ಎಂದು ಮೂಡಲಗಿ ಪುರಸಭೆ ಸದಸ್ಯ ರಾಮಪ್ಪ ನೇಮಗೌಡರ ಹೇಳಿದರು.

ಗುರ್ಲಾಪುರ ಗ್ರಾಮದ ಸ್ಥಳೀಯ ವಾರ್ಡ್ ನಂ. 20ರ ಗಾಣಿಗೇರ ತೋಟ ದಲ್ಲಿ ಹಮ್ಮಿಕೊಂಡ ಮಹಾಸಂಪರ್ಕ ಹಾಗೂ ಸ್ವಚ್ಛಭಾರತ ಅಭಿಯಾನ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು,  ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಬಾವಿ ಕ್ಷೇತ್ರ ರಸ್ತೆ, ನೀರು, ಶಾಲೆ, ಸಮುದಾಯ ಭವನ, ದೇವಸ್ಥಾನ, ಶಿಕ್ಷಣ ಕ್ಷೇತ್ರದ ಪ್ರಗತಿ ಹಲವಾರು ಯೋಜನೆಗಳು ಪ್ರಗತಿ ಕಂಡಿವೆ ಎಂದರು.

ರೇವಪ್ಪ ಸತ್ತಿಗೇರಿ, ರಾಮಪ್ಪ ಹಳ್ಳೂರ, ಬಸಪ್ಪ ಸುಳ್ಳನವರ, ಗಿರಿ ಮಲ್ಲಪ್ಪ ಪಾಲಬಾವಿ, ಸಿದ್ದಗೌಡ ಗಾಣಿ ಗೇರ, ರಮೇಶ ನೇಮಗೌಡರ, ಯಲ್ಲಪ್ಪ ಸುಳ್ಳನವರ, ಮಲ್ಲಿಕಾರ್ಜುನ ನೇಮ ಗೌಡರ, ರಾಮನಿಂಗ ಮುಗಳಖೋಡ, ಶಿವಕುಮಾರ ಹಿರೇಮಠ, ಮಲ್ಲಪ್ಪ ಗಾಣಿಗೇರ, ನಾಗಪ್ಪಾ ತೇಲಿ, ಶಿವಬಸು ನೇಮಗೌಡರ, ಸದಾಶಿವ ನೇಮಗೌಡರ, ಕಲ್ಲಪ್ಪ ನೇಮಗೌಡರ, ಅಬ್ಬು ಥರಥರಿ ಇದ್ದರು. 

ಕರಪತ್ರ ಬಿಡುಗಡೆ
ಹುಕ್ಕೇರಿ: ರಾಜ್ಯದಲ್ಲಿ ಬಿ.ಜೆ.ಪಿ ಆಡಳಿತಾವಧಿಯಲ್ಲಿ ಕೈಗೊಂಡ ಜನಪರ ಕಾರ್ಯಗಳನ್ನು ಹಾಗೂ ಪ್ರಸಕ್ತ ಕೇಂದ್ರ ಸರ್ಕಾರದ ಬಡ, ಮಧ್ಯಮ ವರ್ಗದವರ ಹಿತದೃಷ್ಟಿಯಿಂದ ಮಾಡಿಕೊಟ್ಟಿರುವ ಅನೇಕ ಸೌಲಭ್ಯಗಳನ್ನು ಮತದಾರರಿಗೆ ತಿಳಿಸಿಕೊಡಬೇಕು ಎಂದು ಮಾಜಿ ಸಂಸದ, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.

ಅವರು ಬುಧವಾರ ಸ್ಥಳೀಯ ಪಿಕಾರ್ಡ್ ಬ್ಯಾಂಕಿನಲ್ಲಿ ನಡೆದ ಬಿಜೆಪಿ ವಿಸ್ತಾರಕರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ವೈಪಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದ ಅವರು ವಿಸ್ತಾರಕ ಯೋಜನೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಉಜ್ವಲ ಯೋಜನೆ ಯಡಿಯಿಂದ ದೇಶದ 5 ಕೋಟಿ ಬಡವರಿಗೆ ಮತ್ತು ಜಿಲ್ಲೆಯ 2.40 ಲಕ್ಷ  ಬಡವರಿಗೆ ಅನುಕೂಲವಾಗಿದೆ ಎಂದರು. ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ ಕುಲಕರ್ಣಿ, ತುಬಚಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಪುರಸಭೆ ಅಧ್ಯಕ್ಷ ಜಯಗೌಡ ಪಾಟೀಲ, ಚಂಬಣ್ಣ ತಾರಳಿ, ಬಸವರಾಜ ಮರಡಿ, ಸುಭಾಷ್‌ ನಾಯಿಕ, ಅಜ್ಜಪ್ಪ ಕಲ್ಲಟ್ಟಿ, ರಾಚಯ್ಯ ಹಿರೇಮಠ, ಶಿವಲಿಂಗ ನಾಯಿಕ ಇದ್ದರು. ಪುರಸಭೆ ಸದಸ್ಯ ವಿರೇಶ ಗಜಬರ ಸ್ವಾಗತಿಸಿದರು.

ಶಿವಾಲಯ ಬೀದಿ ಸ್ವಚ್ಛತೆ
ಹಿರೇಬಾಗೇವಾಡಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾ ನದಡಿ ಗ್ರಾಮ ಸ್ವಚ್ಛತಾ ಕಾರ್ಯಕ್ರಮ ವನ್ನು ಬಿಜೆಪಿ ಕಾರ್ಯಕರ್ತರು ಹಿರೇಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದರು. ಇಲ್ಲಿಯ ಬಸವೇಶ್ವರ ವೃತ್ತ, ವಿದ್ಯಾವರ್ಧಕ ಸಂಘದ ಆವರಣ, ಬಸವನಗರದ ಶಿವಾಲಯ ಬೀದಿ, ಶಿವಾಲಯ ಆವರಣ ಇತ್ಯಾದಿಗಳಲ್ಲಿ ಸಂಚರಿಸಿ ಚರಂಡಿ ಮೊದಲಾದ ಸ್ಥಳಗಳನ್ನು ಸ್ವಚ್ಛಗೊಳಿಸಿದರು. ಬೆಳಗಾವಿಯ ಪತಂಜಲಿ ಯೋಗ ಪೀಠದ ಸದಸ್ಯರು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕಲಾವತಿ ಧರೆಣ್ಣವರ, ಎಪಿಎಂಸಿ ಉಪಾಧ್ಯಕ್ಷೆ ರೇಣುಕಾ ಪಾಟೀಲ, ಸುರೇಶ ಇಟಗಿ, ಈರಪ್ಪ ಅರಳೀಕಟ್ಟಿ, ಬಸಪ್ಪ ವಾಲಿ, ಪರವಯ್ಯ ಖನಗಾವಿ, ಶಂಕರ ಸೋನಪ್ಪ ನವರ, ಬಸಲಿಂಗ ಮಠಪತಿ, ಮಂಜು ನಾಥ ಧರೆಣ್ಣವರ, ಗಟಿಗೆಪ್ಪ ಗುರು ವಣ್ಣವರ, ಬಿ.ಜಿ.ವಾಲಿಇಟಗಿ, ಸಿ.ಎಂ. ಕುಂಬಾರ, ಬಸವರಾಜ ಅರಳಿಕಟ್ಟಿ, ಗಿರಿಜಾ ಮಠಪತಿ, ಬಸವರಾಜ ಹಂಚಿನ ಮನಿ, ಫಡಿಗೌಡ ಪಾಟೀಲ, ಪ್ರಕಾಶ ಕಳಸದ, ಸಿದ್ದಪ್ಪ ಹುಕ್ಕೇರಿ,  ಮಹಾಂತೇಶ ಅಂಗಡಿ, ಸಾಗರ ಕೋಶಾವರ, ನಿಂಗಪ್ಪ ತಳವಾರ ಪಾಲ್ಗೊಂಡಿದ್ದರು.

* * 

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನರಲ್ಲಿ ಜಾತೀಯ ವಿಷಬೀಜ, ತಾರತಮ್ಯ ಬಿತ್ತುವ ಮೂಲಕ ಕಂದಕ ಮೂಡಿಸಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ 
ರಮೇಶ ಕತ್ತಿ
ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT