ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂ ಕಾಲುವೆಗಳಿಗೆ ನೀರು ಬಿಡುಗಡೆ

Last Updated 19 ಜುಲೈ 2017, 8:51 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕೆಳಮಟ್ಟದ ಕಾಲುವೆಗೆ ಸೋಮವಾರ ದಿಂದ 200 ಕ್ಯುಸೆಕ್‌ ನೀರು ಹರಿಸ ಲಾಗುತ್ತಿದೆ. ರಾಯಚೂರು, ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಕಾಲುವೆಗೆ ನೀರು ಬಿಡಲಾಗಿದೆ. ಜಲಾಶಯದ ಬಲದಂಡೆ ಪವರ್‌ ಕಾಲುವೆಗೆ 600 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಜು. 13ರಿಂದ 500 ಕ್ಯುಸೆಕ್‌ ನೀರು ಬಿಡಲಾಗುತ್ತಿತ್ತು. ಸೋಮ ವಾರದಿಂದ 100 ಕ್ಯುಸೆಕ್‌ ಅಧಿಕ ನೀರು ಬಿಡಲಾಗುತ್ತಿದೆ.

ಈ ನೀರು ತಾಲ್ಲೂಕಿನ ಕಮಲಾಪುರ ಸಮೀಪದ ಪವರ್‌ ಕಾಲುವೆಗೆ ಹೋಗಿ, ನಂತರ ಕೆಳಮಟ್ಟದ ಕಾಲುವೆ ಮೂಲಕ ಕಂಪ್ಲಿ, ಬಳ್ಳಾರಿ ಕಡೆಗೆ ಹರಿದು ಹೋಗುತ್ತದೆ.
‘ಎಡದಂಡೆ ಕೆಳಮಟ್ಟದ ಕಾಲುವೆಗೆ ಸೋಮವಾರ ರಾತ್ರಿಯಿಂದ 200 ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಹಂತ ಹಂತವಾಗಿ ಸಾವಿರ ಕ್ಯುಸೆಕ್‌ ನೀರು ಹರಿಸಲಾಗುವುದು’ ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯ ದರ್ಶಿ ಡಿ. ರಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಲಾಶಯದ ಒಳಹರಿವಿನಲ್ಲಿ ಮಂಗಳವಾರ ಹೆಚ್ಚಳವಾಗಿದೆ. 4,250 ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಸೋಮವಾರ 3,410 ಕ್ಯುಸೆಕ್‌ ಒಳಹರಿವು ಇತ್ತು. ನೀರಿನ ಮಟ್ಟದಲ್ಲಿ ಯೂ ಸ್ವಲ್ಪ ಏರಿಕೆ ಕಂಡು ಬಂದಿದೆ. ಸೋಮವಾರ 15.047 ಟಿ.ಎಂ.ಸಿ. ಅಡಿ ನೀರಿತ್ತು. ಮಂಗಳವಾರ 15.347 ಟಿ.ಎಂ.ಸಿ.ಅಡಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಬಹಳ ಕಡಿಮೆ ಇದೆ. 2016ರ ಜು.18ರಂದು ಜಲಾಶಯದಲ್ಲಿ 38.038 ಟಿ.ಎಂ.ಸಿ. ಅಡಿ ನೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT