ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ಇಲೆವೆನ್‌ಗೆ ಪ್ರಶಸ್ತಿ

ಅರ್ಜುನ್‌, ಅವಿನಾಶ್ ಶತಕ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯುತ್ತಮ ಸಾಮರ್ಥ್ಯದೊಂದಿಗೆ ಆಡಿದ ಅಧ್ಯಕ್ಷರ ಇಲೆವೆನ್ ತಂಡ ಶಫಿ ದಾರಾಶಾ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಪ್ರಶಸ್ತಿ ಎತ್ತಿಹಿಡಿದಿದೆ.

ಟೂರ್ನಿಯಲ್ಲಿ ಒಟ್ಟು ಒಂಬತ್ತು ಪಾಯಿಂಟ್ಸ್‌ಗಳನ್ನು ಈ ತಂಡ ಕಲೆಹಾಕಿದೆ. ಅಂತಿಮ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್‌ ತಂಡ ಸಂಯುಕ್ತ ಇಲೆವೆನ್ ಎದುರು ಡ್ರಾ ಮಾಡಿಕೊಳ್ಳುವ ಮೂಲಕ ಮೂರು ಪಾಯಿಂಟ್ಸ್ ಪಡೆಯಿತು.

ಅರ್ಜುನ್ ಹೊಯ್ಸಳ (110) ಶತಕ ದಾಖಲಿಸುವ ಮೂಲಕ ಈ ತಂಡಕ್ಕೆ ನೆರವಾದರು. ಈ ಆಟಗಾರ 166 ಎಸೆತಗಳಿಗೆ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಇವರಿಗೆ ಜತೆಯಾದ ಕೆ.ಸಿ ಅವಿನಾಶ್ ಕೂಡ ಶತಕದ ಕೊಡುಗೆ ನೀಡಿದರು. ಅವಿನಾಶ್‌ 140 ಎಸೆತಗಳಿಂದ ಒಂಭತ್ತು ಬೌಂಡರಿ ದಾಖಲಿಸಿದರು.

ಅವಿನಾಶ್‌ ಹಾಗೂ ಅರ್ಜುನ್ ಅವರ ಶತಕಗಳ ಬಲದಿಂದ ಅಧ್ಯಕ್ಷರ ಇಲೆವೆನ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 62.1 ಓವರ್‌ಗಳಲ್ಲಿ 5 ವಿಕೆಟ್‌ಗೆ 245 ರನ್‌ ಕಲೆಹಾಕಿದ ಬಳಿಕ ಡಿಕ್ಲೇರ್ಡ್ ಮಾಡಿಕೊಂಡಿತು.

ಬಳಿಕ ಆಡಿದ ಸಂಯುಕ್ತ ಇಲೆವೆನ್ ದ್ವಿತೀಯ ಇನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 61 ರನ್‌ ಗಳಿಸಿತು. ಈ ತಂಡದ ಜಯೇಶ್ ಬಾಬು 35 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರು: ಅಧ್ಯಕ್ಷರ ಇಲೆವೆನ್‌: 53 ಓವರ್‌ಗಳಲ್ಲಿ 171. ದ್ವಿತೀಯ ಇನಿಂಗ್ಸ್‌: 62.1 ಓವರ್‌ಗಳಲ್ಲಿ 5 ವಿಕೆಟ್‌ಗೆ 245 (ಅರ್ಜುನ್‌ ಹೊಯ್ಸಳ 110, ಕೆ.ಸಿ ಅವಿನಾಶ್‌ 102; ವಿ. ಕೌಶಿಕ್‌ 28ಕ್ಕೆ3).
ಸಂಯುಕ್ತ ಇಲೆವೆನ್‌: 32.1 ಓವರ್‌ಗಳಲ್ಲಿ 109. ದ್ವಿತೀಯ ಇನಿಂಗ್ಸ್‌: 16 ಓವರ್‌ಗಳಲ್ಲಿ 1 ವಿಕೆಟ್‌ಗೆ 61 (ಜಯೇಶ್‌ ಬಾಬು 35, ಅಮನ್ ರಾಜ್‌ 23). ಫಲಿತಾಂಶ: ಡ್ರಾ. ಅಧ್ಯಕ್ಷರ ಇಲೆವೆನ್‌ಗೆ 3 ಹಾಗೂ ಸಂಯುಕ್ತ ಇಲೆವೆನ್‌ಗೆ 1 ಪಾಯಿಂಟ್‌.

ಉಪಾಧ್ಯಕ್ಷರ ಇಲೆವೆನ್‌: 56.3 ಓವರ್‌ಗಳಲ್ಲಿ 229. ಬೆಂಗಳೂರು ವಲಯ: 39.5 ಓವರ್‌ಗಳಲ್ಲಿ 161 (ಸಮರ್ಥ್ ಊಟಿ 68, ಸುನೀಲ್ ರಾಜು 73, ಪೂನಿಯಾ 42ಕ್ಕೆ3). ಫಲಿತಾಂಶ: ಉಪಾಧ್ಯಕ್ಷರ ಇಲೆವೆನ್‌ಗೆ 2 ಹಾಗೂ ಬೆಂಗಳೂರು ತಂಡಕ್ಕೆ 2 ಪಾಯಿಂಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT