ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನೋತ್ಸವ: ಸಾಂಸ್ಕೃತಿಕ ಕಲೆಗೆ ಪ್ರೋತ್ಸಾಹ

ಚನ್ನರಾಯಪಟ್ಟಣದಲ್ಲಿ ಸಾಹಿತ್ಯ ಪರಿಷತ್, ಸಂಘ, ಸಂಸ್ಥೆಗಳಿಂದ ಪ್ರತಿಭಾ ಪೋಷಣೆ ಕಾರ್ಯಕ್ರಮ
Last Updated 20 ಜುಲೈ 2017, 8:44 IST
ಅಕ್ಷರ ಗಾತ್ರ

ವಿಜಯಪುರ: ‘ಶೋಷಿತ ಮತ್ತು ಸಮಾಜದಿಂದ ದೂರ ಉಳಿದ ಗಿರಿ ಜನರಲ್ಲಿ ಅಡಗಿರುವ ಸಾಂಸ್ಕೃತಿಕ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಗಿರಿಜನೋತ್ಸವ ಕಾರ್ಯಕ್ರಮ ಆಯೋಜಿ ಸುತ್ತಾ ಬಂದಿದೆ’ ಎಂದು  ಕನ್ನಡ ಸಾಹಿತ್ಯ ಪರಿಷತ್ತಿನ ಚನ್ನರಾ ಯಪಟ್ಟಣ ಹೋಬಳಿ ಘಟಕದ ಅಧ್ಯಕ್ಷ ಐ.ಟಿ ರಾಮಾಂಜಿನಪ್ಪ ಹೇಳಿದರು.

ತಾಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ ಮಂಗಳವಾರ ನಡೆದ ಗಿರಿಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿಜನರ ಉದ್ಧಾರಕ್ಕಾಗಿ ಅನೇಕ ಕಾರ್ಯಕ್ರಮ ಏರ್ಪಡಿಸುತ್ತಿದೆ. ಅನೇಕ ಶೋಷಿತ ಸಮುದಾಯ ದೇಶವನ್ನು ಶ್ರೀಮಂತವಾಗಿಸುವ ಕಲೆ ಹೊಂದಿದ್ದರೂ ಪ್ರೋತ್ಸಾಹದ ಕೊರತೆಯಿಂದ ಮೂಲೆ ಗುಂಪಾಗಿದ್ದವು. ಈಗ ಗಿರಿಜನೋತ್ಸವ ಮೂಲಕ ಅವರಲ್ಲಿನ ಕಲೆ ಪ್ರೋತ್ಸಾಹಿ ಸುವ ಕಾರ್ಯ ನಡೆದಿದೆ’ ಎಂದರು.

ಆಧುನಿಕ ತಂತ್ರಜ್ಞಾನಕ್ಕೆ ಜನರು ಮಾರು ಹೋಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹಿಂದಿನ ಕಾಲದಿಂದಲೂ ರೈತರು ಹೊಲ ಗದ್ದೆಗಳಲ್ಲಿ ಪೈರು ನಾಟಿ ಮಾಡುವಾಗ ಹಳ್ಳಿ ಸೊಗಡಿನ ಗೀತೆಗಳು ಹಾಡಿ ಕೆಲಸ ಮಾಡುತ್ತಿದ್ದರು. ಈಚೆಗೆ  ಅವೆಲ್ಲವೂ ಮಾಯವಾಗಿವೆ’ ಎಂದರು.

ಕಲಾವಿದ ತ್ಯಾಗರಾಜ್  ಮಾತನಾಡಿ, ‘ಸಾರ್ವಜನಿಕರು  ಕಲೆಗಾರರ ಶ್ರಮ ಸಾರ್ಥಕವಾಗಿಸಲು ಪ್ರೋತ್ಸಾಹಿಸಬೇಕು. ದೇಶದಲ್ಲಿ ಜನಪದ ಕಲೆ, ಸಂಸ್ಕೃತಿ, ನೃತ್ಯ ಇವುಗಳನ್ನು ಹಿಂದೆ ರಾಜಾಶ್ರಯ ಪೋಷಿಸಿಕೊಂಡು ಬಂದಿದೆ’ ಎಂದರು.

‘ಇಂದಿನ ಪ್ರಜಾಪ್ರಭುತ್ವದಲ್ಲಿ ಇದನ್ನು ರಕ್ಷಣೆ ಮಾಡುವ ಕರ್ತವ್ಯ ಸರ್ಕಾರದ್ದಾಗಿದೆ. ಸಿಂಧೂ ಪ್ರಾಂತ್ಯದಿಂದ ಪ್ರಾರಂಭವಾಗಿರುವ  ಜನಪದ ಶೈಲಿಯ ಕಲೆ, ಸಂಸ್ಕೃತಿ, ಸಾಹಿತ್ಯ ಎಂಬ ಪರಂಪರೆ ಇಂದಿನ ಆಧುನಿಕ ಜನಪದ ಶೈಲಿ ಯವರೆಗೆ ತಲುಪಿದೆ. ಕಲೆಗಾರರಿಗೆ ಜೀವ ನೋಪಾಯಕ್ಕೆ ಅಗತ್ಯವಾಗಿರುವ ಸೌಲಭ್ಯ ಗಳನ್ನು ಸರ್ಕಾರ ಕಲ್ಪಿಸಬೇಕು ’ಎಂದರು.

ಕನ್ನಡ ಸಾಹಿತ್ಯ ಪರಿಷತ್ತು, ಪರಿವರ್ತನಾ ಟ್ರಸ್ಟ್, ಪಾಪನಹಳ್ಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗ ಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.

ದೇವನಹಳ್ಳಿ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ರತ್ನಮ್ಮ ಮತ್ತು ತಂಡದವರಿಂದ ಸಮೂಹ ನೃತ್ಯ ಮತ್ತು ವಿಜಯಪುರದ ಎ.ಎಂ.  ನಾರಾಯಣಸ್ವಾಮಿ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಚನ್ನರಾಯಪಟ್ಟಣ ಶಾಲೆಯ ಸಹಶಿಕ್ಷಕ ಆಂಜಿನಪ್ಪ, ದಾಕ್ಷಾಯಿಣಿ, ಶೈಲ, ಪರಿವರ್ತನಾ ಟ್ರಸ್ಟಿನ ಕಾರ್ಯ    ದರ್ಶಿ ಪಿ.ಎಂ. ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

**

ಮೊಬೈಲ್‌ ಬಳಕೆಯನ್ನು ಕೈ  ಬಿಡಬೇಕು. ಜನಪದ ಗೀತೆ, ಸಂಗೀತ, ಕೋಲಾಟದಂತಹ ಗೀತೆಗ ಳಿಗೆ ಆದ್ಯತೆ ನೀಡಿದರೆ ಮುಂದಿನ ಪೀಳಿ ಗೆಗೆ ಇವುಗಳ ಪರಿಚಯ ಉಳಿಯಲಿದೆ.
-ಐ.ಟಿ ರಾಮಾಂಜಿನಪ್ಪ,
ಕಸಾಪ  ಚನ್ನರಾಯಪಟ್ಟಣ ಹೋಬಳಿ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT