ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೇರ್ಮನೆ’ ಸಿಕ್ಕ ಖುಷಿಯಲ್ಲಿ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಆಗೆಲ್ಲ ದೊಡ್ಡ ನಿವೇಶನ ಕೊಳ್ಳುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ ಚಿಕ್ಕ ಜಾಗದಲ್ಲಿ ಮೂರು ಮಹಡಿಯ ಮನೆ ಕಟ್ಟಿಕೊಂಡೆವು. ಇಲ್ಲಿ ವಾಸಕ್ಕೆ ಬಂದಿದ್ದರೂ ಮನೆಗೆ ಸೂಕ್ತವಾದ ಹೆಸರು ಹೊಳೆದಿರಲಿಲ್ಲ. ಒಮ್ಮೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕೃತಿಯನ್ನು ಓದುತ್ತಿದ್ದಾಗ ‘ತೇರ್ಮನೆಗೆ’ ಎಂಬ ಸಾಲುಗಳನ್ನು ಓದಿದೆ. ಆ ಪದ ನನಗೆ ತುಂಬಾ ಇಷ್ಟವಾಯಿತು.  ಅದೇ ಸಾಲನ್ನು ಮತ್ತೊಮ್ಮೆ ಓದಿದಾಗ ನಮ್ಮ ಮನೆಗೆ ಹೆಸರು ಸಿಕ್ಕಿತು. ಬಹುಮಡಿಯ ಮನೆಗೆ ‘ತೇರ್ಮನೆ’ ಎಂದು ಹೆಸರಿಟ್ಟೆವು.

’ಚೋಮನ ದುಡಿ’, ’ಬರ’ ಮೊದಲಾದ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಶೀರ್ಷಿಕೆ ಬರೆದಿರುವ ಹಿರಿಯ ರಂಗಕರ್ಮಿ ಎಂ.ಸಿ. ಆನಂದ್‌ ಅವರಿಗೆ ಹೆಸರಿನ ವಿನ್ಯಾಸ ಮಾಡಿಕೊಡಲು ತಿಳಿಸಿದೆ. ಅವರು ಮನೆ ಹೆಸರಿನ ನಾಮಫಲಕವನ್ನು ಕಲಾತ್ಮಕವಾಗಿ ತಯಾರಿಸಿ ನೀಡಿದ್ದಾರೆ.

   ⇒ ಬಸವರಾಜುಡಿ ಎಸ್‌. 2ನೇ ಅವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT