ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಪ್ರೀತ್ ಕೌರ್ ತಾತ್ಕಾಲಿಕ ಅಮಾನತು

ಚೀನಾ ಗ್ರ್ಯಾನ್‌ಪ್ರಿಯಲ್ಲಿಯ ಮಾದರಿಯಲ್ಲಿಯೂ ಸಾಬೀತು
Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿರುವ ಶಾಟ್‌ಪಟ್ ಅಥ್ಲೀಟ್ ಮನಪ್ರೀತ್ ಕೌರ್ ಅವರನ್ನು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್ (ಎಎಫ್‌ಐ) ತಾತ್ಕಾಲಿಕ ಅಮಾನತು ಮಾಡಿದೆ.

ಹೋದ ತಿಂಗಳು ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್ ಕಪ್ ಅಥ್ಲೆಟಿಕ್ಸ್‌ ಕೂಟದ ಸಂದರ್ಭದಲ್ಲಿ ಅವರು ನಿಷೇಧಿತ ಉದ್ದೀಪನ ಮದ್ದು ಸೇವನೆ ಮಾಡಿದ್ದು  ಬುಧವಾರ ದೃಢಪಟ್ಟಿತ್ತು. ಅದರ ಬೆನ್ನಲೇ ಅವರು ಈ ಹಿಂದೆ ನಡೆದ ಇನ್ನೊಂದು ಕೂಟದಲ್ಲಿಯೂ ಉದ್ದೀಪನ ಮದ್ದು ಸೇವಿಸಿದ್ದು ಬಹಿರಂಗವಾಗಿದೆ.

ಹೋದ ಏಪ್ರಿಲ್ 24ರಂದು ಚೀನಾದ ಜಿನುವಾದಲ್ಲಿ ನಡೆದಿದ್ದ ಏಷ್ಯನ್ ಗ್ರ್ಯಾನ್‌ಪ್ರಿ ಪ್ರಥಮ ಲೆಗ್ ಅಥ್ಲೆಟಿಕ್ಸ್‌ ಕೂಟದ ಸಂದರ್ಭದಲ್ಲಿ ಸಂಗ್ರಹಿಸಿದ್ದ ಮಾದರಿಯಲ್ಲಿಯೂ ಮದ್ದಿನ ಅಂಶ ಪತ್ತೆಯಾಗಿದೆ. ಎರಡೂ ಕೂಟಗಳಲ್ಲಿಯೂ ಅವರು ನಿಷೇಧಿತ ಡಿಮೆಥೈಲ್‌ಬುಟೈಲಮೈನ್ ಮದ್ದು ತೆಗೆದುಕೊಂಡಿದ್ದು ದೃಢಪಟ್ಟಿದೆ.

ಆದ್ದರಿಂದ  ಅವರ ಮೇಲೆ ಎಎಫ್‌ಐ ಕ್ರಮ ಕೈಗೊಂಡಿದೆ.  ಫೆಡರೇಷನ್ ಕಪ್‌ ಕೂಟದ ಮಾದರಿ ಪರೀಕ್ಷೆ ‘ಬಿ’ ವರದಿಯಲ್ಲಿ ಅವರು ಮದ್ದು ಸೇವಿಸಿದ್ದು ದೃಢಪಟ್ಟಿತ್ತು. ಚೀನಾದ ಕೂಟದಲ್ಲಿ ಸಂಗ್ರಹಿಸಿದ್ದ ಮಾದರಿಯ ಪರೀಕ್ಷೆಯ ಬಿ ವರದಿ ಬರುವುದು ಇನ್ನೂ ಬಾಕಿಯಿದೆ.

ಅದರಲ್ಲೂ ಮದ್ದಿನ ಅಂಶ ಇರುವುದು ಖಚಿತವಾದರೆ ಅವರು ನಾಲ್ಕು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಈ ಎರಡೂ ಕೂಟಗಳಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು.

ಪಂಜಾಬ್‌ ರಾಜ್ಯದವರಾದ  ಮನಪ್ರೀತ್ ಹೋದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಕೂಟದಲ್ಲಿ ಅವರು ಮಹಿಳೆಯರ ಶಾಟ್‌ಪಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದರು. ಆದರೆ ಈಗ ಅದು ಕೈತಪ್ಪಿದೆ. ಜುಲೈ 18ರಂದು ಗುಂಟೂರಿನಲ್ಲಿ ನಡೆದಿದ್ ಅಂತರರಾಜ್ಯ ಅಥ್ಲೆಟಿಕ್ಸ್‌ನ ಶಾಟ್‌ಪಟ್‌ನಲ್ಲಿಯೂ ಚಿನ್ನದ ಪದಕ ಪಡೆದಿದ್ದರು.

* ಮನಪ್ರೀತ್ ಅವರು ನಿಷೇಧಿತ ಮದ್ದು ಸೇವಿಸಿರುವುದನ್ನು ನಾಡಾ ಖಚಿತಪಡಿಸಿದೆ. ಅದಕ್ಕಾಗಿ ಮನಪ್ರೀತ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ಆದಿಲ್ ಸುಮರಿವಾಲಾ, ಎಎಫ್‌ಐ ಅಧ್ಯಕ್ಷ

ಮುಖ್ಯಾಂಶಗಳು

* ಎರಡು ಕೂಟಗಳಲ್ಲಿ ಉದ್ದೀಪನ ಮದ್ದು ಸೇವಿಸಿದ್ದ ಆರೋಪ.

* ಗುಂಟೂರಿನಲ್ಲಿ ನಡೆದಿದ್ದ ಅಂತರರಾಜ್ಯ ಕೂಟದಲ್ಲಿ  ಮನಪ್ರೀತ್ ಚಿನ್ನ ಗೆದ್ದಿದ್ದರು.

* ಪಂಜಾಬ್ ರಾಜ್ಯದ ಅಥ್ಲೀಟ್ ಮನ್‌ಪ್ರೀತ್ ಕೌರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT