ವಿವಿಧ ಕೋಟಾಗಳಡಿ ಸರ್ಕಾರಿ, ಖಾಸಗಿ ಮತ್ತು ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಲಭ್ಯ ಇರುವ ಸೀಟುಗಳ ವಿವರ ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಗುರುವಾರ ರಾತ್ರಿವರೆಗೆ 4,866 ವೈದ್ಯಕೀಯ ಸೀಟುಗಳು ಮತ್ತು 1,824 ದಂತ ವೈದ್ಯಕೀಯ ಸೀಟು ವಿವರ ಪ್ರಕಟಿಸಲಾಗಿತ್ತು. ಇದಲ್ಲದೆ, ವಿಶೇಷ ಕೆಟಗೆರಿ ವಿಭಾಗದಡಿ ವೈದ್ಯಕೀಯ, ದಂತ ವೈದ್ಯಕೀಯ ಸೇರಿ 181 ಸೀಟು ಇವೆ.