ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15,000 ಉದ್ಯೋಗ ಸೃಷ್ಟಿ ಅನಿಮೇಷನ್‌ ನೀತಿ ಪ್ರಕಟ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನಿಮೇಷನ್‌ ಮತ್ತು ಗೇಮಿಂಗ್‌ ಉದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ‘ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌, ಕಾಮಿಕ್ಸ್‌ ಅಂಡ್‌ ಗೇಮಿಂಗ್‌ (ಎವಿಜಿಸಿ) ನೀತಿ 2017’ ನ್ನು ಪ್ರಕಟಿಸಿದೆ.

ಹೊಸ ನೀತಿಯಿಂದಾಗಿ ರಾಜ್ಯದ 100 ಎವಿಜಿಸಿ ಕಂಪೆನಿಗಳ ಅಭಿವೃದ್ಧಿ ಕಾರಣವಾಗಲಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಹೊಸದಾಗಿ 15,000 ಉದ್ಯೋಗಗಳು ಸೃಷ್ಟಿ ಆಗುತ್ತವೆ. ರಾಜ್ಯದ ವಿವಿಧೆಡೆ 120 ತರಬೇತಿ ಸಂಸ್ಥೆಗಳು ಸ್ಥಾಪನೆ ಆಗಲಿವೆ.

ರಾಜ್ಯದ ಎವಿಜಿಸಿಗಳು ಜಾಗತಿಕವಾಗಿ ಪೈಪೋಟಿ ನೀಡುವುದರಿಂದ ಐಟಿ ಸಾಫ್ಟ್‌ವೇರ್‌ನಂತೆ, ಎವಿಜಿಸಿ ಉತ್ಪನ್ನಗಳನ್ನು ರಫ್ತು ಮಾಡುವುದು, ಸೇವೆ ಒದಗಿಸುವುದರಿಂದ  ಬರುವ ಆದಾಯದಲ್ಲಿ ಶೇ75ರಷ್ಟು ಪಾಲನ್ನು ಕಂಪೆನಿಗಳೇ ಇಟ್ಟುಕೊಳ್ಳಬಹುದು ಎಂಬ ವಾಗ್ದಾನವನ್ನು ಸರ್ಕಾರ ನೀಡಿದೆ.

ಜಾಗತಿಕವಾಗಿ ವಿಶಿಷ್ಟ ಮತ್ತು ಸೃಜನಶೀಲ ಅನಿಮೇಷನ್‌, ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಸರ್ಕಾರ ಅನುದಾನ ನೀಡಲಿದೆ. ಅನಿಮೇಷನ್‌ ಫಿಲಂ, ಎಪಿಸೋಡ್‌ಗಳು, ವಿಎಫ್‌ಎಕ್ಸ್ (ಚಲನಚಿತ್ರಗಳ ವಿಷುವಲ್‌ ಎಫೆಕ್ಟ್ಸ್‌) ಪ್ರಾಜೆಕ್ಟ್‌ಗಳು ಮತ್ತು ಗೇಮಿಂಗ್‌ಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

ನೀತಿಯ ಕುರಿತು ಮಾಹಿತಿ ನೀಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯದಲ್ಲಿ 15,000 ಉದ್ಯೋಗಗಳು ಸೃಷ್ಟಿ ಆಗುವುದರ ಜೊತೆಗೆ, ಇತರ ದೇಶಗಳ ಕಾಮಿಕ್ಸ್‌, ಫಿಲಂ, ಗೇಮಿಂಗ್‌, ವಿಷುವಲ್‌ ಎಫೆಕ್ಟ್ಸ್‌ ನಿರ್ಮಾಣ ಸಂಸ್ಥೆಗಳನ್ನು ಸೆಳೆಯಬಹುದು. ಅವರು ಇಲ್ಲಿಗೆ ಬಂದು ತಮ್ಮ ಕೇಂದ್ರಗಳನ್ನು ಸ್ಥಾಪಿಸಲು ಅನುಕೂಲವಾಗುತ್ತದೆ  ಎಂದು ತಿಳಿಸಿದರು. ಹಲವು ಹಾಲಿವುಡ್‌ ಸಿನಿಮಾಗಳಿಗೆ ವಿಷುವಲ್‌ ಎಫೆಕ್ಟ್ಸ್‌ ಬೆಂಗಳೂರಿನಲ್ಲೇ ನಡೆಯುತ್ತಿರುವುದು ವಿಶೇಷ ಎಂದರು.

ನೀತಿಯ ಮುಖ್ಯಾಂಶಗಳು
ಕೌಶಲ ಅಭಿವೃದ್ಧಿ:
 ರಾಜ್ಯದಲ್ಲಿ ಎವಿಜಿಸಿ ಫಿನಿಷಿಂಗ್‌ ಸ್ಕೂಲ್‌ ಸ್ಥಾಪಿಸಲಾಗುವುದು. ಇದರಿಂದ ಈ ಉದ್ಯಮದತ್ತ ಪ್ರತಿಭಾವಂತರನ್ನು ಸೆಳೆಯಬಹುದು. ರಾಜ್ಯದಲ್ಲಿರುವ 50 ಕ್ಕೂ ಹೆಚ್ಚು ಲಲಿತ ಕಲಾ ಶಾಲೆಗಳಿಗೂ ಡಿಜಿಟಲ್‌ ಕಲಾ ಕೇಂದ್ರ ಕಾರ್ಯಕ್ರಮ ವಿಸ್ತರಿಸಲಾಗುವುದು.

ಮೂಲ ಸೌಕರ್ಯ: ‘ಪಾವತಿಸಿ ಬಳಸಿ’ ಆಧಾರದ ಮೇಲೆ ಡಿಜಿಟಲ್‌ ಪೋಸ್ಟ್‌ ಪ್ರೊಡಕ್ಷನ್‌ ಲ್ಯಾಬ್‌ ಸೌಲಭ್ಯ ಸ್ಥಾಪಿಸಲಾಗುವುದು. ಎವಿಜಿಸಿ ಇನ್‌ಕ್ಯುಬೇಟರ್‌, ಅನಿಮೇಷನ್‌ ಮತ್ತು ಗೇಮ್‌ ಅಭಿವೃದ್ಧಿ ನವೋದ್ಯಮಗಳು ಒಟ್ಟಿಗೆ ಕೆಲಸ ಮಾಡುವುದಕ್ಕೆ ಜಾಗ. ಡಿಜಿಟಲ್‌ ಮೀಡಿಯಾ ಸಿಟಿ ಸ್ಥಾಪನೆ.

ನವೋದ್ಯಮಗಳಿಗೆ ಪ್ರೋತ್ಸಾಹ: ₹ 20 ಕೋಟಿ ಎವಿಜಿಸಿ ಉದ್ಯಮ ನಿಧಿ ಸ್ಥಾಪನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT