ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಆರ್ಭಟ: ಜೀವನ ತತ್ತರ

l ಮೂಡಿಗೆರೆ, ಶೃಂಗೇರಿ ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ l ಹಲವು ಕಡೆ ಮನೆ ಕುಸಿತ, ರಸ್ತೆ ಸಂಚಾರ ಸ್ಥಗಿತ
Last Updated 21 ಜುಲೈ 2017, 6:42 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಸುರಿ ಯುತ್ತಿರುವ ಜಡಿಮಳೆಗೆ ಗುರುವಾರ ಜನಜೀವನ ಅಸ್ತವ್ಯಸ್ತವಾಯಿತು. ಸೋ ಮವಾರ ರಾತ್ರಿಯಿಂದ ಪ್ರಾರಂಭವಾದ ಮಳೆ, ಗುರುವಾರ ಮಧ್ಯಾಹ್ನ ದವರೆಗೂ ಜನರು ಮನೆಯಿಂದ ಹೊರಗೆ ಹೊರಡದಂತೆ ಧಾರಾಕಾರ ವಾಗಿ ಸುರಿಯಿತು.

ಧಾರಾಕಾರ ಮಳೆಯ ಜತೆಗೆ ಗಾಳಿ ಬೀಸಿದ್ದರಿಂದ ಬಾಳೂರು ಹೋಬಳಿಯ ಮೇಗೂರು ಗ್ರಾಮದ ಗೌರಮ್ಮ ಹಾಗೂ ಚಂದ್ರಪ್ಪ ಅವರ ಮನೆ ಕುಸಿದು ಹಾನಿಯುಂಟಾಗಿದೆ. ಜನ್ನಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್‌ ಮರವೊಂದು ಬಿದ್ದ ಪರಿಣಾಮ ಶಾಲಾ ಕಾಂಪೌಂಡಿಗೆ ಹಾನಿಯಾಗಿದ್ದು, ಶಾಲೆಗೆ ರಜೆ ನೀಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಯಿತು.

ನಸುಕಿನ ವೇಳೆಯಲ್ಲಿ ಮಾಕೋನ ಹಳ್ಳಿ ರಸ್ತೆಯ ಘಟ್ಟದಹಳ್ಳಿಯಲ್ಲಿ ವಿದ್ಯುತ್‌ ಕಂಬಗಳು ಧರೆಗುರುಳಿದ್ದರಿಂದ ಬೆಳಿಗ್ಗೆ ನಾಲ್ಕು ತಾಸು ಮೂಡಿಗೆರೆ – ಗೆಂಡೆಹಳ್ಳಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಸುಂಕ ಸಾಲೆ ಬಳಿ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದ ರಿಂದ ಕೊಟ್ಟಿಗೆಹಾರ ಕಳಸ ರಸ್ತೆ ಯಲ್ಲೂ ಒಂದು ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಮುಗ್ರಹಳ್ಳಿ, ಸಬ್ಬೇನಹಳ್ಳಿ, ಉಗ್ಗೆ ಹಳ್ಳಿ ಮುಂತಾದ ಕಡೆಗಳಲ್ಲಿ ಹೇಮಾವತಿ ನದಿಯು ಗದ್ದೆಬಯಲಿನ ಮಟ್ಟದಲ್ಲಿ ಹರಿದು ನದಿ ತೀರದಲ್ಲಿ ಬೆಳೆಯಲಾಗಿದ್ದ ಭತ್ತದ ಸಸಿಮಡಿಗಳಿಗೆ ಹಾನಿಯುಂಟಾಗಿದೆ.

‘ಮಳೆಯೊಂದಿಗೆ ಬೀಸಿದ ಗಾಳಿ ಯಿಂದಾಗಿ ಮಾಕೋನಹಳ್ಳಿ, ದಾರದ ಹಳ್ಳಿ, ಮತ್ತಿಕಟ್ಟೆ ಭಾಗಗಳಲ್ಲಿ ಸುಮಾ ರು 70 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಕಳಸ ಹೋಬಳಿಯಲ್ಲೂ ಸುಮಾರು 20 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಕಿತ್ಲೆಗಂಡಿ, ಬಣಕಲ್‌ ನಿಡ್ನಳ್ಳಿ ಹಾಗೂ ಜನ್ನಾಪುರದಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಮರ ಬಿದ್ದು 3 ವಿದ್ಯುತ್‌ ಪರಿವರ್ತಕಗಳಿಗೆ ಹಾನಿ ಸಂಭವಿಸಿದೆ’ ಎಂದು ಮೆಸ್ಕಾಂ ಎಂಜಿನಿಯರ್‌ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳವಾರ ಮಧ್ಯರಾತ್ರಿಯಿಂದ ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತಯಗೊಂಡಿದ್ದು, ಮೂಡಿಗೆರೆ ಪಟ್ಟಣದಲ್ಲಿ ಗುರುವಾರ ದಿನವಿಡೀ ವಿದ್ಯುತ್‌ ಕಣ್ಣಾಮುಚ್ಚಾಲೆ ಮುಂದುವರಿದಿದೆ. ತರುವೆ, ಭೈರಾಪುರ, ಬಾಳೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಎರಡು ದಿನಗಳಿಂದ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ.

ಗುರುವಾರ ಮುಂಜಾನೆ ಯಿಂದಲೇ ಮಳೆ ಜೋರಾ ಗಿದ್ದರಿಂದ ಶಿಕ್ಷಣ ಇಲಾಖೆಯು ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೊಷಣೆ ಮಾಡಿತು. ಮಳೆಯ ನಡುವೆಯೇ ಸರ್ಕಾರಿ ಕಚೇರಿಗಳು ಎಂದಿನಂತೆ ನಡೆದರೂ, ಕಚೇರಿಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಮಳೆ ವಿವರ:
ಕಳೆದ 24 ಗಂಟೆಗಳಲ್ಲಿ ಮೂಡಿಗೆರೆ 116.8 ಮಿ.ಮೀ. ಕಳಸ 126.4 ಮಿ.ಮೀ, ಕೊಟ್ಟಿಗೆಹಾರ 206 ಮಿ.ಮೀ, ಜಾವಳಿ 148.5 ಮಿ.ಮೀ, ಗೋಣಿಬೀಡು 75 ಮಿ.ಮೀ ನಷ್ಟು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT