ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪ್ರಿಯರಿಗೊಂದು ಆ್ಯಪ್‌

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಪುಸ್ತಕಗಳನ್ನು ಕೊಳ್ಳುವ ಕೆಲಸವನ್ನು ಸುಲಭವಾಗಿಸುವ ಸಲುವಾಗಿಯೇ ಕನ್ನಡ ಪುಸ್ತಕಗಳ ಆ್ಯಪ್‌ವೊಂದು ತಯಾರಾಗಿದೆ. ಪುಸ್ತಕ ಬೇಕು ಎಂದ ತಕ್ಷಣ ಸ್ಮಾರ್ಟ್‌ಫೋನ್‌ ಮೇಲೆ ಬೆರಳಾಡಿಸಿ ಇಷ್ಟದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಡುಗೆ, ಅಂಕಣ ಬರಹ, ಆರ್ಥಿಕ, ಅಧ್ಯಾತ್ನ, ಆರೋಗ್ಯ, ಇತಿಹಾಸ, ಕಥಾ ಸಂಕಲನ, ಕಲೆ, ಕಾದಂಬರಿ, ಸಾಹಿತ್ಯ, ದಾಂಪತ್ಯ, ನಾಟಕ, ಪ್ರವಾಸ... ಹೀಗೆ ಹಲವು ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಲೇಖಕ ಮತ್ತು ಪುಸ್ತಕದ ಕಿರು ಪರಿಚಯವನ್ನು ನೀಡಲಾಗಿದೆ.

ಪ್ರೊ.ಜಿ.ವೆಂಕಟಸುಬ್ಬಯ್ಯ, ಶರತ್‌ ಎಚ್‌.ಕೆ, ದೊಡ್ಡರಂಗೇಗೌಡ, ಲಕ್ಷ್ಮಣರಾವ್‌ ಜೆ.ಆರ್, ಆನಂದ್‌ ಎನ್‌.ಎಲ್., ಗುಂಡಪ್ಪ ದೇವಿಕೇರೆ ಹೀಗೆ ಹಲವರ ಪುಸ್ತಕಗಳು ಇಲ್ಲಿ ಲಭ್ಯ. ಆದರೆ ಸಾಹಿತ್ಯ ಲೋಕದಲ್ಲಿ ತಮ್ಮ ಹೆಸರು ಮತ್ತು ಹೆಸರಿಗೂ ಮೊದಲಿನ ಅಕ್ಷರಗಳ ಮೂಲಕವೇ ಗುರುತಿಸಿಕೊಳ್ಳುವ ನಮ್ಮ ಸಾಹಿತಿಗಳಲ್ಲಿ ಕೆಲವರ ಹೆಸರು ತಪ್ಪಾಗಿ ಪ್ರಕಟವಾಗಿದೆ. ನಿಘಂಟು ತಜ್ಞ ವೆಂಕಟಸುಬ್ಬಯ್ಯ ಅವರ ಹೆಸರು ವೆಂಕಟಸುಬ್ಬಯ್ಯ ಜಿ ಎಂದಿದೆ.

ಯಾವ ಪುಸ್ತಕ ಬೇಕು ಎಂಬುದನ್ನು ಆಯ್ಕೆ ಮಾಡಿದ ತಕ್ಷಣ ಪುಸ್ತಕದ ಕಿರು ಪರಿಚಯ ಬರುತ್ತದೆ. ಇಷ್ಟವಾದರೆ ಕೊಂಡುಕೊಳ್ಳಬಹುದು. ಇಲ್ಲಿಯವರೆಗೆ ಈ ಆ್ಯಪನ್ನು ಐವತ್ತು ಸಾವಿರ ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಈ ಆ್ಯಪ್‌ಗೆ ಜನರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಇಂತಹ ಅವಕಾಶ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT