ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಐಎಲ್‌ ಬೋನಸ್‌ ಷೇರು

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ಮುಂಬೈ: ಪ್ರತಿ ಷೇರಿಗೆ ಒಂದು ಬೋನಸ್‌(1:1) ಷೇರು ನೀಡಲು ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ನಿರ್ಧರಿಸಿದೆ. ಎಂಟು ವರ್ಷಗಳ ನಂತರ ಈ ಘೋಷಣೆ ಮಾಡಲಾಗಿದೆ. ಪ್ರತಿ ಷೇರಿಗೆ ₹ 13ರಂತೆ ಲಾಭಾಂಶ ನೀಡಲೂ ಸಂಸ್ಥೆಯ ನಿರ್ದೇಶಕ ಮಂಡಳಿ ತೀರ್ಮಾನಿಸಿದೆ. ಶುಕ್ರವಾರ ಇಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.

‘ಸಂಸ್ಥೆಯ ಷೇರುದಾರರ ಹಣವು ಕಳೆದ 40 ವರ್ಷಗಳಲ್ಲಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತ ಬಂದಿದೆ. ಇದು ದೇಶದ ಅತಿದೊಡ್ಡ ಬೋನಸ್‌ ಷೇರು ಆಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಮುಕೇಶ್‌ ಅಂಬಾನಿ ಹೇಳಿದರು.

ಸಂಸ್ಥೆಯ 40 ವರ್ಷಗಳ ಇತಿಹಾಸದಲ್ಲಿ ಇದು ನಾಲ್ಕನೇ ಬೋನಸ್‌ ಷೇರು ಆಗಿದೆ. ₹ 10ರ ಬೋನಸ್‌ ಷೇರು ಪೂರ್ಣಪಾವತಿ (fully paid-up) ಷೇರು ಆಗಿರುವುದರಿಂದ ಷೇರುದಾರರು ಸಂಸ್ಥೆಗೆ ಯಾವುದೇ ಹಣ ಪಾವತಿಸಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT