ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲ್ ಆರ್ಮ್‌ಸ್ಟ್ರಾಂಗ್ ಬ್ಯಾಗ್‌ ₹11.58ಕೋಟಿಗೆ ಹರಾಜು

Last Updated 21 ಜುಲೈ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : 1969ರಲ್ಲಿ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಟ್ಟಿದ್ದ ನೀಲ್ ಆರ್ಮ್‌ಸ್ಟ್ರಾಂಗ್ ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ಬ್ಯಾಗ್‌ ಭಾರಿ ಮೊತ್ತಕ್ಕೆ ಹರಾಜಾಗಿದೆ.  ಹರಾಜು ಪ್ರಕ್ರಿಯೆ ನಡೆದ ಐದು ನಿಮಿಷಗಳಲ್ಲಿಯೇ ಜೋಯಿ ಡನ್ನಿಂಗ್‌ ಎಂಬುವವರು 11.58 ಕೋಟಿ ರೂಪಾಯಿಗೆ (1.8 ಮಿಲಿಯನ್ ಡಾಲರ್ ) ಕೊಟ್ಟು ಬ್ಯಾಗ್‌ ಖರೀದಿಸಿದ್ದಾರೆ ಎಂದು  ಇಲ್ಲಿಯ ಮಾಧ್ಯಮ ವರದಿ ಮಾಡಿದೆ.

ನೀಲ್‌ ಆರ್ಮ್‌ಸ್ಟ್ರಾಂಗ್‌ ಚಂದ್ರನ ಮೇಲೆ ಹೋಗಿ ಜುಲೈ 20ರಂದು 48 ವರ್ಷ ಕಳೆದಿವೆ. ಈ ವರ್ಷಾಚರಣೆಯ ಅಂಗವಾಗಿ ಅವರ ನೆನಪಿನಲ್ಲಿ ಬ್ಯಾಗ್ ಹರಾಜಿಗೆ ಇಡಲಾಗಿತ್ತು.

ಬ್ಯಾಗನ್ನು ಹಿಂದೊಮ್ಮೆ ನಾಸಾಗೆ ಕಳಿಸಿ ಪರೀಕ್ಷಿಸಲಾಗಿತ್ತು. ಚಂದ್ರನ ಅಂಗಳದಲ್ಲಿದ್ದ ಧೂಳು, ಬ್ಯಾಗ್ ಮೇಲಾದ ಕಲೆಗಳು ಎಲ್ಲವೂ ಹಾಗೇ ಇರುವುದಾಗಿ ನಾಸಾ ದೃಢಪಡಿಸಿದೆ.

ಈ ಬ್ಯಾಗ್‌ 15. 43ಕೋಟಿ ರೂಪಾಯಿಗಳಿಗೆ (2.4 ಮಿಲಿಯನ್ ಡಾಲರ್) ಹರಾಜು ಆಗಬಹುದು ಎನ್ನುವ ನಿರೀಕ್ಷೆ ಇತ್ತು. ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ  ಮಾರಾಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಈ ಬ್ಯಾಗ್‌ ಅನ್ನು ಮೂರು ಬಾರಿ ಹರಾಜಿಗೆ ಇಡಲಾಗಿದೆ. 2014ರಲ್ಲಿ ಮೊದಲ ಬಾರಿಗೆ ಹರಾಜು ನಡೆದಿತ್ತು. ಅಲ್ಲಿ ಕಡಿಮೆ ಮೊತ್ತವನ್ನು ಕೂಗಿದ್ದರಿಂದ, 2015ರಲ್ಲಿ ಮತ್ತೊಮ್ಮೆ ಹರಾಜು ಪ್ರಕ್ರಿಯೆ ನಡೆದಿತ್ತು. ಆಗ ವಕೀಲನೊಬ್ಬ ₹64ಸಾವಿರಕ್ಕೆ (995 ಡಾಲರ್) ನೀಡಲು ಒಪ್ಪಿಕೊಂಡಿದ್ದ. ಕಡಿಮೆ ಮೊತ್ತ ಇದಾಗಿದ್ದರಿಂದ ಈಗ ಫೋನ್ ಮೂಲಕ ಬಿಡ್ಡಿಂಗ್ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT