ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಮೊತ್ತದ ದಂಡ ವಿಧಿಸಲು ಸೂಚನೆ

Last Updated 22 ಜುಲೈ 2017, 10:02 IST
ಅಕ್ಷರ ಗಾತ್ರ

ಮಂಗಳೂರು: ರಸ್ತೆ ಬದಿ ಖಾಸಗಿಯ ವರು ಅನಧಿಕೃತವಾಗಿ ಅಳವಡಿಸಿರುವ ‘ನೋ ಪಾರ್ಕಿಂಗ್‌’ ಸೂಚನಾ ಫಲಕ, ತಡೆಬೇಲಿ, ಸರಪಳಿ ಹಾಕುವುದರ ವಿರುದ್ಧ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕು. ನಗರದ ಪಿವಿಎಸ್‌ನಿಂದ ಸ್ಟೇಟ್‌ ಬ್ಯಾಂಕ್‌ವರೆಗೆ ಅನಧಿಕೃತ ವಾಹನ ನಿಲುಗಡೆ, ಮೊಬೈಲ್‌ ಕ್ಯಾಂ ಟೀನ್‌ ಮತ್ತು ಗೂಡಂಗಡಿಗಳ ವಿರುದ್ಧ  ಇದೇ 24ರಿಂದ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಮೇಯರ್ ಕವಿತಾ ಸನಿಲ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ನಗರದ ವಾಹನ ಸಂಚಾರ ಅಭಿವೃದ್ಧಿ ಪಡಿಸುವ ಕುರಿತು ಮಹಾನಗರ ಪಾಲಿಕೆ ಮಂಗಳಾ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಾಲಿಕೆ ಹೆಚ್ಚು ಮುತುವರ್ಜಿ ವಹಿಸು ತ್ತಿದೆ. ಪೊಲೀಸ್‌ ಅಧಿಕಾರಿಗಳಿಂದ ಸೂಕ್ತ ವರದಿ ತರಿಸಿಕೊಂಡು ಇದಕ್ಕೆ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಅವರು ತಿಳಿಸಿದರು.

ರಸ್ತೆ ಬದಿಯಲ್ಲಿ ಮೊಬೈಲ್‌ ಕ್ಯಾಂಟೀ ನ್‌ಗೆ ನಿಲುಗಡೆ ಮಾಡಿರುವ ವಾಹನಗಳ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು. ನಗರದಲ್ಲಿ ಇಂತಹ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಲಾಲ್‌ಬಾಗ್‌ ವೃತ್ತದಲ್ಲಿ ಸಣ್ಣ ಮಕ್ಕಳನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮಕ್ಕಳು ನಿದ್ರಾ ಸ್ಥಿತಿಯಲ್ಲಿಯೇ ಇರುತ್ತವೆ. ಆ ಮಕ್ಕಳಿಗೆ ನಿದ್ದೆಯ ಔಷಧ ನೀಡುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ. ಇದನ್ನು ಕೂಡಲೇ ಪರಿಶೀಲಿಸಿ. ಕೆಲವು ಗೂಡಂಗಡಿಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಅಂತಹ ಅಂಗಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

ಸಂಚಾರ ಸಮಸ್ಯೆ ಕುರಿತು ಮಹಾ ನಗರ ಪಾಲಿಕೆ ಕರೆಯುವ ಸಭೆಗೆ ಸಂ ಚಾರ ವಿಭಾಗದ ಹಿರಿಯ ಪೊಲೀಸ್‌ ಅಧಿಕಾರಿಗಳು ಬಾರದೇ ಇದ್ದರೆ ಸಮಸ್ಯೆ ಹೇಗೆ ಇತ್ಯರ್ಥ ಆಗುತ್ತದೆ? ಬೇಕಾಬಿಟ್ಟಿ ಸಭೆ ನಡೆಸುತ್ತಿರುವುದರಿಂದ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಿಕೆ ಸದಸ್ಯರು ಬರುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳ ಕುರಿತು ಕರೆಯವ ಸಭೆಗೆ ಕಡ್ಡಾಯವಾಗಿ ಅಧಿಕಾರಿಗಳು ಹಾಜರು ಇರಬೇಕು. ರಸ್ತೆ ಯುಬ್ಬುಗಳಿಗೆ ಬಣ್ಣ ಬಳೆಯುವ ಕೆಲಸ ಆಗಬೇಕು. ಬಣ್ಣ ಬಳಿಯದೇ ಇರುವುದ ರಿಂದ ಹಲವಾರು ಅಪಘಾತಗಳು ಆಗು ತ್ತಿವೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೂಪಾ ಡಿ. ಬಂಗೇರ ಸಭೆಯಲ್ಲಿ ಆಗ್ರಹಿಸಿದರು.

ಶಾಲೆಗಳ ಆರಂಭ ಹಾಗೂ ಬಿಡು ವಿನ ವೇಳೆಯಲ್ಲಿ ತೀವ್ರವಾದ ಸಂಚಾರ ದಟ್ಟಣೆ ಇರುತ್ತದೆ. ಇದನ್ನು ಮನಗಂಡು ಸರ್ಕಾರ ವೇಳಾಪಟ್ಟಿ ಬದಲಾವಣೆಗೆ ಮುಂದಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ತಡೆಯಬೇಕು. ಜನರ ಅನುಕೂಲಕ್ಕೆ ರಸ್ತೆ ವಿಸ್ತರಣೆ ಮಾಡುವ ನಾವು ಜನರಿಗೆ ಅನುಕೂಲ ಕಲ್ಪಿಸಬೇಕು. ಪಾರ್ಕಿಂಗ್‌, ಪಾರ್ಕಿಂಗ್‌ ವಲಯ ಸ್ಥಾಪನೆ ಮಾಡುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ ಹೇಳಿದರು. 

ಸಂಚಾರ ಸಮಸ್ಯೆಗೆ ಅಗತ್ಯವಾಗಿ ಬೇಕಾಗಿರುವ ಅನುದಾನ ಇಡಲಾಗಿದೆ. ಈಗಾಗಲೇ ನಗರದಲ್ಲಿ 20 ವೃತ್ತಗಳ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. 25 ವರ್ಷಗಳ ಯೋಜನೆಯನ್ನು ಸಿದ್ಧಪ ಡಿಸಲಾಗುವುದು ಎಂದು ಪಾಲಿಕೆಯ ಸಚೇತಕ ಶಶಿಧರ ಹೆಗ್ಡೆ ಹೇಳಿದರು. ಪಾಲಿಕೆಯ ಸದಸ್ಯರಾದ ರಜೀಯಾ, ದಯಾನಂದ, ರಾಧಾಕೃಷ್ಣ, ಆಶಾ ಡಿಸಿಲ್ವಾ ಸೇರಿದಂತೆ ಹಲವರು ಅವರ ವಾರ್ಡ್‌ಗಳಲ್ಲಿ ಇರುವಂತಹ ಸಂಚಾರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಮೇಯರ್‌ ಅವರ ಗಮನ ಸೆಳೆದರು.

ಗೂಡಂಗಡಿಗಳು ಮತ್ತು ಮೊಬೈಲ್‌ ಕ್ಯಾಂಟೀನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು, ಖಾಸಗಿ ಬಸ್‌ಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿರುವ ಕುರಿತು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಂಚಾರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ದೂರು ಸಲಹಾ ಸಮಿತಿ ರಚನೆ ಮಾಡಿದ್ದು, ಸಂ ಚಾರ ಕಾನೂನುಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ದಂಡ ಹಾಕಲಾಗುತ್ತಿದೆ.

ಶಾಲೆ ಬಿಡುವ ವೇಳೆ ಮಕ್ಕಳ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಬ್ಬು ರಸ್ತೆಗ ಳನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡ ಬೇಕು. ಮಣ್ಣು ತುಂಬಿಕೊಂಡು ಸಾಗುವ ಲಾರಿಗಳ ವಿರುದ್ಧವೂ ಕಠಿಣ ಕ್ರಮ ಜರು ಗಿಸಲಾಗುತ್ತಿದೆ ಎಂದು ಇನ್‌ಸ್ಪೆಕ್ಟರ್‌ ಗಳಾದ ಮಂಜುನಾಥ ಹಾಗೂ ಮೋ ಹನ್‌ ಕೊಟ್ಟಾರಿ ಸಭೆಗೆ ಮಾಹಿತಿ ನೀಡಿದರು. ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್‌ ಸೇರಿದಂತೆ ವಿವಿಧ ಅಧಿಕಾರಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT