ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಪದ ಸಾಹಿತ್ಯ ಜೀವನದ ಅನುಭವ’

Last Updated 22 ಜುಲೈ 2017, 10:48 IST
ಅಕ್ಷರ ಗಾತ್ರ

ಕೋಡಿಹಳ್ಳಿ (ಕನಕಪುರ): ಜನಪದ ಸಾಹಿತ್ಯ  ಗ್ರಾಮೀಣ ಜನತೆಯ ಜೀವನದ ಅನುಭವವಾಗಿವೆ ಎಂದು ಕೋಡಿಹಳ್ಳಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಎನ್‌. ಎಸ್‌. ಅನ್ನಪೂರ್ಣ ಸೋಮಶೇಖರ್‌ ಹೇಳಿದರು. ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಅರಕೆರೆ ಗ್ರಾಮ ಪಂಚಾಯಿತಿ ಆವರ ಣದಲ್ಲಿ ಪರಿವರ್ತನ ಟ್ರಸ್ಟ್‌ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾನಪದ ಗಾಯನೋತ್ಸವ ಉದ್ಘಾಟಿಸಿ ಮಾತನಾಡಿದರು.

ಸಿನಿಮಾ, ಟಿವಿ ಬರುವುದಕ್ಕೂ ಮುಂಚಿತವಾಗಿ ಗ್ರಾಮೀಣ ಪ್ರದೇಶದಲ್ಲಿ ಜನಪದ ಗೀತೆಗಳೇ ಜನರ ಮನರಂಜನೆಯಾಗಿದ್ದವು. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ, ರಾಗಿ ಬೀಸುವಾಗ, ಮದುವೆ ಮನೆಗಳಲ್ಲಿ ಜನಪದ ಗೀತೆಗಳು ಮೊಳಗುತ್ತಿದ್ದವು ಎಂದರು.

ಅರಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಮಯ್ಯ ಮಾತನಾಡಿ, ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಇನ್ನೂ ಪ್ರವರ್ಧಮಾನಕ್ಕೆ ಬರಬೇಕಾದರೆ ಪುರು ಷರು ಅದಕ್ಕೆ ಮುಕ್ತ ಅವಕಾಶ ಕಲ್ಪಿಸಿ ಸಂಪೂರ್ಣ ಸಹಕಾರ ನೀಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾ ಯಿತಿ ಅಧ್ಯಕ್ಷೆ ಸರೋಜಮ್ಮ ಮಾತನಾಡಿ ‘ಈ ನೆಲದ ಸಂಸ್ಕೃತಿ ಮತ್ತು ನಾವು ಆಚರಿಸಿಕೊಂಡು ಬಂದಿರುವ ಆಚಾರ ವಿಚಾರ ಕಾಪಾಡಿಕೊಳ್ಳಬೇಕಿದೆ. ಮಹಿಳೆಯರು ಗೌರವಯುತ ಜೀವನ ನಡೆಸಲು ಮನೆಗೊಂದು ಶೌಚಾಲಯ ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳ ಬೇಕು’ ಎಂದು ಹೇಳಿದರು.

ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ರೇಣುಕೇಗೌಡ, ಸದಸ್ಯೆ ಶಿವನಮ್ಮ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಧನಲಕ್ಷ್ಮಿ, ಶಿಕ್ಷಕಿಯರಾದ ತ್ರಿವೇಣಿ, ರಶ್ಮಿ, ಟ್ರಸ್ಟ್‌ನ ಅಧ್ಯಕ್ಷ ಶಿವವೆಂಕಟಯ್ಯ, ಜಾನಪದ ಕಲಾವಿದ ಗೋವಿಂದರಾಜು ವೇದಿಕೆಯಲ್ಲಿದ್ದರು. ಗಾಯಕರಾದ ರಾಜು, ಮಹೇಶ್, ಶಿವವೆಂಕಟಯ್ಯ, ಸ್ವಾಮಿ ವಿಜಯ್, ಗೋವಿಂದರಾಜು, ಜನಪದ ಗಾಯನೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT