ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತು– ನಿಮಗೆಷ್ಟು ಗೊತ್ತು?

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

1. ಅತ್ಯಂತ ವಿಸ್ಮಯದ, ಅಷ್ಟೇ ಅಪರೂಪದ ‘ಬಿಳಿ ಸಿಂಹ’ ಚಿತ್ರ-1 ರಲ್ಲಿದೆ. ಪ್ರಸ್ತುತ ಧರೆಯಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿ ಉಳಿದಿರುವ ಬಿಳೀ ಸಿಂಹಗಳನ್ನು ನೈಸರ್ಗಿಕವಾಗಿ ಈ ಕೆಳಗಿನ ಯಾವ ನೈಸರ್ಗಿಕ ನೆಲೆಯಲ್ಲಿ ನೇರವಾಗಿ ನೋಡಬಹುದು?

ಅ. ಭಾರತದ ಗಿರ್ ವನ್ಯಧಾಮ
ಬ. ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನ
ಕ. ದಕ್ಷಿಣ ಆಫ್ರಿಕದ ಟಿಂಬಾವತೀ ವನ್ಯ ಧಾಮ
ಡ. ಈಕ್ವೆಡಾರ್ ನ ಯಾಸೂನಿ ರಾಷ್ಟ್ರೀಯ ಉದ್ಯಾನ
ಇ. ಯು. ಎಸ್. ಎ ಯ ಎಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನ

2. ಪುರಾತತ್ವ ಮಹತ್ವದ, ಇತಿಹಾಸ ಪ್ರಸಿದ್ಧವಾದ, ವಿಶ್ವ ಪರಂಪರೆಯ ವಾಸ್ತುಶಿಲ್ಪಗಳ ಪಟ್ಟಿಯಲ್ಲಿರುವ, ‘ಸ್ತೂಪ’ವೆಂಬ ವಿಶಿಷ್ಟ ಹೆಸರಿನ ಪುರಾತನ ಬೌದ್ಧ ದೇವಾಲಯವೊಂದು ಚಿತ್ರ-2 ರಲ್ಲಿದೆ. ಈ ಜಗತ್ಪ್ರಸಿದ್ಧ ನಿರ್ಮಿತಿ ಯಾವ ರಾಷ್ಟ್ರದಲ್ಲಿದೆ ?

ಅ. ಜಪಾನ್→ ಬ. ಚೀನಾ→ ಕ. ಥಾಯ್ಲೆಂಟ್‌→ ಡ. ಭಾರತ

3. ಚಿತ್ರ -3 ರಲ್ಲಿರುವ ಸಾಗರ ಜೀವಿ ಜೋಡಿಯನ್ನು ಗಮನಿಸಿ. ಈ ಪ್ರಾಣಿ ಯಾವುದು ಗುರುತಿಸಬಲ್ಲಿರಾ?

ಅ. ಆಕ್ಟೋಪಸ್ ಬ. ಕಟ್ಲ್ ಮೀನು→ ಕ. ಜೆಲ್ಲಿ ಮೀನು ಡ. ಸ್ಕ್ವಿಡ್

4. ಮಣ್ಣಿನಿಂದ ಕೂಡಿದ ಬೆಟ್ಟ-ಗುಡ್ಡ ಪ್ರದೇಶದ ಇಳಿಜಾರು ಮೇಲ್ಮೈ ಅನ್ನು ಮೆಟ್ಟಿಲು ಮೆಟ್ಟಿಲಾಗಿ ಮಾಡಿ ಕೃಷಿಗೆ ಅಣಿಗೊಳಿಸಿರುವ ದೃಶ್ಯ ಚಿತ್ರ-4 ರಲ್ಲಿದೆ. ಈ ವಿಧಾನದಿಂದ ಲಭಿಸುವ ಪ್ರಯೋಜನಗಳು ಏನೇನು?

ಅ. ಮಣ್ಣಿನ ಸವೆತ-ಕೊರೆತಗಳಿಗೆ ತಡೆ→ ಬ. ಭೂ ಸಾರ ಸಂರಕ್ಷಣೆ
ಕ. ಮಳೆ ನೀರಿನ ಗರಿಷ್ಠ ಪ್ರಯೋಜನ ಪ್ರಾಪ್ತಿ→ ಡ. ಬೆಟ್ಟ-ಗುಡ್ಡಗಳ ಕುಸಿತಕ್ಕೆ ತಡೆ

5. ಕೃತಕ ಉಪಗ್ರಹಗಳು ಮತ್ತು ವ್ಯೋಮ ನೌಕೆಗಳನ್ನು ಅಂತರಿಕ್ಷಕ್ಕೆ ತಲುಪಿಸುವ ’ರಾಕೆಟ್’ ಚಿತ್ರ-5 ರಲ್ಲಿದೆ. ವ್ಯೋಮ ಯಾನಕ್ಕೆ ಬೇಕಾದ ರಾಕೆಟ್‌ಗಳನ್ನು ನಿರ್ಮಿಸಿ, ಹಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ‘ಖಾಸಗಿ ವ್ಯೋಮ ಸಂಸ್ಥೆ’ಗಳನ್ನು ಈ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?

ಅ. ಇಸ್ರೋ→ ಬ. ನಾಸಾ→ ಕ. ರಾಸ್ ಕಾಸ್ಮಾಸ್→ ಡ. ವರ್ಜಿನ್ ಗ್ಯಾಲಾಕ್ಟಿಕ್
ಇ. ಜಾಕ್ಸಾ→ ಈ. ಸ್ಪೇಸ್ ಎಕ್ಸ್→ ಉ. ಸಿ ಎನ್ ಎಸ್ ಎ

6. ತಿರುಚಿದ ಈಟಿಯಂತೆ ಬೆಳೆದಿರುವ, ಬೃಹದಾಕಾರದ, ಆಕರ್ಷಕ ಜೋಡಿ ಕೊಂಬನ್ನು ಪಡೆದಿರುವ ಪ್ರಸಿದ್ಧ ಪ್ರಾಣಿಯೊಂದು ಚಿತ್ರ- 6 ರಲ್ಲಿದೆ. ಈ ಪ್ರಾಣಿಯ ಹೆಸರೇನು?

ಅ. ವೈಲ್ಡ್ ಬೀಸ್ಟ್→ ಬ. ಆರಿಕ್ಸ್→ ಕ. ರೈನ್ ಡೀರ್→ ಡ. ಕುಡು

7. ಮನುಷ್ಯರಿಂದಾಗಿ ಆಗಾಗ ಸಾಗರಾವಾರದಲ್ಲಿ ಸಂಭವಿಸುತ್ತಿರುವ, ಕಡಲ ಜೀವಿಗಳಿಗೆ ಮಾರಕವಾಗಿರುವ, ಹಾಗಾಗಿ ಪಾರಿಸರಿಕವಾಗಿ ತುಂಬ ಹಾನಿಕಾರಕವಾಗಿರುವ ವಿದ್ಯಮಾನದ ದೃಶ್ಯವೊಂದು ಚಿತ್ರ-7 ರಲ್ಲಿದೆ. ಈ ದೃಶ್ಯದಲ್ಲಿ ಕಾಣುತ್ತಿರುವ ದುರಂತಕರ ವಿದ್ಯಮಾನ ಯಾವುದು ಗುರುತಿಸಬಲ್ಲಿರಾ ?

ಅ. ಪ್ಲಾಸ್ಟಿಕ್ ಕಸದ ಸೇರ್ಪಡೆ→ಬ. ಕಚ್ಚಾ ತೈಲದ ಸೋರಿಕೆ
ಕ. ಊರ ಹೊಲಸಿನ ಬೆರಕೆ→→ಡ. ಕೃಷಿ ವಿಷಗಳ ಸೇರ್ಪಡೆ

8. ವರ್ಷಾಂತರದಿಂದ ದ್ವೀಪಸ್ತೋಮವೊಂದರಲ್ಲಿ ಜ್ವಾಲಾಮುಖಿಯೊಂದರಿಂದ ನಿತ್ಯ, ನಿರಂತರ ಉಕ್ಕಿ ಹರಿಯುತ್ತಿರುವ ಶಿಲಾಪಾಕದ ದೃಶ್ಯವೊಂದು ಚಿತ್ರ-8 ರಲ್ಲಿದೆ. ಈ ರುದ್ರ ರಮ್ಯ ನಿತ್ಯ ದೃಶ್ಯವನ್ನು ಎಲ್ಲಿ ನೋಡಬಹುದು?

ಅ. ಅಂಡಮಾನ್ ದ್ವೀಪಗಳು→ ಬ. ಜಪಾನ್ ದ್ವೀಪ ಸ್ತೋಮ
ಕ. ಗ್ಯಾಲಪಗಾಸ್ ದ್ವೀಪಗಳು→ ಡ. ಹವಾಯ್ ದ್ವೀಪಗಳು

9. ಕಡಲಲ್ಲಿ ತೇಲುತ್ತಿರುವ ಬೃಹದಾಕಾರದ ‘ಐಸ್ ಬರ್ಗ್’ನ ದೃಶ್ಯ ಚಿತ್ರ-9 ರಲ್ಲಿದೆ. ಇಂತಹ ಅತ್ಯಂತ ಬೃಹತ್ ಐಸ್ ಬರ್ಗ್‌ಗಳು ಯಾವ ಸಾಗರ ಪ್ರದೇಶದಲ್ಲಿ ಗರಿಷ್ಠ?

ಅ. ದಕ್ಷಿಣ ಮಹಾ ಸಾಗರ→ ಬ. ಅಟ್ಲಾಂಟಿಕ್ ಮಹಾ ಸಾಗರ
ಕ. ಪೆಸಿಫಿಕ್ ಮಹಾ ಸಾಗರ→ ಡ. ಹಿಂದೂ ಮಹಾ ಸಾಗರ
ಇ. ಆರ್ಕ್ಟಿಕ್ ಮಹಾ ಸಾಗರ

10. ಸಸ್ಯಗಳ ಎಲೆಗಳದು ಸಾಮಾನ್ಯವಾಗಿ ಹಸಿರು ಬಣ್ಣವೇ ಆದರೂ, ಕೆಲವಾರು ಹರಿದ್ರೇತರ ವರ್ಣಗಳೂ ಎಲೆಗಳಲ್ಲಿ ಗೋಚರಿಸುತ್ತವೆ ( ಚಿತ್ರ-10 ) - ಹೌದಲ್ಲ? ಎಲೆಗಳಲ್ಲಿ ಕಾಣುವ ಈ ಕೆಳಕಂಡ ಬಣ್ಣಗಳನ್ನೂ, ಅವಕ್ಕೆ ಕಾರಣವಾದ ವರ್ಣದ್ರವ್ಯಗಳನ್ನೂ ಸರಿಹೊಂದಿಸಿ :

1. ಹಸಿರು →ಅ. ಕೆರೊಟಿನಾಯಿಡ್→

2. ಹಳದಿ →ಬ. ಕ್ಲೋರೋಫಿಲ್
3. ಕೆಂಪು →ಕ. ಆಂಥೋಸಯಾನಿನ್→

4. ಕಿತ್ತಳೆ→5. ನೇರಿಳೆ

11. ವರ್ಷಾಂತರಗಳ ಕಾಲ ನಿರಂತರ ಪಯಣ ನಡೆಸಿ, "ಶನಿ ಗ್ರಹ"ವನ್ನು ಸಮೀಪಿಸಿ, ಆ ಗ್ರಹದ ಹಾಗೂ ಅದರ ಚಂದ್ರರ ಮತ್ತು ಅದರ ಉಂಗುರಗಳ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿರುವ ಪ್ರಸಿದ್ಧ ವ್ಯೋಮನೌಕೆ ಚಿತ್ರ-11ರಲ್ಲಿದೆ. ಯಾವುದು ಈ ನೌಕೆ?

ಅ. ಗೆಲಿಲಿಯೋ→ ಬ. ಜ್ಯೂನೋ→ ಕ. ಮಾವೆನ್
ಡ. ಕ್ಯಾಸಿನೀ ಮಿಷನ್→ ಇ. ನ್ಯೂ ಹೊರೈಜ಼ನ್ಸ್

12. ಅಗ್ನಿ ಶಿಲೆಗಳ ಒಂದು ಪ್ರಧಾನ ಖನಿಜ ಘಟಕವಾದ 'ಸಿಲಿಕಾನ್ ಡೈ ಆಕ್ಸೈಡ್’ ನ ಸ್ಫಟಿಕ ರೂಪ ಚಿತ್ರ-12 ರಲ್ಲಿದೆ. ಈ ಖನಿಜ ಯಾವುದು?

ಅ. ಅಭ್ರಕ→ ಬ. ಕ್ವಾರ್ಟ್ಜ್→ ಕ. ಫೆಲ್ಡ್ ಸ್ಪಾರ್
ಡ. ಪೆರಿಡಾಟ್→ ಇ. ಆಲಿವೀನ್

13. ಪ್ರಾಣಿ ಸಾಮ್ರಾಜ್ಯದಲ್ಲಿ ನಾವೂ ಸೇರಿರುವ ’ಪ್ರೈಮೇಟ್’ ವರ್ಗದ ಒಂದು ಪ್ರಸಿದ್ಧ ಪ್ರಾಣಿ ಚಿತ್ರ-13 ರಲ್ಲಿದೆ. ವೃಷ್ಟಿ ವನ ವಾಸಿಯಾದ ಈ ನಮ್ಮ ಸಂಬಂಧಿಯ ಹೆಸರೇನು - ಗುರುತಿಸಬಲ್ಲಿರಾ?

ಅ. ಎಂಪರರ್ ಟಮರಿನ್→ ಬ. ಸಿಫಾಕಾ→ ಕ. ಉವಕಾರೀ
ಡ. ಮ್ಯಾಂಡ್ರಿಲ್→ ಇ. ಲೀಮರ್

14. ಮನುಷ್ಯರ ರಕ್ತನಾಳದಲ್ಲಿ ನೆತ್ತರಿನಲ್ಲಿ ಬೆರೆತು ಪ್ರವಹಿಸುವ ’ರಕ್ತ ಕಣ’ಗಳಒಂದು ಬಗೆ ಚಿತ್ರ-14 ರಲ್ಲಿದೆ. ಮಾನವ ಶರೀರದ ಈ ಕಣಗಳಲ್ಲಿ ಯಾವುದು ರಕ್ತಕಣ ಅಲ್ಲ - ಗುರುತಿಸಿ:

ಅ. ಲ್ಯೂಕೋಸೈಟ್→ ಬ. ಲಿಂಫೋಸೈಟ್→ಕ. ಥೈಮೋಸೈಟ್→

ಡ. ಥ್ರಾಂಬೋಸೈಟ್→ಇ. ಎರಿಥ್ರೋಸೈಟ್

ಉತ್ತರಗಳು:

1. ಕ. ಟಿಂಬಾವತೀ ವನ್ಯಧಾಮ→2. ಡ. ಭಾರತ

3. ಕ. ಜೆಲ್ಲಿ ಮೀನು→4. "ಡ" ಬಿಟ್ಟು ಇನ್ನೆಲ್ಲ

5. ಡ - ವರ್ಜಿನ್ ಗ್ಯಾಲಾಕ್ಟಿಕ್ ಮತ್ತು ಈ - ಸ್ಪೇಸ್ ಎಕ್ಸ್→6. ಡ. ಕುಡು

7. ಬ. ಕಚ್ಚಾ ತೈಲದ ಸೋರಿಕೆ→8. ಡ. ಹವಾಯ್ ದ್ವೀಪಗಳು

9. ಅ. ದಕ್ಷಿಣ ಸಾಗರ 10. 1 - ಬ ; 2 ಮತ್ತು 4 - ಅ ; 3 ಮತ್ತು 5 - ಕ

11. ಡ. ಕ್ಯಾಸಿನೀ ಮಿಷನ್→12. ಬ. ಕ್ವಾರ್ಟ್ಜ್

13. ಅ. ಎಂಪರರ್ ಟಮರಿನ್→14. ಕ. ಥೈಮೋಸೈಟ್

ಎನ್. ವಾಸುದೇವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT